ಮಂಗಳೂರು: ಮಂಗಳಗಂಗೋತ್ರಿ ಪಂಪ ಪ್ರಶಸ್ತಿ ಪುರಸ್ಕøತ, ವಿಶ್ರಾಂತ ಕುಲಪತಿಗಳಾದ ಪ್ರೊ.ಬಿ.ಎ ವಿವೇಕ ರೈ ಅವರಿಂದ ಪಂಪ ಕವಿಯ ಆದಿಪುರಾಣ ಕಾವ್ಯದ ಕುರಿತು ಮೂರು ಉಪನ್ಯಾಸಗಳನ್ನು ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 22, 23 ಮತ್ತು 24 ರಂದು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಸಂಜೆ 5.30 ರಿಂದ 6.30 ರವರೆಗೆ  ಏರ್ಪಡಿಸಲಾಗಿದೆ.

ಶ್ರೀಸಾಮಾನ್ಯರಿಗೆ ಪ್ರಾಚೀನ ಕನ್ನಡ ಸಾಹಿತ್ಯ ಎಂಬ ಉದ್ದೇಶದೊಂದಿಗೆ ನಡೆಯುವ ಈ ಮಾಲಿಕೆಯ ಎರಡನೇ ಸಂಚಿಕೆಯ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮುಂಚಿತವಾಗಿ 8904628052 ಆಥವಾ 8310300875 ಈ ಸಂಖ್ಯೆಯನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಉಚಿತವಾಗಿದ್ದು ಭಾಗವಹಿಸಿದವರಿಗೆ ಕೊನೆಯ ದಿನ ಪ್ರಮಾಣಪತ್ರವನ್ನು ನೀಡಲಾಗುತ್ತದೆ ಎಂದು ವಿಭಾಗದ ಅಧ್ಯಕ್ಷ ಡಾ.ನಾಗಪ್ಪ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.