ಮಂಗಳೂರು: ಶಬ್ದುಲಿಂ ಎನ್ನುವ ವಿಶಿಷ್ಠವಾದ ಕಾರ್ಯಕ್ರಮ ಕೊಂಕಣಿ ಭಾಷಾ ಮಂಡಳ ಕರ್ನಾಟಕ ಇದರ ಪರವಾಗಿ ವಿದ್ಯಾರ್ಥಿಗಳಿಗೆ ಅದರ ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ ನಡೆಸಿಕೊಟ್ಟರು.

ಗೋವಾದಲ್ಲಿ, ಕರ್ನಾಟಕದಲ್ಲಿ,ಕೇರಳದಲ್ಲಿ ವಿವಿಧ ಜಾತಿ,ಮತ ಪಂತಗಳ ಜನರು ಕೊಂಕಣಿ ಮಾತನಾಡುತ್ತಿದ್ದು ಅವರವರ ಪ್ರದೇಶದಲ್ಲಿ ಒಂದೇ ವಸ್ತುವಿಗೆ ಬೇರೆಬೇರೆ ಹೆಸರುಗಳಿಂದ ಕರೆಯುತ್ತಾರೆ. ಮೂಲ ಅರ್ಥ ಆಂಗ್ಲ ಭಾಷೆಯಲ್ಲಿ ಓದಿ ಅದರ ಇತರ ಕೊಂಕಣಿ ಪ್ರಕಾರಗಳು ಇಲ್ಲಿ ಪ್ರಸ್ತುತ ಪಡಿಸಲಾಯಿತು. ಉದಾಹರಣೆಗೆ ಮೀನು ಮಂಗಳೂರು ಕ್ರೈಸ್ತ ಜನರು ಮಾಸ್ಳಿ,ಕುಡುಮಿ ಮಹಳಿ,ಜಿಎಸ್‌ಬಿ ಜಳ್ಕೆಂ, ಗೋವಾದಲ್ಲಿ ನುಸ್ತೆಂ ಅನ್ನುತ್ತಾರೆ. ಕ್ರೈಸ್ತ ಜನರು ಹೋಗುವವರಿಗೆ 'ಗೆಲೊ' ಅನ್ನುತ್ತಾರೆ ಜಿಎಸ್‌ಬಿ' 'ಚಮ್ಕಲೊ' ಅನ್ನುತ್ತಾರೆ. ಮತ್ತು "ಗೆಲೊ" ಜಿಎಸ‌್‌ಬಿಗಳಿಗೆ ' ಸತ್ತ' ಎಂದರ್ಥ ಆಗುತ್ತದೆ.

ಈ ಯಶಸ್ವಿಯಾಗಿ ನಡೆದ ಕಾರ್ಯಕ್ರಮ ಗೋವಾದ ಅಕಾಡೆಮಿ ಅಧ್ಯಕ್ಷ ವಸಂತ ಸಾವಂತ್ ,ಸಂಶೋಧನಾ ಸಹಾಯಕ ದತ್ತ ನಾಯ್ಕ್ ,ಕಾರ್ಯದರ್ಶಿ ನಗರಸೇಕರ್,ಎಂಇಎಸ್ ಕಾಲೇಜು ಉಪನ್ಯಾಸಕ ಸತ್ಯವಾನ್ ನಾಯ್ಕ್, ಕೊಂಕಣಿ ಭಾಷೆ ಸಂಘಟಕ ವಿಶಾಲ್ ಕೊಡಿಯಾಲ್, ಕೆಬಿಎಮ್‌ಕೆ ಅಧ್ಯಕ್ಷ ಕೆ ವಸಂತ ರಾವ್  ನಡೆಸಿಕೊಟ್ಟರು.

ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಇದರ ಕೊಂಕಣಿ ವಿಭಾಗ ಮುಖ್ಯಸ್ಥರಾದ ಪ್ಲೊರಾ ಕಾಸ್ತೆಲಿನೊ, ಅಲ್ಲಿನ ಕೊಂಕಣಿ ಸಂಘದ ವಿದ್ಯಾರ್ಥಿ ಪದಾಧಿಕಾರಿಗಳು ಸಹಕರಿಸಿದರು.

ಸುಮಾರು ಇನ್ನೂರು ವಿದ್ಯಾರ್ಥಿಗಳು ಕರ್ನಾಟಕ, ಗೋವಾದಿಂದ ಭಾಗವಹಿಸಿ ಅಯೋಜಕರು ವಿಜೇತರಿಗೆ ನೀಡಿದ ಸಿಹಿ ಸವಿದರು.