ಮಂಗಳೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮ್ಯಾಪ್ಸ್ ಕಾಲೇಜು ಮಂಗಳೂರು ಇವರ ಸಹಕಾರದೊಂದಿಗೆ ಖ್ಯಾತ ವಚನ ಸಾಹಿತಿ, ಕವಿ ಸಂಶೋಧಕರು ಆಗಿರುವ ಫ. ಗು. ಹಳಕಟ್ಟಿಯವರ ಜನ್ಮದಿನವನ್ನು ಮ್ಯಾಪ್ಸ್ ಪಿ.ಯು ಕಾಲೇಜಿನಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆಯ ಉಪಪ್ರಾಂಶುಪಾಲ ಡಾ. ಪ್ರಭಾಕರ್ ನೀರ್‍ಮಾರ್ಗ ಮಾತನಾಡಿ ಫ.ಗು. ಹಳಕಟ್ಟಿಯವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದವರು. ವಚನ ಸಾಹಿತ್ಯದಲ್ಲಿ ಬಹಳಷ್ಟು ಶ್ರಮಿಸಿದವರು. ಅವರ ಜನ್ಮದಿನವನ್ನು ವಚನ ಸಾಹಿತ್ಯ ಸಂರಕ್ಷಣಾದಿನವನ್ನಾಗಿ ಆಚರಿಸುತ್ತಿರುವುದು ನಮ್ಮ ಸೌಭಾಗ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮ್ಯಾಪ್ಸ್ ಪಿ.ಯು ಕಾಲೇಜಿನ ಪ್ರಾಂಶುಪಾಲೆ ಅಶ್ವಿನಿ ಕುಮಾರಿ ಮಾತನಾಡಿ, ಹಳಕಟ್ಟಿಯವರ ಸಾಹಿತ್ಯಿಕ ಕೊಡುಗೆಗಳನ್ನು ಅನನ್ಯಎಂದು ತಿಳಿಸಿದರು.
ಪದುವಾ ಕಾಲೇಜಿನ ಸಹಾಯಕಿ ಪ್ರಾಧ್ಯಾಪಕಿಅಕ್ಷತಾ ಶೆಟ್ಟಿ ಉಪನ್ಯಾಸ ನೀಡಿ,ಫ.ಗು. ಹಳಕಟ್ಟಿಯವರು ಓರ್ವ ಶ್ರೇಷ್ಠ ವಚನ ಸಾಹಿತಿ, ಕವಿಗಳಾಗಿದ್ದು ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುತ್ತಾರೆ. ಅವರ ಬದುಕು ಹಾಗೂ ಸಾಧನೆಗಳು ಇಂದಿನವರೆಗೆ ಮಾದರಿಯಾಗಿದೆ ಎಂದರು.
ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಸ್ವಾಗತಿಸಿ, ವಿದ್ಯಾರ್ಥಿನಿ ತವಿಷ್ಕಾ ಕಾರ್ಯಕ್ರಮ ನಿರ್ವಹಿಸಿದರು.