ಮಂಗಳೂರು: ನಗರದಲ್ಲಿ ವಿಪರೀತ ಮಳೆಗೆ ನಗರದ ವಿವಿಧ ಕಡೆಗಳಲ್ಲಿ ಅನೇಕ ಪ್ರದೇಶಗಳಲ್ಲಿ ಭೂಕುಸಿತ, ಗುಡ್ಡಕುಸಿತ, ಮನೆ ಕುಸಿತ ಉಂಟಾಗಿದ್ದು, ಸದರಿ ಪ್ರದೇಶಗಳಲ್ಲಿ ಅದ ನಷ್ಟವನ್ನು ಸರಕಾರದ ಮಟ್ಟದಲ್ಲಿ ನಿರ್ಮಾಣ ಮಾಡಿಕೊಡಲು ಅಂದಾಜುವೆಚ್ಚವನ್ನು ತಯಾರಿಸಿ, ಸರಕಾರಕ್ಕೆ ಸಲ್ಲಿಸುವಂತೆ ಮಹಾನಗರ ಪಾಲಿಕೆ ಇಂಜಿನಿಯರ್ ಗಳಿಗೆ ಐವನ್ ಡಿʼಸೋಜಾ ಸೂಚಿಸಿದರು.
ಮಂಗಳೂರಿನ ಶಕ್ತಿನಗರ ವಾರ್ಡ್‌ನ ಕ್ಯಾಸ್ತಲಿನೋ ಕಾಲನಿಯಲ್ಲಿ ಗುಡ್ಡ ಕುಸಿತ ಉಂಟಾಗಿ ಅನೇಕ ಮನೆಗಳು ಸರಕಾರದಿಂದ ನಿರ್ಮಿಸಿದಂತಹ 3 ಮನೆಗಳು ಗುಡ್ಡ ಕುಸಿತದಿಂದಾಗಿ ಅಪಾಯದ ಸ್ಥಿತಿಯಲ್ಲಿದ್ದು ಈ ಮನೆಗಳ ರಕ್ಷಣೆ ಮಾಡುವುದು ಸರಕಾರದ ಜವಬ್ದಾರಿ ಈ ಬಗ್ಗೆ ಕಾರ್ಯಪ್ರವೃತ್ತರಾಗಬೇಕು ಮುಂದೆ ಅನಾಹುತಗಳು ಅಗದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ಐವನ್ ಡಿʼಸೋಜಾ ಇಂಜಿನಿಯರ್ ಗಳಿಗೆ ಸೂಚಿಸಿದರು.
ನಗರದಲ್ಲಿ ಅನೇಕ ಕಡೆ ರಸ್ತೆಗಳು ತೀರಾ ಹಾಳಾಗಿದ್ದು, ಈ ರಸ್ತೆ ನಿರ್ಮಾಣ ಮಾಡಲು ತಾತ್ಕಾಲಿಕವಾಗಿ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಮತ್ತು ರಸ್ತೆಯಲ್ಲಿ ಗುಂಡಿಗಳನ್ನು ತುಂಬಿಸತಕ್ಕಂತಹ ಕೆಲಸಗಳು ಮತ್ತು ನಗರದ ಜನರು ತಮ್ಮ ಸಮಸ್ಯೆಗಳನ್ನು ಹೇಳಲು ದೂರವಾಣಿ ಕರೆಗಳನ್ನು ಮಾಡಿದಾಗ ಇಂಜಿನಿಯರ್‌ಗಳು ದೂರವಾಣಿ ಕರೆಗಳನ್ನು ಸ್ವೀಕರಿಸದೇ ಇರುವ ಬಗ್ಗೆ ದೂರುಗಳು ಬಂದಿದ್ದು ಈ ಬಗ್ಗೆ ಕೂಡ ಜನರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರ ಕೊಡಬೇಕು ಎಂದು ಈ ಸಂದರ್ಭದಲ್ಲಿ ಇಂಜಿನಿಯರ್ ಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಭಾಸ್ಕರ್ ಮೊಯಿಲಿ, ಮಾಜಿ ಕಾರ್ಪೋರೇಟರ್ ನಾಗೇಂದ್ರ ಕುಮಾರ್, AEE ಗಳಾದ ಶಿವಲಿಂಗಪ್ಪ, ರಾಜೇಶ್, ಕೋಟ್ರೇಶ್, ಪುನೀತ್ ಮುಂತಾದವರು ಉಪಸ್ಥಿರಿದ್ದರು.