ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ, ಅಕಾಡೆಮಿ ಸಭಾಂಗಣದಲ್ಲಿ ಮೇ 03, 2025ರಂದು ʼಕಾವ್ಯಾಂ ವ್ಹಾಳೊ-2ʼ ಶೀರ್ಷಿಕೆಯಡಿ ಕವಿಗೋಷ್ಟಿಯನ್ನು ಹಮ್ಮಿಕೊಂಡಿತ್ತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ವಹಿಸಿ, ನೆರೆದಿರುವ ಎಲ್ಲಾ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಹಿರಿಯ ಲೇಖಕಿ ಮತ್ತು ಕೊಂಕಣಿ ಕಾರ್ಯಕರ್ತರಾದ ಮರೋಳಿ ಸಬೀತಾ ಕಾಮತ್‌ ರವರನ್ನು ಸನ್ಮಾನಿಸಲಾಯಿತು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಶಿಕ್ಷಕ ಹಾಗೂ ಕೊಂಕಣಿ ಕಾರ್ಯಕರ್ತರಾದ  ಬಿ.ಪುಂಡಲೀಕ ಮರಾಠೆ, ಶಿರ್ವಾರವರು ಸನ್ಮಾನಿತರನ್ನು ಸನ್ಮಾನಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪ್ರಮುಖ ಭಾಷಣಕಾರರಾಗಿ ಖ್ಯಾತ ಕವಿ  ಆ್ಯಂಡ್ರು ಎಲ್ ಡಿಕುನ್ಹಾರವರು ಕವಿತೆಗಳ ಬಗ್ಗೆ ಉಪನ್ಯಾಸವನ್ನು ನೀಡಿದರು. 

ವಿಲ್ಪ್ರೆಡ್ ಲೋಬೊರವರು ಕವಿಗೋಷ್ಟಿಯನ್ನು ನಡೆಸಿದರು. ಸ್ಟೀವನ್ ಕ್ವಾಡ್ರಸ್, ಕು. ರಾಧಿಕಾ ಪೈ,ಪ್ರಭಾ ರೇಗೊ, ರೇಮಂಡ್ ಡಿಕುನ್ಹಾ, ವಿನ್ಸೆಂಟ್ ಪಿಂಟೊ, ಅಂಜೆಲೊರ್, ಕೃತಿಕಾ ಕಾಮತ್, ರೊನ್ ಮಾಯ್ಕಲ್ ವಾಸ್,  ನೆಲ್ಲು ಪೆರ್ಮನ್ನೂರು, ಜಯಶ್ರೀ ಶೆಣೈ,  ಆಲ್ವಿನ್ ದಾಂತಿ, ಸ್ಲ್ಯಾನಿಸ್ಲವ್ಸ್ ಡಿಸೋಜ ಮುಂತಾದವರು ತಮ್ಮ ಕವಿತೆಗಳನ್ನು ವಾಚಿಸಿದರು. 

ಅಕಾಡೆಮಿ ಸದಸ್ಯರಾದ  ಸಮರ್ಥ್ ಭಟ್ ರವರು ಧನ್ಯವಾದ ಸಮರ್ಪಿಸಿದರು. ಅಕಾಡೆಮಿ ಸದಸ್ಯರಾದ ನವೀನ್‌ ಲೋಬೊರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.