ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಇಲ್ಲಿಯ ದ್ವಿತೀಯ ವರ್ಷದ ಜೀವವಿಜ್ಞಾನ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಬಿದಿರು ದಿನವನ್ನು ಆಚರಿಸಿದರು. World Bamboo Day.
ವಿಶ್ವ ಬಿದಿರು ದಿನದ ಅಂಗವಾಗಿ ದ್ವಿತೀಯ ವರ್ಷದ ವಿಜ್ಞಾನ ವಿದ್ಯಾರ್ಥಿಗಳಾದ ನಮನ್ಹಾಗು ನಾಝಿಯಾರವರು ವಿಶ್ವ ಬಿದಿರು ದಿನ ಶುರುವಾದ ಬಗೆ, ಬಿದಿರು ಸಂರಕ್ಷಣೆ ಹಾಗು ಮಹತ್ವವನ್ನು ತಿಳಿಸಿಕೊಟ್ಟರು. ನಂತರ ಯಶ್ಮಿ ಮತ್ತು ತಂಡದವರು ರಸಪ್ರಶ್ನೆ ಕಾರ್ಯಕ್ರಮದ ಮೂಲಕ ಬಿದಿರಿಗೆ ಸಂಬಂಧಿಸಿದಂತೆ ಅನೇಕ ಕೌತಕ ವಿಷಯಗಳನ್ನು ತಿಳಿಸಿಕೊಟ್ಟರು.

ಕಾರ್ಯಕ್ರಮವು ತೃತೀಯ ವಿಜ್ಞಾನ ವಿದ್ಯಾರ್ಥಿನಿ ಪ್ರಗತಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ಸುಮಯ್ಯ ಶಿಫಾನರವರು ಸ್ವಾಗತ ಮಾಡಿದರೆ ರಕ್ಷಿತಾರವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವು ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಸಿದ್ದರಾಜು M N ಮತ್ತು ಡಾ. ಕಾರುಣ್ಯರವರ ಮಾರ್ಗದರ್ಶನದಲ್ಲಿ ನೆರವೇರಿತು.