ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರದ 24 ಗಂಟೆಗಳಲ್ಲಿ ಆಘಾತಕಾರಿ 7 ಜನರ ಮರಣವು ಕೊರೋನಾದಿಂದ ಆಗಿದೆ.
ನೋವೆಲ್ ಕೋವಿಡ್19 ಅಲ್ಲಿಗೆ ದಕ್ಷಿಣ ಕನ್ನಡದಲ್ಲಿ ಬಲಿ ತೆಗೆದುಕೊಂಡವರ ಸಂಖ್ಯೆಯು 780 ಆಯಿತು.
ನಿನ್ನೆ ಯ ಅದೇ ಅವಧಿಯಲ್ಲಿ 1,633 ಹೊಸ ಕೋವಿಡ್ ಬಾಧಿತರು ಗುರುತಿಸಲ್ಪಟ್ಟಿದ್ದಾರೆ. ಒಟ್ಟಾರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೊರೋನಾ ಏಟು ತಿಂದವರ ಸಂಖ್ಯೆಯು 52,629 ಆಯಿತು.