ಅವಿಭಜಿತ ದ. ಕ. ಜಿಲ್ಲೆಯಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆ ಇಲ್ಲ ಎಂದು ಮಂಗಳೂರು, ಉಡುಪಿಗಳಲ್ಲಿ ಸಂಬಂಧಿಸಿದವರು ಸ್ಪಷ್ಟ ಪಡಿಸಿದ್ದಾರೆ.
ದ. ಕ. ದಲ್ಲಿ 8 ಟನ್ (8,000 ಕಿಲೋ ಲೀಟರ್ ಆಮ್ಲಜನಕ ದಿನಕ್ಕೆ ಅಗತ್ಯವಿದೆ. ಸಾಕಷ್ಟು ದಾಸ್ತಾನು ಇರುವುದರೊಂದಿಗೆ ನಿತ್ಯ 6.5 ಟನ್ ಪೂರೈಕೆ ಸಹ ಇರುವುದರಿಂದ ತೊಂದರೆ ಇಲ್ಲ. ವೆನ್‌ಲಾಕ್ ಮತ್ತು ಇಲ್ಲಿನ 8 ಖಾಸಗಿ ಆಸ್ಪತ್ರೆಗಳು 15 ದಿನಗಳಿಗೆ ಅಗತ್ಯದಷ್ಟು ಆಮ್ಲಜನಕವನ್ನು ನಿರಂತರ ದಾಸ್ತಾನು ಇರುವಂತೆ ನೋಡಿಕೊಳ್ಳುತ್ತಲಿವೆ.
ಉಡುಪಿ ಜಿಲ್ಲೆಗೆ ದಿನಕ್ಕೆ 5ರಿಂದ 6 ಟನ್ ಮೆಡಿಕಲ್ ಆಮ್ಲಜನಕದ ಅಗತ್ಯವಿದೆ. ಅದಕ್ಕೆ ಕೊರತೆಯಿಲ್ಲ. ಕಾಪುವಿನ ಬೆಳಪು ಮತ್ತು ಮಣಿಪಾಲಗಳಲ್ಲಿ 51 ಟನ್ ಸಾಮರ್ಥ್ಯದ ಆಮ್ಲಜನಕ ಕಾಪಿಡುವ ವ್ಯವಸ್ಥೆ ಇದೆ.
ಇದರ ನಡುವೆ ಎಂಆರ್‌ಪಿಎಲ್ 1.12 ಕೋಟಿ ವೆಚ್ಚದಲ್ಲಿ 5 ಕಡೆ 5 ಕಿರು ಆಮ್ಲಜನಕ ಉತ್ಪಾದನಾ ಘಟಕಗಳನ್ನು ಆರಂಭಿಸಲು ಮುಂದಾಗಿದೆ.