ಮಂಗಳೂರು, ಆಗಸ್ಟ್ 01: ಮಾಜೀ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ಕಳೆದ ವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆಯಾದ ಮಸೂದ್, ಪ್ರವೀಣ್ ನೆಟ್ಟಾರು ಹಾಗೂ ಸುರತ್ಕಲ್‌ನ ಫಾಜಿಲ್ ಅವರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ನೀಡುವ ಕಜ್ಜ ನಿರ್ವಹಿಸಿದರು. ಆ ಬಳಿಕ ಅವರು ಸರ್ಕ್ಯೂಟ್ ಹೌಸ್‌ನಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಎಂ. ಬಿ. ಸದಾಶಿವ, ಮೊಹಮ್ಮದ್ ಕುಂಞು, ವಸಂತ ಪೂಜಾರಿ, ಸುಶೀಲ್ ನೊರೊನ್ಹಾ  ಮೊದಲಾದ ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ನಾಯಕರು ಉಪಸ್ಥಿತರಿದ್ದರು. ಜೆಡಿಎಸ್ ರಾಜ್ಯಾಧ್ಯಕ್ಷರಾದ ಮೇಲೆ ಮಂಗಳೂರಿಗೆ ನನ್ನ ಮೊದಲ ಭೇಟಿ ಎಂದು ಸಿ. ಎಂ. ಇಬ್ರಾಹಿಂ ಹಾಜರಾದರು.

ಕೊರೋನಾ ಕಾರಣದಿಂದ ಶಿಕ್ಷಣ ಕಾಶಿ ಹಾಗೂ ಧಾರ್ಮಿಕ ಕ್ಷೇತ್ರಗಳ ಕರಾವಳಿ ಭಾಗಕ್ಕೆ ಎರಡು ವರುಷಗಳಿಂದ ಬಂದಿಲ್ಲ. ಇಂತಾ ಸ್ಥಳದಲ್ಲಿ ಕೋಮು ಸಾಮರಸ್ಯ ಹಾಳು ಮಾಡುವವರು ಕಳೆದ ಒಂದೂವರೆ ದಶಕದಲ್ಲಿ ಇಲ್ಲಿ ಅಧಿಕರಿಸಿದ್ದಾರೆ. ಈಗಂತೂ ವಾರದಲ್ಲೇ ಮೂರು ಕೊಲೆಗಳಾಗಿವೆ, ಅ ಸಂಬಂಧ ಬಂದವನು ತಮ್ಮನ್ನು ನೋಡಿ ಮಾತನಾಡುತ್ತಿದ್ದೇನೆ. ಬಿಜೆಪಿಯ ಕೆಲವು ಸಂಘಟನೆಗಳು ಇಲ್ಲಿ ಹಿಂದುತ್ವದ ಹೆಸರಿನಲ್ಲಿ ನಿರಂತರ ಹಿಂದೂ ಮುಸ್ಲಿಂ ಅಂತರ ಸೃಷ್ಟಿ ಮಾಡಿದ್ದಾರೆ ಎಂದು ಕುಮಾರಸ್ವಾಮಿಯವರು ಹೇಳಿದರು.

ಜನತಾ ಕರಾವಳಿಯಲ್ಲಿ ಎಂದೂ ದೊಡ್ಡ ಶಕ್ತಿ ಆಗಿರಲಿಲ್ಲ. ಒಂದು ಪಕ್ಷ ಹಿಂದುತ್ವ ಎಂದರೆ ಇನ್ನೊಂದು ಇನ್ನೊಂದು ವರ್ಗದ ರಕ್ಷಕ ಎಂಬಂತೆ ಇದ್ದು ಹಿಂದೂ ಮುಸ್ಲಿಂ ಅಂತರ ಅಧಿಕವಾಗಿದೆ. ಇಲ್ಲಿ ರಾಜಕೀಯ ನಾಯಕರ ಬಲ್ಲಿದರ ಕೊಲೆಯಾಗಿಲ್ಲ. ಕೆಲವು ಅಮಾಯಕರನ್ನು ಎತ್ತಿ ಕಟ್ಟಿದವರು ಅವರ ಕೊಲೆ ತಡೆದಿಲ್ಲ. ನಾನು ವಿಮಾನ ಪ್ರವಾಸ ಬಂದಿಲ್ಲ. ಕೊಲೆಯಾದ ಯುವಕರ ಮೂರೂ ಮನೆಗಳಲ್ಲಿ ರಾಜಕೀಯಸ್ಥರ ವಿರುದ್ಧ ಆಕ್ರೋಶ ಅತಿಯಾಗಿದೆ. ನ್ಯಾಯ ಸಿಗುತ್ತಿಲ್ಲ ಏಕೆ ಎಂಬುದು ಅವರು ಅಳಲು ಕಂಡು ಬಂತು ಎಂದು ಕುಮಾರಸ್ವಾಮಿಯವರು ಹೇಳಿದರು.

ಕಾಂಗ್ರೆಸ್ ನಾಯಕರು ಇಲ್ಲಿ ಸದಾ ಗೆದ್ದಿದ್ದಾರೆ, ಈಗ ಬಿಜೆಪಿಯವರು ಗೆದ್ದಿದ್ದಾರೆ, ಸಿದ್ದರಾಮಯ್ಯನವರು ಐದು ವರುಷ ಆಗಿದ್ದಾರೆ. ಯಾಕೆ ಅಮಾಯಕರ ಕೊಲೆ ನಿಂತಿಲ್ಲ, ಹಿಂದೆ ಕೊಲೆಯಾದವರಿಗೆ ನ್ಯಾಯ ಸಿಕ್ಕಿಲ್ಲ ಎಂಬುದನ್ನು ಕಾಂಗ್ರೆಸ್ ಒಳಗಣ್ಣಿನಿಂದ ನೋಡಬೇಕು. ಸಮ್ಮಿಶ್ರ ಸರಕಾರ ಬೀಳಿಸಿ ಬಿಜೆಪಿಯ ಸರಕಾರ ತಂದಿರಿ, ಜನರಿಗೆ ನೀವೇನು ಕೊಟ್ಟಿರಿ, ಮುಖ್ಯಮಂತ್ರಿಗಳು ಇಲ್ಲಿಗೂ ಬಂದರು. ಅವರು ಎರಡೂ ಸಮಾಜದ ನಡುವೆ ಸಾಮರಸ್ಯ ಮೂಡಿಸುತ್ತಾರೆ ಎಂಬ ನನ್ನ ನಿರೀಕ್ಷೆ ಸುಳ್ಳಾಯಿತು. ಮುಖ್ಯಮಂತ್ರಿ ಬಂದಾಗಲೇ ಇನ್ನೊಂದು ಕೊಲೆ ಆಯಿತು. ಅದಕ್ಕೆ ಮೊದಲು ಒಂದು ಕೊಲೆ ಆಗಿತ್ತು. ಆ ಮನೆಗಳಿಗೆ ಭೇಟಿ ನೀಡದ ಮುಖ್ಯಮಂತ್ರಿಗಳು ಸಮಾಜಕ್ಕೆ ಅನಿಷ್ಟ ಸಂದೇಶ ನೀಡಿದ್ದಾರೆ. ಇದು ಯಾವ ರಾಜಕೀಯ? ಎಂದು ಕುಮಾರಸ್ವಾಮಿಯವರು ಪ್ರಶ್ನಿಸಿದರು.

ಮಸೂದ್ ಕೊಲೆ ಮೊದಲು ಆಗಿದೆ. ಪ್ರವೀಣ್ ಕೊಲೆ ಆಗುವವರೆಗೆ ಮಸೂದ್ ಕೊಲೆ ಸುದ್ದಿ ಆಗಿಲ್ಲ, ವಿಚಿತ್ರ. ಮಸೂದ್ ಒಂದು ಕರು ಕೊಂಡಿದ್ದ. ಅದು ಕೆಲವರಿಗೆ ಹಿಡಿಸಿಲ್ಲ. ಪ್ರಕರಣ ಬೆಳೆಸದೆ ಅವರಲ್ಲಿ ಮಾತನಾಡಲು ಹೋದ ಮಸೂದ್ ಕೊಲೆಯಾಗಿದೆ. ಬಿಜೆಪಿ ಶಾಸಕರು, ನಾಯಕರು ಪೋಲೀಸರು ಸ್ಥೈರ್ಯ ಕುಗ್ಗಿಸುವ ಮಾತನಾಡುತ್ತಾರೆ. ಡಿಜಿಯವರು ಈಗ ಬಂದಿದ್ದಾರೆ. ಕೊಲೆಯಾದ ಕೂಡಲೆ ಯಾಕೆ ಬರಲಿಲ್ಲ? ಈಗ ಕೂಡ ಬಂದು ಒಂದೆ ಗಂಟೆಯಲ್ಲಿ ಪೋಲೀಸರೊಡನೆ ಮಾತನಾಡಿ ಹೋಗಿದ್ದಾರೆ. ಆರೆಸ್ಸೆಸ್ ಹೇಳಿದ್ದನ್ನು ಹೇಳಿ ಹೋಗಲು ಬಂದಿದ್ದರೆ? ಫಾಜಿಲ್ ತಂದೆ ನಮಗೆ ಹಣ ಬೇಡ, ನ್ಯಾಯ ಬೇಕು ಎಂದರು. ಇದೇ ಐದನೇ ತಾರೀಕಿನ ಒಳಗೆ ಈ ಮೂರು ಕೊಲೆಗಾರರನ್ನು ಬಂಧಿಸುವಲ್ಲಿ ಯಶಸ್ಸು ಕಾಣದಿದ್ದರೆ ನಾನು ಇಲ್ಲಿ ಒಂದು ಸತ್ಯಾಗ್ರಹ ಹಮ್ಮಿಕೊಳ್ಳಲು ತೀರ್ಮಾನಿಸಿದ್ದೇನೆ ಎಂದು ಕುಮಾರಸ್ವಾಮಿಯವರು ಹೇಳಿದರು.

ಈ ಜಿಲ್ಲೆಯ ಉದ್ಯಮಿಗಳು ಮುಂಬಯಿ, ದುಬಾಯಿ ಮೊದಲಾದೆಡೆ ಬಂಡವಾಳ ಹೂಡಿದ್ದಾರೆ. ಇಲ್ಲೇಕೆ ಅವರಿಗೆ ಬಂಡವಾಳ ಹೂಡಲು ಆಗುತ್ತಿಲ್ಲ  ಕೊಲೆಯಾದ ಫಾಜಿಲ್ ಎಂಬಿಎ ಓದಿ, ಕೆಲಸವಿಲ್ಲದ ಕೂಲಿ ಮಾಡುತ್ತಿದ್ದ. ಇಲ್ಲಿನ ಯುವಕರಿಗೆ ಕೆಲಸ ಸಿಗುವಂತೆ ಜಿಲ್ಲೆಯ ರಾಜಕಾರಣ ಸಾಗಲಿ. ಈ ಗಲಭೆ, ಕೊಲೆಗಳಿಗೆ ಒಂದು ತಾರ್ಕಿಕ ಅಂತ್ಯ ಸಿಗಲಿ ಎಂದು ಕುಮಾರಸ್ವಾಮಿಯವರು ಆಶಿಸಿದರು. ವಿಧಾನ ಪರಿಷತ್ ಸದಸ್ಯರಾದ ಫಾರೂಕ್, ಭೋಜೇಗೌಡ ಮೊದಲಾದವರು ಉಪಸ್ಥಿತರಿದ್ದರು.

ಇಂತಾ ಘಟನೆಗಳು ಜಿಲ್ಲೆಯಲ್ಲಿ ಈ ಎರಡು ಪಕ್ಷಗಳ ಪಸಲು ಅಷ್ಟೆ  ನನಗೆ ಇಲ್ಲಿ ಯಾವ ಲಾಭವೂ ಇಲ್ಲ. ‌ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮಗೆ ಅಭ್ಯರ್ಥಿಗಳೇ ಇಲ್ಲ. ಹಾಗಿರುವಾಗ ಇಲ್ಲಂತೂ ನಮ್ಮ ಲಾಭಕ್ಕಿಂತ ಇದು ಶಾಂತಿಯ ತೋಟ ಆಗಿ ಉಳಿಯುವುದಷ್ಟೆ ನನ್ನ ಬಯಕೆ. ಇಲ್ಲಿನ ಕೆಲವು ಸಂಘಟನೆಗಳವರಿಗೆ ಮಾತ್ರ ಈ ಕೊಲೆಗಳು, ಅಶಾಂತಿ ಎಂದು ಪ್ರಶ್ನೆಯೊಂದಕ್ಕೆ ಕುಮಾರಸ್ವಾಮಿಯವರು ಉತ್ತರಿಸಿದರು.

ಇಬ್ರಾಹಿಂ ಅವರು ಮಾತನಾಡಿ 1995ರಲ್ಲಿ ಹುಬ್ಬಳ್ಳಿ ಬಾವುಟ ಗಲಾಟೆಯಲ್ಲಿ ಉರಿಯುತ್ತಿದ್ದಾಗ ನಾನು ಮತ್ತು ಬೊಮ್ಮಾಯಿಯವರು ಅಲ್ಲಿ ಹೋಗಿ ಶಾಂತಿ ಸ್ಥಾಪಿಸಿದೆವು. ಆದರೆ ಈ ಮಗ ಬೊಮ್ಮಾಯಿಯವರು ಒಂದು ಮನೆಗೆ ಭೇಟಿ ನೀಡಿ ಇಷ್ಟು ತಾರತಮ್ಯ ಎಂದರೆ ಏನು ಹೇಳಬೇಕು? ಸರ್ವರ ಸುಖ ಹಿಂದೂ ತಿರುಳು. ಇಲ್ಲಿ ಕೊಲೆ, ಗಲಭೆ, ಹೆಣ ಇಟ್ಟು ರಾಜಕೀಯ. ಕಾಂಗ್ರೆಸ್, ಬಿಜೆಪಿ ಬಿಡಿ. ನಮ್ಮನ್ನು ಗೆಲ್ಲಿಸಿ ಎಲ್ಲ ಸರಿ ಮಾಡಬಲ್ಲೆವು. ಮಾಧ್ಯಮದ ನೀವು ಮೂರನೆಯ ಕಣ್ಣು. ನಿಮಗೂ ಜವಾಬ್ದಾರಿ ಇದೆ. ಎನ್‌ಐಎ ಯಾಕೆ ಕೊಡ್ತೀರಿ. ಯಾಕೆ ನಮ್ಮ ಪೋಲೀಸರಿಗೆ ಸ್ವತಂತ್ರ ಕೊಟ್ಟು ನೋಡಿ. ಕಾಶ್ಮೀರದಲ್ಲಿ ಹಿಂಸೆ ಇಲ್ಲದೆ ಚುನಾವಣೆ ನಡೆಸಿದವರು ಅಂದಿನ ಪ್ರಧಾನಿ ದೇವೇಗೌಡರು ಮತ್ತು ನಾವು. ಜನಸಾಮಾನ್ಯರ ಕಣ್ಣಲ್ಲಿ ರಕ್ತ ಬರಬಾರದು. ಹಿಂದೂ ಮುಸ್ಲಿಂ ಎಲ್ಲರೂ ಬದುಕಬೇಕು. ಯಾರದೋ ರಾಜಕೀಯಕ್ಕೆ ಬಲಿಯಾಗಬೇಡಿ. ಕಾಂಗ್ರೆಸ್ ಬಿಜೆಪಿ 20ಟ್ವೆಂಟಿ ಮ್ಯಾಚ್ ನಿಲ್ಲಿಸಿ ಎಂದು ಸಿ. ಎಂ. ಇಬ್ರಾಹಿಂ ಹೇಳಿದರು.