Pic Credit: Navabharat
ಮಧ್ಯ ಪ್ರದೇಶದ ಶಾಹಡೋಲ್ ಜಿಲ್ಲೆಯ ತನ್ನ ಮನೆಗೆ ಆಸ್ಪತ್ರೆಯಲ್ಲಿ ಸತ್ತ ತಾಯಿಯ ದೇಹವನ್ನು ಆಂಬುಲೆನ್ಸ್ ತಕರಾರು ಕಾರಣ ಮಗನೊಬ್ಬ ಬೈಕ್‌ನಲ್ಲಿ ಸಾಗಿಸಿದ ಘಟನೆ ನಡೆದಿದ್ದು, ಈ ಬಗೆಗಿನ ಯಾರೋ ಅಪ್ಲೋಡ್ ಮಾಡಿದ ವೀಡಿಯೋ ವೈರಲ್ ಆಗಿದೆ; ಸರಕಾರಕ್ಕೆ ಛೀಮಾರಿ ಸಿಕ್ಕಿದೆ.
ಜೈಮಾಂತ್ರಿ ಯಾದವ್ ಸಾವಿಗೀಡಾದ ಮಹಿಳೆ. ಇವರನ್ನು ಶಾಹಡೋಲ್ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಎರಡು ದಿನದ ಬಳಿಕ ಅಲ್ಲಿನ ವೈದ್ಯರು ನೆರೆಯ ಅನುಷ್ಕರ್ ಜಿಲ್ಲಾಸ್ಪತ್ರೆಗೆ ಒಯ್ಯುವಂತೆ ಹೇಳಿದ್ದರು. ಆದರೆ ಜೈಮಾಂತ್ರಿ ಅಲ್ಲಿ ನಿಧನರಾದರು. ಅನುಷ್ಕರ್ ಜಿಲ್ಲಾಸ್ಪತ್ರೆಯಲ್ಲಿ ಆಂಬುಲೆನ್ಸ್ ಇರಲಿಲ್ಲ. ದೂರದಿಂದ ಬರಲು ಭಾರೀ ಹಣ ಕೇಳಿದರು. ಅಸಹಾಯಕನಾದ ಮಗ ತಾಯಿಯ ಶವವನ್ನು ಚಾದರದಲ್ಲಿ ಕಟ್ಟಿ, ಗೆಳೆಯನ ಬೈಕ್‌ನಲ್ಲಿ 50 ಕಿಲೋಮೀಟರ್ ದೂರದ ಮನೆಗೆ ಸಾಗಿಸಿದ್ದಾನೆ. ಮಧ್ಯ ಪ್ರದೇಶದಲ್ಲಿ ಆಂಬುಲೆನ್ಸ್ ಕೊರತೆ ಮತ್ತು ಸುಲಿಗೆ ವರದಿಯಾಗುತ್ತಲೇ ಇರುತ್ತದೆ.