ಮಂಗಳೂರು : ಕಳೆದ ವಾರ ಬೆನ್ನು ಬೆನ್ನಿಗೆ ಮಸೂದ್, ಪ್ರವೀಣ್, ಫಾಜಿಲ್‌ರ ಕೊಲೆಯಾಯಿತು. ಮುಸ್ಲಿಂ ಸಂಘಟನೆಗಳ ಒಕ್ಕೂಟವು ಅದನ್ನು ಖಂಡಿಸುತ್ತದೆ. ಕೊಲೆಯಾದ ಮೂವರಲ್ಲಿ ಇಬ್ಬರು ಮುಸ್ಲಿಮರಾದರೂ ಮುಸ್ಲಿಂ ಬಾಂಧವರು ಉದ್ವಿಗ್ನತೆಗೆ ಅವಕಾಶ ಕೊಟ್ಟಿಲ್ಲ ಎಂದು ಎಲ್ಲರ ಪರವಾಗಿ ಮಾಜೀ ಮೇಯರ್ ಕೆ. ಇ. ಅಶ್ರಪ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮುಖ್ಯಮಂತ್ರಿ ಬಂದವರು ಪ್ರವೀಣ್ ಮನೆಗೆ ಹೋದವರು ಮಸೂದ್ ಮನೆಗೂ ಹೋಗಬೇಕಿತ್ತು. ಉಳಿದಿಬ್ಬರಿಗೂ ಪರಿಹಾರ ನೀಡಿದ್ದರೆ ಅದಿ ಶಾಂತಿಗೆ ಮುನ್ನುಡಿ ಆಗುತ್ತಿತ್ತು. ಅದಾಗದಿರುವುದು ವಿಷಾದನೀಯ ಎಂದು ಅಶ್ರಫ್ ಹೇಳಿದರು.

ಹಾಜಿ ಅಬ್ದುಲ್‌ ರಶೀದ್ ಅವರು ಮಾತನಾಡಿ ಪೋಲೀಸರು ತಾರತಮ್ಯ ಮಾಡಿದ್ದು ಇದೆ. ಆದರೆ ಮುಖ್ಯಮಂತ್ರಿ ಅವರೇ ಒಂದು ಪಕ್ಷದ, ಒಂದು ಜನಾಂಗದ ಪರವಾಗಿ ನಿಂತುದು ಕೀಳು ರಾಜಕೀಯ. ಈ ಕಾರಣಕ್ಕೆ ನಾವು ಜಿಲ್ಲಾಧಿಕಾರಿಗಳ ಸಭೆಗೆ ಬಹಿಷ್ಕಾರ ಹಾಕಿದೆವು. ಅದು ಬಿಸಿ ಮುಟ್ಟಲಿ ಎಂಬ ಕಾರಣಕ್ಕೆ ಮಾತ್ರ. ಮೂರೂ ಕೊಲೆ ಮಾಡಿದ ತಪ್ಪಿತಸ್ಥರನ್ನು ಹಿಡಿದು ಶಿಕ್ಷಿಸಬೇಕು, ನಾಮಕಾವಾಸ್ತೆ ತನಿಖೆಯಿಂದ ಫಲವಿಲ್ಲ. ಎಲ್ಲರ ಕೊಲೆಯನ್ನು ಒಂದೇ ರೀತಿಯಲ್ಲಿ ಪರಿಗಣಿಸಬೇಕು. ಮುಸ್ಲಿಂ ಬಾಂಧವರು ಫಾಜಿಲ್ ಮಾತ್ರವಲ್ಲ, ಪ್ರವೀಣ್ ಅಂತ್ಯಕ್ರಿಯೆ ಕಾಲದಲ್ಲೂ ಗಲಾಟೆ ಆಗದಂತೆ ನೋಡಿಕೊಂಡರು. ಇನ್ನು ಮುಂದೆ ಇಂತಹ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮಾಧ್ಯಮದವರೂ ಸತ್ಯ ಬರೆಯಬೇಕು ಎಂದು ರಶೀದ್ ಹೇಳಿದರು.

ಇಲ್ಲಿ ಎಲ್ಲ ಅಣ್ಣ ತಮ್ಮಂದಿರು, ಇಲ್ಲಿ ವೈರಿಗಳು ಇಲ್ಲ. ಸಮುದಾಯಗಳ ನಡುವೆ ಯುದ್ಧ ನಡೆಯುತ್ತಿಲ್ಲ. ಎಲ್ಲ ಕಡೆ ಸೌಹಾರ್ದ ಮೂಡಲೆ. ನಮ್ಮ ಸಹಕಾರ ಇದ್ದೇ ಇದೆ ಎಂಬ ಮಾತು ಮೂಡಿಬಂತು. ಮುಖ್ಯವಾಗಿ ಪ್ರಚೋದನಕಾರಿ ಭಾಷಣಗಳಿಗೆ ಕೊನೆ ಹಾಡಬೇಕು.

ಕರ್ನಾಟಕ ಮುಸ್ಲಿಂ ಜಮಾತ್‌ನ ಮುಮ್ತಾಜ್ ಆಲಿ, ಉಳ್ಳಾಲ್ ದರ್ಗಾದ ಅಬ್ದುಲ್ ರಶೀದ್, ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಶ್ರಫ್ ಕೆ. ಇ, ಜಮಾತೆ ಹಿಂದ್ ನ ಮುಹಮ್ಮದ್ ಕುಂಙು, ಎಸ್‌ಕೆಎಸ್‌ಎಂನ ಬಶೀರ್ ಶಾಲಿಮಾರ್, ಎಸ್ಎಸ್‌ಎಫ್‌ನ ಯಾಕೂಬ್ ಸ ಅದಿ, ಎಸ್‌ವೈಎಸ್‌ನ ಅಶ್ರಫ್ ಕಿನಾರ, ಕೆಎಂಜೆಯ ನಾಸಿರ್ ಲಕ್ಕಿ ಸ್ಟಾರ್, ಎಂಐವಿಯ ಅಶ್ರಫ್ ಬದ್ರಿಯಾ, ಕಾಂಗ್ರೆಸ್‌ನ ಸುಹೈಲ್ ಕಂದಕ್, ಜೆಡಿಎಸ್‌ನ ಇಕ್ಬಾಲ್ ಮುಲ್ಕಿ, ಎಸ್‌ಡಿಪಿಐನ ಅಬೂವಕರ್ ಕುಳಾಯಿ, ಭಾರತ ವೆಲ್ಫೇರ್ ಪಕ್ಷದ ಸರ್ಫರಾಜ್, ಮುಸ್ಲಿಂ ಲೀಗ್‌ನ ತಬೂಕ್ ದಾರಿಮಿ, ಡಿವೈಎಫ್‌ಐನ ಇಮ್ತಿಯಾಜ್, ಮುಸ್ಲಿಂ ಐಕ್ಯ ಕೂಟದ ಮುಸ್ತಫಾ ಜನತಾ, ಸಂಯುಕ್ತ ಜಮಾಅತ್‌ನ ಇಬ್ರಾಹಿಂ ಸುಳ್ಯ, ಮಂಗಳಪೇಟೆ ಜಮಾಅತ್‌ನ ಹಸನಬ್ಬ ಮೊದಲಾದವರು ಉಪಸ್ಥಿತರಿದ್ದರು.