ಮಂಗಳೂರು: ವಿದ್ಯಾಕಲ್ಪಕ ವಿದ್ಯಾರ್ಥಿ ವೇತನ ಯೋಜನೆಯಡಿ ಆಯ್ದ ದ.ಕ ಹಾಗೂ ಉಡುಪಿಯ ಕಾಲೇಜುಗಳಿಂದ ವಿದ್ಯಾರ್ಥಿ ವೇತನಕ್ಕೆ ಅಯ್ಕೆಯಾಗಿರುವ ವಿದ್ಯಾರ್ಥಿಗಳಿಗಾಗಿ ಕ್ಷಿತಿಜ ಹೆಸರಿನ ಮೂರು ದಿನಗಳ ಉಚಿತ ಕೌಶಲ್ಯ ತರಬೇತಿ ಶಿಬಿರ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜೂ.28 2024 ರಿಂದ ಜೂ. 30 ರ ವರೆಗೆ ಆಯೋಜಿಸಿಲಾಗಿತ್ತು. ಈ ಶಿಬಿರದಲ್ಲಿ ಬೇರೆ ಬೇರೆ ಊರುಗಳಿಂದ ಬಂದಿರುವ ಯುವ ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣದಿಂದ ಮೃದು ಕೌಶಲ್ಯ, ಜೀವನ ಕೌಶಲ್ಯ, ಹಿರಿಯ ಹಾಗೂ ಕಿರಿಯರ ಸಹಬಾಳ್ವೆ ಜೀವನಕ್ಕೆ ಕಲೆಯ ಮೆರುಗು, ಯುವ ಉದ್ದಿಮೆದಾರರ ಪ್ರೇರಣಾ ಉಪನ್ಯಾಸ ಇತ್ಯಾದಿ ವರೆಗಿನ ವೈವಿಧ್ಯ ಕ್ಷೆತ್ರದ ತಿಳುವಳಿಕೆಯೊಂದಿಗೆ ತಮ್ಮ ಶಿಕ್ಷಣ ಹಾಗು ವೃತ್ತಿ ಜೀವನಕ್ಕಾಗಿ ಆತ್ಮ ವಿಶ್ವಾಸ ವೃದ್ಧಿಸಲಾಗುವುದು.

ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಬಾಲಚಂದ್ರ ರಾವ್ ಶಿಬಿರಾರ್ಥಿಗಳಿಗೆ ಸ್ಫೂರ್ತಿದಾಯಕ ಸಂದೇಶ ನೀಡಿದರು. ಹಿರಿಯ ಲೆಕ್ಕ ಪರಿಶೋಧಕರಾದ ಸಿ.ಎ ಜಯಂತ ಶೆಣೈ ನಗರ, ಎಂ.ಆರ್. ಪಿ.ಎಲ್ ನ ಸಿ. ಎ ಸುರೇಂದ್ರನಾಯಕ, ವೇದಮೂರ್ತಿ ಬಿ ಗಣಪತಿ ಭಟ್ ಉಳ್ಳಾಲ ಆಗಮಿಸಿದ್ದರು. ವಿ.ಕೋ. ಕೇಂದ್ರದ ಅಧ್ಯಕ್ಷರಾದ ಸಿ. ಎ. ನಂದಗೋಪಾಲ್ ಶೆಣೈ ಅತಿಥಿಗಳನ್ನು ಸ್ವಾಗತಿಸಿದರು. ಉಪಾಧ್ಯಕ್ಷ ಗಿಲ್ಬರ್ಟ್ ಡಿಸೋಜ, ಕೋಶಾಧಿಕಾರಿ ಬಿ. ಆರ್ ಭಟ್, ಡಾ. ಬಿ. ದೇವದಾಸ ಪೈ ಉಪಸ್ಥಿತರಿದ್ದರು. ಪ್ರಸಿದ್ಧ ರಂಗಭೂಮಿ ಕಲಾವಿದ ಕಾಸರಗೋಡು ಚಿನ್ನ ಇವರು ರಂಗಭೂಮಿ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಕುಡ್ಪಿ ವಿದ್ಯಾ ಶೆಣೈ, ಪ್ರೀತಮ್ ಕಾಮತ್, ಕ್ಯಾರೋಲ್ ಪಾಯಸ್, ಸುಮತಿ ಪೈ, ರಾಜೇಂದ್ರ ಭಟ್, ವಿಶೇಷ ತರಬೇತುದಾರರಾಗಿದ್ದಾರೆ. ಯೋಗಗುರು ಶ್ರೀ ಗೋಪಾಲಕೃಷ್ಣ ಭಟ್ ದೇಲಂಪಾಡೀ ಇವರು 2 ದಿನಗಳ ಯೋಗ ತರಬೇತಿ ನೀಡುತ್ತಾರೆ. ಶ್ರೀನಿವಾಸ ಭಟ್, ವಂದನಾ ಕಿಣಿ, ಪ್ರಹಲ್ಲಾದ್ ಪೈ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕ್ಯಾಲಿಫೋರ್ನಿಯಾದ ಯುವ ಉದ್ಯಮಿ ಸುಶೀಲ್ ಪಡಿಯಾರ ಇವರು ಶಿಬಿರಾರ್ಥಿಗಳೊಂದಿಗೆ ಆನ್ ಲೈನ್ ಮೂಲಕ ಸಂವಾದ ನಡೆಸಲಿದ್ದಾರೆ.