ಮಂಗಳೂರು, ಅ.30: ಯುವನಿಧಿ ಯೋಜನೆಯಲ್ಲಿ ನೋಂದಾವಣಿಯಾದ ಅಭ್ಯರ್ಥಿಗಳು ಕಡ್ಡಾಯವಾಗಿ https://sevasindhuservices.karnataka.gov.in ನಲ್ಲಿ ತಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂಬುವುದನ್ನು ಪರಿಶೀಲಿಸಿಕೊಂಡು, ಹಾಗೂ ಈಗಾಗಲೇ ನೊಂದಾಯಿಸಿಕೊಂಡು ಹಣ ಪಡೆಯುತ್ತಿರುವ ಫಲಾನುಭವಿಗಳು ತಮ್ಮ ಸ್ವಯಂ ಘೋಷಣೆಯನ್ನು ಪ್ರತಿ ತ್ರೈಮಾಸಿಕದ ಬದಲಾಗಿ ಮಾಸಿಕವಾಗಿ (ಈ ಮೊದಲಿನಂತೆ) ನವೆಂಬರ್ ತಿಂಗಳಿನಿಂದ ಪ್ರತೀ ತಿಂಗಳಿನ 1ನೇ ದಿನಾಂಕದಿಂದ 25 ನೇ ದಿನಾಂಕದೊಳಗೆ ಮಾಡಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ (ದೂರವಾಣಿ ಸಂಖ್ಯೆ 0824-2457139) ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.