ಮಂಗಳೂರು, ಜೂ.26:  ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಇಂದಿಲ್ಲಿ ಬುಧವಾರ ದೆಹಲಿಯ ಸಚಿವಾಲಯದಲ್ಲಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಜಿಲ್ಲೆಯ ಅಭಿವೃದ್ಧಿಗೆ ಇರುವ ಸಾಧ್ಯತೆಗಳ ಕುರಿತು ಮಾತುಕತೆ ನಡೆಸಿದರು. 

ಮಂಗಳೂರು ಕುತ್ತಾರು ಇಂದಿಲ್ಲಿ ಮುಂಜಾನೆ ಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಬಗ್ಗೆ ಖೇದ ವ್ಯಕ್ತಿ ಪಡಿಸಿದ ಬ್ರಿಜೇಶ್ ಅವರು ಇದು ಅತ್ಯಂತ ದುರದೃಷ್ಟಕರ ಎಂದು ಮನೋವ್ಯಥೆ ವ್ಯಕ್ತ ಪಡಿಸಿದ್ದಾರೆ. ಘಟನೆಯಲ್ಲಿ ಮಡಿದವರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತೇನೆ ಎಂದರು.

ಲೋಕಸಭಾ ಅಧಿವೇಶನದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ದೆಹಲಿಯಲ್ಲಿ ಇರುವ ಕಾರಣ ಕುತ್ತಾರು ಘಟನಾ ಸಂಬಂಧಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರೊಂದಿಗೆ ಮಾತನಾಡಿ ತುರ್ತು ಸ್ಪಂದಿಸುವಂತೆ ತಿಳಿಸಿದ್ದು, ದೆಹಲಿಯಿಂದ ಆಗಮಿಸಿದ ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದೇನೆ ಎಂದಿದ್ದಾರೆ. ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು ಜಿಲ್ಲೆಯ ಜನರು ವಿಶೇಷವಾಗಿ ಮೀನುಗಾರರು, ನದಿ ಪಾತ್ರದ ಜನರ ಹಾಗೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಎಚ್ಚರ ವಹಿಸುವಂತೆ ವಿನಂತಿಸುತ್ತೇನೆ. ಪ್ರಾಕೃತಿಕ ವಿಕೋಪದ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಮುನ್ನೆಚ್ಚರಿಕೆಯ ಕ್ರಮವನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿರುತ್ತೇನೆ ಎಂದ್ದಿದ್ದಾರೆ.