ಮಂಗಳೂರು: ವಿದ್ಯಾರ್ಥಿಗಳು ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಎನ್.ಎಸ್.ಯು.ಐ ಉಳ್ಳಾಲ ವಿಧಾನಸಭಾಧ್ಯಕ್ಷ ಶಾಹಿಲ್ ಮಂಚಿಲ ನೇತೃತ್ವದ ನಿಯೋಗ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರನ್ನು ಭೇಟಿ ಮಾಡಿ ಮಂಗಳವಾರ ಮನವಿ ಸಲ್ಲಿಸಿತು.

ಫಲಿತಾಂಶಗಳು ಮತ್ತು ಹಾಲ್ ಟಿಕೆಟ್ ಪ್ರವೇಶಿಸಲು ವಿಳಂಬವಾಗುತ್ತಿರುವ ಬಗ್ಗೆ ನಿಯೋಗವು ಕಳವಳ ವ್ಯಕ್ತಪಡಿಸಿತು. ವಿಶ್ವವಿದ್ಯಾನಿಲಯಗಳಿಂದ ವಿದ್ಯಾರ್ಥಿಗಳ ವಿವರಗಳಿಗೆ ಸೀಮಿತ ಪ್ರವೇಶ ಸುಗಮ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಪೋರ್ಟಲ್ ಅನ್ನು ಸುಧಾರಿಸುವ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಅವರು ಸಚಿವರನ್ನು ಒತ್ತಾಯಿಸಿತು. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಧ್ವನಿಗೂಡಿಸಿದರು.
ನಿಯೋಗದಲ್ಲಿ ಎನ್.ಎಸ್.ಯು.ಐ ರಾಷ್ಟ್ರೀಯ ಸಂಯೋಜಕ ಸವಾದ್ ಸುಳ್ಯ, ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಾಬೆ, ಜಿಲ್ಲಾ ಪ್ರಭಾರ ಉಪಾಧ್ಯಕ್ಷ ಸಫ್ವಾನ್ ಕುದ್ರೋಳಿ ಇದ್ದರು.
ಸಂಕ್ಷಿಪ್ತ ವಿವರಕ್ಕಾಗಿ ಸಂಪರ್ಕಿಸಬಹುದು: ಶಾಹಿಲ್ ಮಂಚಿಲ (7411805062)