ಮಂಗಳೂರು: ಲೋಕಮಾತ ಅಹಲ್ಯಾಬಾಯಿ ಹೋಳ್ಕರ್ ರವರ 300ನೇ ಜನ್ಮ ವರ್ಷಾಚರಣೆ ಇಡೀ ದೇಶದಾದ್ಯಂತ ನಡೆಯುತ್ತಿದೆ. ಇಂದೋರ್‍ನರಾಣಿಯಾಗಿ ತನ್ನ 28 ವರ್ಷಗಳ ಆಡಳಿತದಲ್ಲಿ ರಾಜಕೀಯ, ಧಾರ್ಮಿಕ, ನ್ಯಾಯ ಪರ, ಅಭಿವೃದ್ಧಿಯ ಮತ್ತು ಮಹಿಳಾ ಸಬಲೀಕರಣದ ಶ್ರೇಷ್ಠ ಸಾಧನೆಯನ್ನು ಆ ಕಾಲದಲ್ಲಿ ಮಾಡಿದವರು ಅಹಲ್ಯಾಬಾಯಿ ಹೋಳ್ಕರ್.
ಈ ನಿಟ್ಟಿನಲ್ಲಿ ನಮ್ಮಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಲ್ಲಿ 300ಕ್ಕಿಂತಲೂ ಹೆಚ್ಚು ವಿವಿಧ ಕಾರ್ಯಕ್ರಮಗಳು ಶಾಲೆ ಕಾಲೇಜುಗಳಲ್ಲಿ ಹಾಗೂ ಸಂಘ ಸಂಸ್ಥೆಗಳಲ್ಲಿ ಈಗಾಗಲೇ ನಡೆದಿವೆ. ಈ ಎಲ್ಲ ಕಾರ್ಯಕ್ರಮಗಳ ಸಮಾರೋಪವು ದಿನಾಂಕ 15 ಶನಿವಾರದಂದು ಮಂಗಳೂರು ಪುರಭವನದಲ್ಲಿ ನಡೆಯಲಿದೆ. ಬೆಳಿಗ್ಗೆ 09:30 ರಿಂದ ಮಧ್ಯಾಹ್ನ 02:30 ಕನಕ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮಗಳು, ವಿವಿಧ ಗೋಷ್ಠಿಗಳು, ಪ್ರದರ್ಶಿನಿ, ಸಾಕ್ಷಚಿತ್ರ, ನೃತ್ಯರೂಪಕ, ದ್ವಿಚಕ್ರ ವಾಹನರ್ಯಾಲಿ ಇತ್ಯಾದಿ ನಡೆಯಲಿವೆ. ಬೆಂಗಳೂರಿನ ಖ್ಯಾತ ಶಿಕ್ಷಣ ತಜ್ಞೆ ಡಾ. ಗೀತಾರಾಮಾನುಜಮ್, ದೆಹಲಿಯ ಸಂಸದೆ ಬಾನ್ಸುರಿ ಸ್ವರಾಜ್, ಪುಣೆಯ ಲೇಖಕಿ, ಚಿಂತಕಿ ಶೆಫಾಲಿ ವೈದ್ಯ, ಸಾಮಾಜಿಕ ಕಾರ್ಯಕರ್ತ ಡಾ. ಜಯಪ್ರಕಾಶ್ ಮುಂತಾದವರು ವಿವಿಧ ಗೋಷ್ಟಿಗಳಲ್ಲಿ ಭಾಗವಹಿಸಲಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವಿವಿಧ ಭಾಗಗಳಿಂದ ಆಯ್ದ ಒಂದು ಸಾವಿರಕ್ಕೂ ಮಿಕ್ಕಿ ಮಹಿಳೆಯರು, ವಿದ್ಯಾರ್ಥಿನಿಯರು ಭಾಗವಹಿಸುವ ಈ ಕಾರ್ಯಕ್ರಮ ಮಂಗಳೂರಿನ ಇತಿಹಾಸದಲ್ಲಿ ಪ್ರಥಮ ಎನಿಸಲಿದೆ. ಎಲ್ಲ ಕಾರ್ಯಕ್ರಮಗಳಲ್ಲಿ ಮಾಧ್ಯಮ ಬಂಧುಗಳಾದ ತಾವೆಲ್ಲರೂ ಭಾಗವಹಿಸಿ ಕಾರ್ಯಕ್ರಮದ ವರದಿಯನ್ನು ಎಲ್ಲೆಡೆ ಬಿತ್ತರಿಸಬೇಕಾಗಿ ವಿನಯ ಪೂರಕವಾಗಿ ವಿನಂತಿಸುತ್ತೇವೆ.
ಈ ಪತ್ರಿಕಾಗೋಷ್ಠಿಯನ್ನು ವೀಣಾ ಶೆಟ್ಟಿ ರಾಜ್ಯ ಸ್ವಾಗತ ಸಮಿತಿ ಸದಸ್ಯರು ನಡೆಸಿಕೊಟ್ಟರು. ಕುಮುದಿನಿ ಶೆಣೈ, ವಿಭಾಗ ಸಂಯೋಜಕರು, ರವೀಂದ್ರ ಪುತ್ತೂರು, ಪ್ರಾಂತ ಸಂಯೋಜಕರು, ರಮೇಶ್ ಕೆ. ವ್ಯವಸ್ಥಾಪಕರು ಮತ್ತು ಡಾ. ಮಾಧವ ಎಂ.ಕೆ. ಕನ್ನಡ ವಿಭಾಗ, ಸಹಾಯಕ ಪ್ರಾಧ್ಯಾಪಕರು ಮಂಗಳೂರು ವಿವಿ ಕಾಲೇಜು ಇವರು ಉಪಸ್ಥಿತರಿದ್ದರು.