ವಂಚನೆ ಆರೋಪ ಹೊತ್ತಿರುವ ಚೈತ್ರಾ ಕುಂದಾಪುರ ಮತ್ತು ಸಹಚರರಿಂದ ವಂಚಿಸಿದ ಹಣ ಮತ್ತು ಚಿನ್ನಾಭರಣಗಳನ್ನು ಸಿಸಿಬಿ ಪೋಲೀಸರು ವಶಪಡಿಸಿಕೊಂಡರು.

ಚೈತ್ರಾ ಕುಂದಾಪುರ ಹೆಸರಿನಲ್ಲಿ ಇದ್ದ 1.8 ಕೋಟಿ ರೂಪಾಯಿ ನಿಶ್ಚಿತ ಠೇವಣಿ, ಮನೆಯಲ್ಲಿದ್ದ 65 ಲಕ್ಷ ರೂಪಾಯಿ ಚಿನ್ನಾಭರಣಗಳನ್ನು ಪೋಲೀಸರು ವಶಪಡಿಸಿಕೊಂಡರು. ಬೆಳ್ತಂಗಡಿಯಲ್ಲಿ ಶ್ರೀಕಾಂತ್ ಎಂಬವರ ಜೊತೆಗೆ ಜಂಟಿಯಾಗಿ ಚೈತ್ರಾ ಇಟ್ಟಿದ್ದ 40 ಲಕ್ಷ ರೂಪಾಯಿ ಸಹ ಮುಟ್ಟುಗೋಲು ಹಾಕಿಕೊಂಡರು.

ಚೈತ್ರಾಳ ಕಾರಿನ ಬಗೆಗೂ ಮಾಹಿತಿ ಕಲೆ ಹಾಕಲಾಗಿದೆ. ವಂಚಕ ಜಾಲದ ಚೈತ್ರಾ ಸಹಚರ ಶ್ರೀಕಾಂತ್ ನಾಯಕನ ಗುಡ್ಡೆಯಂಗಡಿ ಮನೆಯಲ್ಲಿ ಜಪ್ತಿ ಮಾಡಿದಾಗ ಅಡಗಿಸಿಟ್ಟಿದ್ದ ರೂ. 41 ಲಕ್ಷ ರೂಪಾಯಿ ದೊರೆತಿದೆ. ಶ್ರೀಕಾಂತ್ ನಾಯಕ್ ಕಟ್ಟುತ್ತಿರುವ ಅರ್ಧ ಮುಗಿದಿರುವ ಮನೆಯ ಮೌಲ್ಯ 80 ಲಕ್ಷ ರೂಪಾಯಿ ಎಂದು ತಿಳಿದು ಬಂದಿದೆ.

ಚೈತ್ರಾಳ ಇನ್ನೊಬ್ಬ ಸಹಚರ ಗಗನ್ ಕಡೂರು ಸಾಲು ಮರದ ತಿಮ್ಮಕ್ಕನಿಗೆ ನೀಡಿದ್ದ ಸರಕಾರಿ ಕಾರನ್ನು ದುರುಪಯೋಗ ಮಾಡಿದ್ದಾನೆ. ಈ ಗಗನ್ ಕಡೂರು ಮತ್ತು ಸಾಲುಮರದ ತಿಮ್ಮಕ್ಕನ ಸಾಕು ಮಗ ಎನ್ನುವ ಉಮೇಶ್ ಸ್ನೇಹಿತರು ಎನ್ನಲಾಗಿದೆ.