ವಿಶಿಷ್ಟ ಕಂಠದ ಸಂಗೀತಗಾರ್ತಿ ಸವಿತಾ ಕೋಡಂದೂರು ಅವರು ಹಲವಾರು ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಅಪಾರ ಸಾಧನೆಗಾಗಿ "ಚಂದನ ಸ್ವರ ಸಂಗೀತ ಪ್ರಶಸ್ತಿ" ಗೆ ಆಯ್ಕೆಯಾಗಿದ್ದಾರೆ. ಆಗಸ್ಟ್ 03 ರಂದು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಜರುಗಲಿರುವ ಚಂದನ ಸಾಹಿತ್ಯ ಸಂಗೀತ ಸಂಭ್ರಮೋತ್ಸವದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಖ್ಯಾತ ಸಾಹಿತಿಗಳಾದ ಪ್ರಭಾಕರ ಶಿಶಿಲ, ನಿವೃತ್ತ ತಾಂತ್ರಿಕ ಕೃಷಿ ಅಧಿಕಾರಿಗಳಾದ ಮೋಹನ್ ನಂಗಾರು, ಹಾ ಮ ಸತೀಶ್ ಬೆಂಗಳೂರು, ನಾರಾಯಣ ರೈ ಕುಕ್ಕುವಳ್ಳಿ, ಶ್ರೀ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ಇನ್ನಿತರರು ಪ್ರಧಾನ ಮಾಡುವರು.

ಚಂದನ ಸಾಹಿತ್ಯ ವೇದಿಕೆಯು ತನ್ನ 20ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ ಚಂದನ ಸಾಹಿತ್ಯ ಸಂಗೀತ ಸಂಭ್ರಮೋತ್ಸವ - 2025 ಈ ಸಮಾರಂಭದಲ್ಲಿ ಸವಿತಾ ಕೋಡಂದೂರು ಅವರಿಗೆ ಚಂದನ ಸ್ವರ ಸಂಗೀತ ಪ್ರಶಸ್ತಿಯನ್ನು ನೀಡಿ ಗೌರವಿಸುವರು ಎಂದು ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್. ಭೀಮರಾವ್ ವಾಷ್ಠರ್ ಸುಳ್ಯ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.