ಕರ್ಫ್ಯೂ ಫಲ ನೀಡಿಲ್ಲವಾದ್ದರಿಂದ ಕಠಿಣ ಲಾಕ್‌ಡೌನ್ ಘೋಷಣೆ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಶುಕ್ರವಾರ ಸಂಪುಟ ಸಹೋದ್ಯೋಗಿಗಳ ಜೊತೆಗೆ ಚರ್ಚಿಸಿದ ಬಳಿಕ ಅವರು ಲಾಕ್‌ಡೌನ್ ವಿವರ ನೀಡಿದರು. 10ನೇ ತೇದಿ ಬೆಳಿಗ್ಗೆ 6ರಿಂದ 24ನೇ ತಾರೀಕು ಬೆಳಿಗ್ಗೆ 6 ಗಂಟೆಗಳ ತನಕ ಲಾಕ್‌ಡೌನ್ ಇರುತ್ತದೆ.

ಜೀವನಾವಶ್ಯಕ‌ ವಸ್ತುಗಳ ಮಾರಾಟ ‌ಬೆಳಿಗ್ಗೆ 6ರಿಂದ 10 ಗಂಟೆಗಳವರೆಗೆ ಇರುತ್ತದೆ. ಆ ಅವಧಿಯ ಬಳಿಕ ಹೊರಗೆ ಕಾಣಿಸಿಕೊಂಡರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು. ಅಲ್ಲದೆ ಖರೀದಿಗೆ ಅನಗತ್ಯವಾಗಿ ದೂರ ಹೋಗುವಂತಿಲ್ಲ ಎಂದೂ ಅವರು ಹೇಳಿದರು.