ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋಮುವಾದವನ್ನು ಸಂಪೂರ್ಣವಾಗಿ ನಿರ್ಮೂಲನಗೊಳಿಸಿ ಶಾಂತಿ, ಸೌಹಾರ್ದತೆಯನ್ನು ಕಾಪಾಡಿ ಜಿಲ್ಲೆಗಳ ಅಭಿವೃದ್ದಿಗೆ ಮಾರಕವಾಗದಂತಾಗಲು ಜು. 29 ರಂದು  ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೊಷ್ಟಿಯನ್ನು ನಡೆಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರು ಇಂದಿನ ಪತ್ರಿಕಾಗೋಷ್ಠಿಯು ಪರಿಸರ ಸೌಹಾರ್ದ ಮತ್ತು ಅಭಿವೃದ್ಧಿ, ಕೋಮುವಾದ ನಿರ್ಮೂಲನೆ ನಮ್ಮ ಜಿಲ್ಲೆಯಲ್ಲಿ ಆಗಬೇಕು. 1990 ರಿಂದ ಕೋಮುವಾದ ಹೆಚ್ಚಾಗಿ, ಇತ್ತೀಚಿನ ವರ್ಷಗಳಲ್ಲಿ ಕೆಲವು ಕೊಲೆಗಳಾಗಿದೆ. ಅನೇಕ ಯುವ ಜನಾಂಗದ ಉತ್ತಮ ಭವಿಷ್ಯಕ್ಕೆ ಮಾರಕವಾಗಿದೆ.  ಇದು ನಿಲ್ಲಬೇಕು. ಭವಿಷ್ಯದಲ್ಲಿ ಇಂತಹ ಘಟನೆ ಆಗಬಾರದು. ಸರಕಾರ ಕೂಡ ಈ ಬಗ್ಗೆ ಉತ್ತಮ ಕೆಲಸ ಮಾಡುತ್ತಿದ್ದು ಜಿಲ್ಲೆಯಲ್ಲಿ ಒಳ್ಳೆಯ ಪೊಲೀಸ್ ಕಮಿಷನರನ್ನು ಇದಕ್ಕೆ ನೇಮಿಸಿದ್ದಾರೆ. ಅವರು ಅವರು ಒಳ್ಳೆ ಕೆಲಸವನ್ನು ಮಾಡುತ್ತಿದ್ದಾರೆ. ಆವರಿಗೆ ಪ್ರೋತ್ಸಾಹ ನೀಡಿದರೆ ಈ ಕೋಮುವಾದ ಸಂಪೂರ್ಣವಾಗಿ ನಿರ್ಮೂಲನಗೊಳ್ಳಲಿದೆ. ಇದಕ್ಕಾಗಿ ಸರಕಾರ ಸರಕಾರದ ಕೆಲಸ ಮಾಡುತ್ತದೆ, ಪೊಲೀಸರು ಪೊಲೀಸರ ಕೆಲಸ ಮಾಡುತ್ತಾರೆ, ಆದರೆ ನಮ್ಮ ಜಿಲ್ಲೆಯ ಪ್ರತಿಯೊಂದು ನಾಗರಿಕರು ಈ ಬಗ್ಗೆ ಆಲೋಚನೆ ಮಾಡಿ ಇಂತಹ ಘಟನೆಗಳು ಯುವ ಜನಾಂಗಕ್ಕೆ ಮಾರಕವಾಗದಂತೆ  ಚಿಂತಿಸಬೇಕಾಗಿದೆ. ಇದಕ್ಕೆ ಹೊಣೆಗಾರರು ಜನಸಾಮಾನ್ಯರು,  ಪೊಲೀಸರು ಯಾ ಸರಕಾರ ಅಲ್ಲ.  ನಾವು ಸರಿಯಾಗಿ ಸರಕಾರಕ್ಕೆ ಸಹಕಾರಿಯಾಗಬೇಕು.  ಮುಂಬಯಿಯಲ್ಲಿ ನಮ್ಮ ಸಮಿತಿಯಲ್ಲಿ ಎಲ್ಲಾ ಸಮುದಾಯದವರಿದ್ದು ನಮ್ಮ ಜಿಲ್ಲೆ ಅಭಿವೃದ್ಧಿ ಆಗಬೇಕು. ಅತೀ ಬುದ್ಧಿವಂತ ಜಿಲ್ಲೆಯಲ್ಲಿ ಕೋಮುವಾದ ನಿರ್ಮೂಲನ ಆಗಬೇಕು. ನಮ್ಮ ಜಿಲ್ಲೆ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದುವರಿದ ಜಿಲ್ಲೆ,   ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನೇಕ ಬ್ಯಾಂಕುಗಳನ್ನು ದೇಶಕ್ಕೆ ನೀಡಿದಂತಹ ಜಿಲ್ಲೆ,  ನಮ್ಮಲ್ಲಿ ಅನೇಕ ಪ್ರಸಿದ್ದ ಮಂದಿರ, ಮಸೀದಿ, ದರ್ಗಾ ಹಾಗೂ ಚರ್ಚ್ ಮೊದಲಾದ  ಧಾರ್ಮಿಕ ಕ್ಷೇತ್ರಗಳಿವೆ.  ಹಾಗೂ ಪ್ರವಾಸಿಗರನ್ನ ಆಕರ್ಷಿಸುವ ಕೇಂದ್ರವಾಗಿದ್ದು ನಮ್ಮ ಜಿಲ್ಲೆಯನ್ನು ಉನ್ನತ ಮಟ್ಟಕ್ಕೆ ಏರಿಸುವ ಉದ್ದೇಶದಿಂದ ನಾವು ಎಲ್ಲಾ ಗಣ್ಯರನ್ನು ಸೇರಿಸಿ ಇಂದು ಪತ್ರಿಕಾಗೋಷ್ಟಿಯನ್ನು  ನಡೆಸುತ್ತಿದ್ದೇವೆ. ಮಾಧ್ಯಮದವರು ತಮ್ಮ ಶಕ್ತಿಯನ್ನು ಉಪಯೋಗಿಸಿ ನಿಷ್ಪಕ್ಷವಾಗಿ ಜಿಲ್ಲೆಯ, ರಾಜ್ಯದ ಹಾಗೂ ದೇಶದ ಉದ್ದಾರಕ್ಕೆ ನೀವೆಲ್ಲರೂ ಪ್ರೋತ್ಸಾಹಿಸಬೇಕು. ಜನಸಾಮಾನ್ಯರಿಗೆ ಈ ಬಗ್ಗೆ ತಿಳಿಯುವಂತಾಗಲಿ ಎಂದರು.

ಸಮಿತಿಯ ರಾಜ್ಯ ಸಂಚಾಲಕರಾದ ಕೆ. ಪಿ. ಜಗದೀಶ್ ಅಧಿಕಾರಿ ಮಾತನಾಡುತ್ತಾ ಕಳೆದ ಸಲ ನಾವೊಂದು ಪ್ರಸ್ತಾವನ್ನು ಇಟ್ಟಿದ್ದೇನೆ. ಅದರಲ್ಲಿ ಎಲ್ಲಾ ಧರ್ಮ ಎಲ್ಲಾ ಸಮುದಾಯದವರಿದ್ದು  ಜಿಲ್ಲೆಗಳಲ್ಲಿ  8 -10 ಮಂದಿ ಯ ಸಮಿತಿಯನ್ನು ರಚಿಸಿ, ಶಾಂತಿಯ ದ್ಯೋತಕವಾಗಿ  ಸರಕಾರಕ್ಕೆ ಹಾಗೂ ಪೋಲೀಸರಿಗೆ ಸಹಕಾರಿಯಾಗುತ್ತಾರೆ. ಅದಕ್ಕೆ ಪೂರಕವಾಗಿ ಜಿಲ್ಲೆ ಆ ವಿಚಾರದಲ್ಲಿ ಮುಂಬಯಿಯ ತಂಡದಲ್ಲಿ ಎಲ್ಲಾ ಸಮುದಾಯದವರಿದ್ದಾರೆ.  ನಾವು ಬೇರೆ ಬೇರೆ ವಿಚಾರದಲ್ಲಿ ಸಮಾಜಮುಖಿ ಜೀವನ ಮಾಡಬೇಕಂತ ಈ ಜಿಲ್ಲೆ ನಾವು ಪರಊರಿನಲ್ಲಿ ಇದ್ದರೂ ಜನ್ಮ ಭೂಮಿ ನಮಗೆ ಮುಖ್ಯ, ನಮ್ಮ ಜನ್ಮ ಭೂಮಿ ಅಭಿವೃದ್ಧಿಯಾಗಬೇಕು. ಜಿಲ್ಲೆಯಲ್ಲಿ ನಮಗೆ ಪೂರಕವಾದ ಉದ್ಯಮಗಳು ಬರಬೇಕು. ಮುಂದಿನ ದಿನಗಳಲ್ಲಿ ಒಗ್ಗಟ್ಟಿನಲ್ಲಿ ಸರಕಾರಕ್ಕೆ ಸಹಕಾರ ಕೊಡುವಂತಹ ನಮ್ಮ ಜಿಲ್ಲೆಯ ವಿಚಾರಧಾರೆಯನ್ನ ಸರಕಾರದ ಮುಖ್ಯ ಕಾರ್ಯದರ್ಶಿ ಅವರಲ್ಲಿ ಕೂಡ ಸಂಪರ್ಕಿಸಿದ್ದೇವೆ. ಅವರಿಗೂ ಜಿಲ್ಲೆಯ ಬಗ್ಗೆ ತಿಳಿದಿದೆ. ನಮ್ಮ ಜಿಲ್ಲೆ ಇಡೀ ರಾಷ್ಟ್ರದಲ್ಲಿ ಗೌರವ ತರುವಂತ ಜಿಲ್ಲೆ.  ಎಲ್ಲಾ ವಿಚಾರದಲ್ಲಿ ಪ್ರಥಮ ಸ್ಥಾನದಲ್ಲಿರುವ ಜಿಲ್ಲೆ. ಸರ್ಕಾರಕ್ಕೂ ನಾವು  ಮನವಿಗಳನ್ನ ಸಲ್ಲಿಸಿದ್ದು ಸರಕಾರದ ವಿವಿಧ ವಿಭಾಗಗಳಿಗೆ ಮನವಿ ಸಲ್ಲಿಸಿದ್ದು ಅವರು ಸ್ಪಂದಿಸಿದ್ದಾರೆ. ಇಲ್ಲಿ ಶಾಂತಿ ಸಮಿತಿ ಸಭೆಯನ್ನು ಕೂಡ ಮಾಡಿದ್ದೇವೆ. ಅಂತೂ ಈ ಬಗ್ಗೆ ಒಳ್ಳೆಯ ಬೆಳವಣಿಗೆ ಕಂಡು ಬರುತ್ತದೆ. ಮುಂದಿನ ದಿನಗಳಲ್ಲಿ ಇಲ್ಲಿ ಯಾವುದೇ ವಿಚಾರದಲ್ಲಿ ಗಲಭೆ ಆಗಬಾರದು.  ನಾವು ಎಸ್ ಪಿ,  ಡಿ ಸಿ ಗೆ ಯವರನ್ನು ಬೇಟಿ ಮಾಡಿ ಮನವಿ ಸಲ್ಲಿಸಿದ್ದು, ತಾಲೂಕು ಮಟ್ಟದಲ್ಲಿ,  ಜಿಲ್ಲಾ ಮಟ್ಟದಲ್ಲಿ ಸಮಿತಿ ಮಾಡಿ, ಆದರೆ ಶಾಂತಿಗೆ ಭಂಗ ತರುವವರನ್ನು ಸಮಿತಿಯಲ್ಲಿ ಸೇರಿಸಬೇಡಿ ಅಂತ ಹೇಳಿದ್ದಾರೆ. ಈ ಮೊದಲು ಹೇಳಿದ ಹಾಗೆ ಈ ಗಲಾಟೆಯಲ್ಲಿ ಕೇವಲ 10-15 ಮಂದಿ ಮಾತ್ರ ರಾಜಕಾರಣಿಗಳು ಅವರ ಸ್ವಾರ್ಥಕ್ಕಾಗಿ ಕಲುಷಿತ ವಾತಾವರಣ ವನ್ನು ನಿರ್ಮಿಸಲು ಪ್ರಚೋದನೆಯನ್ನು ನೀಡುತ್ತಾರೆ.  ಅನೇಕ ಯುವಕರು ಜೈಲಿನಲ್ಲಿದ್ದಾರೆ.  ಕೆಲವರು ಜೀವವನ್ನು ಕಳೆದುಕೊಂಡಿದ್ದಾರೆ.  ಇದಕ್ಕೆ ಯಾರು ಹೊಣೆ.  ಇದೆಲ್ಲ ನಮ್ಮವರ ಸ್ವಾರ್ಥಕ್ಕೆ. ಇದು ಆಗಬಾರದು. ಅನ್ಯೋನತೆಯ ವಾತಾವರಣ ನಿರ್ಮಾಣವಾಗಬೇಕು. ಇಲ್ಲಿ ಧಾರ್ಮಿಕ ವಿಚಾರದಲ್ಲಿಯೂ, ವೈಯಕ್ತಿಕ ವಿಚಾರದಲ್ಲಿ ಮಾಲಿನ್ಯವಾಗಿದೆ. ಮತ್ತೊಂದು ವಿಚಾರ ಏನಂದರೆ ನೆರೆ ರಾಜ್ಯಗಳಿಂದ ಬರುವಂತಹ ಗಾಂಜಾ.  ಅದನ್ನೆಲ್ಲ ನಿಲ್ಲಿಸಬೇಕು. ಇದರಿಂದ ಎಷ್ಟು ಯುವಕರು, ಎಷ್ಟು ಸಂಸಾರಗಳು ಹಾಳಾಗುತ್ತದೆ. ಎಲ್ಲದಕ್ಕೂ ಒಂದು ಒಳ್ಳೆಯ ಸಂದೇಶ ಹೋಗಬೇಕು. ನಮ್ಮ ಜಿಲ್ಲೆಗಳಲ್ಲಿ ಧರ್ಮ ಇದ್ದವರು ಹೆಚ್ಚಿಗೆ ಇದ್ದರೆ ಅದರ್ಮಿಗ್ಳು ಕಡಿಮೆ ಇದ್ದಾರೆ. ಅಧರ್ಮದವರಿಗಿಂತ ಒಳ್ಳೆಯವರು ಹೆಚ್ಚಿಗೆ ಇದ್ದಾರೆ. ನಾವು ಹಾಳನ್ನು  ಬಿಟ್ಟು ಒಳ್ಳೆಯದನ್ನು ನೋಡಿದರೆ ಈ ಜಿಲ್ಲೆಯಲ್ಲಿ ರಾಷ್ಟ್ರಕ್ಕೆ ಒಂದು ಉತ್ತಮ ಸಂದೇಶವನ್ನು ಕೊಡುವಂತಹ ಜಿಲ್ಲೆ ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರ ನಮ್ಮೊಂದಿಗಿರಲಿ ಎಂದರು.

ಉದ್ಯಮಿ ಹಾಗೂ ಸಮಾಜ ಸೇವಕ ಹೈದರ್  ಪರ್ತಿಪ್ಪಾಡಿ ಯವರು ಮಾತನಾಡುತ್ತಾ  ಮುಂಬೈಯಿಂದ ನಮ್ಮ ಜಯಕೃಷ್ಣ ಶೆಟ್ಟಿ ಯವರು  ಎಲ್ಲರನ್ನು ಸೇರಿಸಿ ಇಂದು ಇಲ್ಲಿಗೆ ಬಂದಿದ್ದಾರೆ. ಕಳೆದ 40 ವರ್ಷದಿಂದ ಎಲ್ಲಾ ರೋಗಕ್ಕೂ ಮದ್ದು ಆಗಿದೆ, ಆದರೆ ಆದರೆ ಕೋಮುವಾದಕ್ಕೆ ಈತನಕ ಮದ್ದು ಸಿಗಲಿಲ್ಲ. ಅಲ್ಲದೆ ಅದು ನಮ್ಮನ್ನು ಕೈಬಿಡುವುದಿಲ್ಲ. 40 ವರ್ಷಗಳಿಂದ ನಾವು ಸೌಹಾರ್ದ ಸಂದೇಶವನ್ನು ನೀಡುವಂತ ಕಾರ್ಯಕ್ರಮಗಳನ್ನು ಮಾಡಿದ್ದೇವೆ.  ಆದರೂ ಇವತ್ತಿನವರೆಗೆ ಅದಕ್ಕೆ ಪರಿಹಾರ ಸಿಗಲಿಲ್ಲ.  ಆದರೆ ಮುಂಬೈಯವರು ಈ ವಿಷಯದಲ್ಲಿ ಕೈ ಹಾಕಿದ್ದು,  ಜಯಕೃಷ್ಣ ಶೆಟ್ಟಿ,  ಜಗದೀಶ್ ಅಧಿಕಾರಿ, ವಿಲ್ಸನ್, ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ಇವರ ನೇತೃತ್ವದಲ್ಲಿನ್ ನಾವೆಲ್ಲರೂ ಸೇರಿ ಇವತ್ತು ಮಾನಸಿಕ ಸೌಹಾರ್ದತೆಯನ್ನು ತರುವಂತಹ ಪ್ರಯತ್ನವನ್ನು ಮಾಡುತ್ತಿದ್ದೇವೆ. ಇಷ್ಟರವರೆಗೆ ಈ ಜಿಲ್ಲೆಯಲ್ಲಿ ಏನಾಗಿತ್ತು, ಬಾಯಿ ಮಾತಿನಲ್ಲಿ ಮಾತ್ರ ಸೌಹಾರ್ದ ಅಂತ ಹೇಳಿ ಬಹಳ ಪ್ರಯತ್ನ ಪಟ್ಟಿದ್ದೇನೆ.  ಜಯಕೃಷ್ಣರವರ ಉದ್ದೇಶ ನಾನು ಹುಟ್ಟಿದ ಊರು, ನಾನು ಬೆಳೆದ ಊರು,  ನಾನು ಮುಂಬಯಿಯಲ್ಲಿ ಇರಬಹುದು  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವಂತಹ ಈ ಪದ್ಧತಿಯನ್ನು ತಿಳಿದುಕೊಂಡಂತಹ ಅವರು ನಮಗೆಲ್ಲ ಧೈರ್ಯ ತುಂಬಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಬಲಿಷ್ಠವಾದಂತ ಸಮಿತಿಯನ್ನು ಮಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾನಸಿಕ ನೆಮ್ಮದಿಯನ್ನು ಎಲ್ಲರಿಗೂ ತರುವಂತ ವ್ಯವಸ್ಥೆಯನ್ನು ಮಾಡುತ್ತೇವೆ ಎಂಬ ಭರವಸೆಯನ್ನು ನೀಡುತ್ತೇವೆ. ಇದಕ್ಕೆ ಮೊದಲನೇದಾಗಿ ನಮ್ಮ ಮಾಧ್ಯಮ ಸಹೋದರರು, ಈ ದೇಶದಲ್ಲಿ ಅನ್ಯಾಯವಾದಾಗ ಅದರ ವಿರುದ್ಧ ಹೋರಾಟ ಮಾಡುವವರು ಮಾಧ್ಯಮದವರು. ನಿಮ್ಮ ಸಹಕಾರ ನಮಗೆ ಇದ್ದಲ್ಲಿ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿಯನ್ನು ನಿಲ್ಲಿಸಬಹುದು. ಇದು  ನಿಮ್ಮಿಂದ ಸಾಧ್ಯ. ಯಾಕೆಂದರೆ ನಮಗೆ ಎಲ್ಲಾ ಕಡೆ ನಡೆದು ಹೋಗಲಿಕ್ಕೆ ಅಥವಾ ಹೋಗಿ ತಿಳಿಸಲಿಕ್ಕೆ ಸಾಧ್ಯವಿಲ್ಲ.  ಮುಂಬೈಯವರು ಇಲ್ಲಿಗೆ ಬಂದು ಇಂತಹ ಒಂದು ಪ್ರೆಸ್ ಮೀಟ್ ಮಾಡಿರಲಿಕ್ಕಿಲ್ಲ. ಆದುದರಿಂದ ಈ ವಿಚಾರದಲ್ಲಿ ಒಳ್ಳೆಯ ರೀತಿಯಲ್ಲಿ ಪ್ರಚಾರ ಕೊಡಿ. ಇದು ನಾವು ನಮ್ಮ ಮನೆಗೆ ಮಾಡುವಂತ ವ್ಯವಸ್ಥೆ ಅಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಬಡ ಜನರಿಗೆ ಅನ್ಯಾಯವಾಗುತ್ತಿರುವಂತ ವ್ಯಕ್ತಿಗಳಿಗೆ ಸಹಾಯವಾಗುವಂತೆ ಈ ವಿಚಾರದಲ್ಲಿ ಉತ್ತಮವಾದ ಪ್ರಚಾರವನ್ನು ನೀಡಿ.  ಮುಂದಿನ ದಿನಗಳಲ್ಲಿ ನಮ್ಮ ಮುಂದಿನ ಉದ್ದೇಶಗಳು ಬಗ್ಗೆ ಆಗಾಗ ನಾವು ನಿಮ್ಮನ್ನು ಆಮಂತ್ರಿಸಲಿದ್ದೇವೆ. ಬಹಳಷ್ಟು ವಿಚಾರಗಳನ್ನು ನಾವು ನಿಮ್ಮ ಮುಂದೆ ಇಡಿತ್ತೇವೆ. ನಮ್ಮ ಈ ದಕ್ಷಿಣ ಕನ್ನಡ ಜಿಲ್ಲೆಯನ್ನು ಒಂದು ಸರ್ವೋತ್ತಮ ಜಿಲ್ಲೆಯಾಗಿರುಸುವ ಪ್ರಯತ್ನ ಪಡುತ್ತೇವೆ. ಜಯಕೃಷ್ಣ ಶೆಟ್ಟಿ ಅವರ ಈ ಪ್ರಯತ್ನಕ್ಕೆ ಖಂಡಿತವಾಗಿ ನಾವು ಬೆಂಬಲ ನೀಡುತ್ತೇವೆ ಎಂದರು.

ಜಯಶ್ರೀಕೃಷ್ಣ ಪರಿಸರ ಪ್ರೇಮಿಯ ಜಿಲ್ಲಾ ಕಾರ್ಯಾಧ್ಯಕ್ಷರಾದ ಹರೀಶ್ ಕುಮಾರ್ ಎಂ. ಶೆಟ್ಟಿ ಯವರು ಮಾತನಾಡುತ್ತಾ ನಾನು ಸಮಿತಿಯ ಕಾರ್ಯಾಧ್ಯಕ್ಷನಾಗಿ ಸುಮಾರು ಎರಡು ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡಿದ್ದೇನೆ. ಇದಕ್ಕೆ ಮೊದಲು ಇಲ್ಲಿ ಶಾಂತಿ ಸೌಹಾರ್ದತೆ ಬಂದರೆ ಬಗ್ಗೆ ಒಂದು ಗೋಷ್ಠಿ ನಡೆದಿತ್ತು. ಅದರಲ್ಲಿ ಹೇಳಿದಂತಹ ಎಲ್ಲಾ ವಿಷಯಗಳನ್ನು ಮಾನ್ಯ ಅಧಿಕಾರಿಯವರು ಹೇಳಿದ ಹಾಗೆ ನಮ್ಮ ಸಮಿತಿಯನ್ನು ಉಡುಪಿ ಹಾಗು ದಕ್ಷಿಣ ಕನ್ನಡ ಜಿಲ್ಲೆಗೆ ವಿಸ್ತರಿಸಿ ಪ್ರತಿಯೊಂದು ತಾಲೂಕಿನಿಂದ ಮಂಗಳೂರು್, ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ, ಕಡಬ, ಮೂಡುಬಿದ್ರಿ ,ಕುಂದಾಪುರ ,ಬೈಂದೂರು, ಕಾರ್ಕಳ ಮುಂತಾದ ತಾಲೂಕಿನಿಂದ ಸಂಪನ್ಮೂಲ ಭರಿತ ಎಲ್ಲಾ ವ್ಯಕ್ತಿಗಳನ್ನು ತೆಗೆದುಕೊಂಡು ಈ ಸಮಿತಿಯನ್ನು ಮಾಡಿದ್ದೇವೆ. ಈ ಸಮಿತಿ ಇನ್ನು ಮುಂದೆ ನಮಗೆ ಬಹಳ ಪ್ರೋತ್ಸಾಹ ನೀಡಲಿದ್ದು ಸಮಿತಿ ಗಟ್ಟಿಯಾಗಿ ನಮಗೆ ಸಪೋರ್ಟ್ ಸಿಸ್ಟಮ್ ಆಗಿ ಕಾರ್ಯ ನಿರ್ವಹಿಸಲಿದೆ.  ನಾವೀಗಾಗಲೇ ಕೆಲವು ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ. ನಾವು ಶೈಕ್ಷಣಿಕ ಪ್ರವಾಸವನ್ನು ಮಾಡಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ಅದರ ಬಗ್ಗೆ ಯೋಜನೆಯನ್ನು ಮಾಡಿ ಸರಕಾರಕ್ಕೆ ನೀಡಿದ್ದೇವೆ. ಆ ಮೇಲೆ ಕಡಲು ಕೊರತ ಬಗ್ಗೆ ಬೈಂದೂರು ಮುಂತಾದೆಡೆ ಹೋಗಿ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಲು ಸಂಬಂಧ ಪಟ್ಟ ಇಲಾಖೆಯ  ಗಮನಕ್ಕೆ ತಂದಿದ್ದೇವೆ. ಇನ್ನು ಮುಂದೆ ನಮ್ಮ ಜಿಲ್ಲೆಗಳಲ್ಲಿ ಬರುವ ಪ್ರತಿಯೊಂದು ಕೈಗಾರಿಕೋದ್ಯಮಕ್ಕೆ ನಮ್ಮ ಸಮಿತಿಯಿಂದ ಸಾಧ್ಯವಾದ ಬೆಂಬಲವನ್ನು ನೀಡುವ ಹಾಗೂ ನಮ್ಮ ಜಿಲ್ಲೆಗಳಿಗೆ ಪ್ರಯೋಜನ ಆಗುವಂತಹ ಕಾರ್ಯಕ್ಕೆ ನಮ್ಮ ಸಮಿತಿ ಕ್ರಿಯಾಶೀಲವಾಗಲಿದೆ. ನಾನು  ಸೌಹಾರ್ದತೆ ಮತ್ತು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದೇನೆ. ಕೋಮುವಾದಕ್ಕೆ ಬೇಕಾದ ವ್ಯವಸ್ಥೆಯನ್ನು ಸರಕಾರ ಮಾಡಿದೆ. ನಾವು ಅದರೊಂದಿಗೆ ಸೇರಿ ಸೌಹಾರ್ದತೆ ಬಗ್ಗೆ ಮುಂದುವರಿಯುತ್ತಿದ್ದೇವೆ ಎಂದರು.

ಪತ್ರಿಕಾಗೋಷ್ಥಿಯಲ್ಲಿ ಸಮಿತಿಯ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಮಾಜಿ ಅಧ್ಯಕ್ಷ ಧರ್ಮಪಾಲ ದೇವಾಡಿಗ, ವಿಲ್ಸನ್ ಫೆರ್ನಾಂಡೀಸ್, ಜಿಲ್ಲಾ ಉಪ ಕಾರ್ಯಾಧ್ಯಕ್ಷ ಅರುಣ್ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಸುರೇಂದ್ರ ಮೆಂಡನ್, ಜೊತೆ ಕಾರ್ಯದರ್ಶಿ ಜಿ. ಟಿಆಚಾರ್ಯ, ಸಮಿತಿಯ ವಕ್ತಾರ ದಯಾಸಾಗರ್ ಚೌಟ ಮತ್ತು ಸುರೇಶ್ ಕೋಟ್ಯಾನ್ ಮೂಡಬಿದ್ರಿ ಉಪಸ್ಥಿತರಿದ್ದರು.