ಪ್ರಧಾನಿ ಮೋದಿಯವರೇ ದೇಶದ ಆಮ್ಲಜನಕದ ನಿರ್ವಹಣೆ ಮಾಡುತ್ತಿರುವುದರಿಂದ ಕರ್ನಾಟಕವು ಆಮ್ಲಜನಕ ಕೊರತೆಯ ಸಾವು ಕಾಣುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅಲವತ್ತು ಕೊಂಡಿದ್ದಾರೆ.
ಕರ್ನಾಟಕದಲ್ಲಿ 865ರಿಂದ 1,000 ಟನ್‌ವರೆಗೆ ಮೆಡಿಕಲ್ ಆಮ್ಲಜನಕ ಉತ್ಪಾದನೆ ಆಗುತ್ತಿದೆ. ಮೋದಿಯವರ ವಿಚಕ್ಷಣೆಯಲ್ಲಿ ಅದರಲ್ಲಿ ಬಹುಪಾಲು ಆಂಧ್ರ, ತೆಲಂಗಾಣ, ಮಹಾರಾಷ್ಟ್ರಗಳಿಗೆ ಹಂಚಿಕೆಯಾಗುತ್ತಿದೆ. ಈ ಕಾರಣದಿಂದ ರಾಜ್ಯ ಆಕ್ಸಿಜನ್ ಕೊರತೆ ಎದುರಿಸುತ್ತಿದೆ.
ರಾಜ್ಯಕ್ಕೆ ಪ್ರತಿ ದಿನ ಈಗ 1050 ಟನ್‌ಗಳಷ್ಟು ಆಕ್ಸಿಜನ್‌ನ ಅಗತ್ಯವಿದೆ. ಆದರೆ ಅದರ ಅರ್ಧದಷ್ಟು ಮಾತ್ರ ಸಿಗುತ್ತದೆ. ಚಾಮರಾಜನಗರದಲ್ಲಿ ಆಮ್ಲಜನಕ ಪೂರೈಕೆ ಬಗೆಗೆ ಹಾಹಾಕಾರ ಎದ್ದಿದೆ. ಆಮ್ಲಜನಕ ಇಲ್ಲದೆ ಮತ್ತಷ್ಟು ಸಾವು ಆಗಿದೆಯೆಂದೂ ಸರಕಾರ ಮತ್ತು ಜಿಲ್ಲಾಡಳಿತ, ಸಂಸದರು ಮುಚ್ಚಿ ಹಾಕುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೇಂದ್ರ ರಾಸಾಯನಿಕ ಸಚಿವ ಸದಾನಂದ ಗೌಡರು ಮೊನ್ನೆ ರಾಜ್ಯಕ್ಕೆ ಹೆಚ್ಚುವರಿ 800 ಟನ್ ಮೆಡಿಕಲ್ ಆಮ್ಲಜನಕ ಪೂರೈಸುವುದಾಗಿ ಹೇಳಿದ್ದಾರೆ. ಅದಿನ್ನೂ ಬಂದಿಲ್ಲ ಎಂದು ರಾಜ್ಯ ಸರಕಾರ ಹೇಳಿದೆ. ಈ ನಡುವೆ ಒಡಿಶಾದಿಂದ ಕೇಂದ್ರದ ಹಂಚಿಕೆ ನೀತಿಯಂತೆ ಸ್ವಲ್ಪ ಆಮ್ಲಜನಕ ಬಂದಿದೆ. ಇನ್ನೆರಡು ದಿನದಲ್ಲಿ ರೈಲು ಟ್ಯಾಂಕರ್ ಮೂಲಕ ಒಡಿಶಾದ ಹಾದಿಯಾಗಿ ರಾಜ್ಯಕ್ಕೆ ಆಮ್ಲಜನಕ ಬರುವುದೆಂದು ಹೇಳಲಾಗಿದೆ. ಆದರೆ ಕೊರೋನಾ ಕಾಯಲು ತಯಾರಿಸಲ್ಲ.