ಮಂಗಳೂರು, ಏ. 21:  ಜಿಲ್ಲಾಡಳಿತ,  ಜಿಲ್ಲಾ ಪಂಚಾಯತ್ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ  ಇವರ ಸಂಯುಕ್ತ ಆಶ್ರಯದಲ್ಲಿ  ಡಾ. ಪಿ ದಯಾನಂದ ಪೈ  ಪಿ ಸತೀಶ್ ಪೈ  ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಇವರ ಸಹಕಾರದೊಂದಿಗೆ ಡಾ. ರಾಜಕುಮಾರ್ ಜಯಂತಿ  ಏಪ್ರಿಲ್ 24ರಂದು  ಬೆಳಿಗ್ಗೆ 11:30 ಗಂಟೆಗೆ   ಡಾ. ಪಿ ದಯಾನಂದ ಪೈ  ಪಿ ಸತೀಶ್ ಪೈ  ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿಯಲ್ಲಿ ನಡೆಯಲಿದೆ.

ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಫರೀದ್ ಅವರ ಘನ ಉಪಸ್ಥಿತಿಯಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್  ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ  ಶಾಸಕ  ಡಿ ವೇದವ್ಯಾಸ್  ಕಾಮತ್  ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಪತ್ರಕರ್ತ ಪಿ.ಬಿ ಹರೀಶ್ ರೈ ಅವರು ಡಾ.ರಾಜಕುಮಾರ್ ಅವರ ಬಗ್ಗೆ  ಉಪನ್ಯಾಸ ನೀಡಲಿದ್ದಾರೆ.