ಮೂಡುಬಿದಿರೆ: ಬೆಳುವಾಯಿ ಯಕ್ಷದೇವ ಮಿತ್ರಕಲಾ ಮಂಡಳಿ ಕಳೆದ 26 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸ್ಮರಣೀಯ ಕಾರ್ಯಕ್ರಮಗಳನ್ನು, ತರಬೇತಿ, ಪ್ರಸಂಗ ಪುಸ್ತಕ, ಯಕ್ಷಗಾನ ಸ್ಪರ್ಧೆ , ದೇಶ ವಿದೇಶಗಳಲ್ಲಿ ಪ್ರದರ್ಶನ, ಸಾಧಕರಿಗೆ ಸನ್ಮಾನ ಇತ್ಯಾ ದಿಯೊಂದಿಗೆ ಹಿರಿಯರನ್ನು ಗುರುತಿಸಿ, ಗೌರವಿಸುವ ಕಾರ್ಯಕ್ರಮವನ್ನು ನಡೆಸುತ್ತಿದೆ. ಜುಲೈ 27ರಂದು ಮಧ್ಯಾಹ್ನ 1.30 ರಿಂದ 27ನೇ ವಾರ್ಷಿಕೋತ್ಸವವನ್ನು ಯಕ್ಷ ಸಂಭ್ರಮ 2024 ಹೆಸರಿನಲ್ಲಿ ಮೂಡುಬಿದರೆಯ ಕಡಲಕೆರೆಯ ಪ್ರೀತಂ ಗಾರ್ಡನ್ನಲ್ಲಿ ನಡೆಸಲಿದೆ.

ದಿ. ಕೆ ಸುಬ್ರಾಯ ಭಟ್ ಕಲಾವೇದಿಕೆಯಲ್ಲಿ ಉದ್ಘಾಟನೆಯನ್ನು ನಿಶ್ಮಿತಾ ಟವರ್ಸ್ ಮಾಲಿಕ ನಾರಾಯಣ ಪಿ.ಎಂ. ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಧನಲಕ್ಷ್ಮಿ ಕ್ಯಾಶ್ಯೂ ಇಂಡಸ್ಟ್ರಿಯ ಮಾಲಕ ಕೆ ಶ್ರೀಪತಿ ಭಟ್ ವಹಿಸಲಿದ್ದು, ಖ್ಯಾತ  ಜ್ಯೋತಿಷಿ 

ಸಂಪಿಗೆ ಡಾ.ಯೋಗಿ ಸುಧಾಕರ ತಂತ್ರಿ ಆಶೀರ್ವಚನ ನೀಡಲಿದ್ದಾರೆ. ಈ ಸಂದರ್ಭದಲ್ಲಿ  ಶ್ರೀ ಕ್ಷೇತ್ರ ಪಡ್ಯಾರಬೆಟ್ಟಿನ ಧರ್ಮದರ್ಶಿ  ಜೀವಂಧರ್ ಕುಮಾರ್ ಜೈನ್,  ಜಯಶ್ರೀ ಅಮರನಾಥ ಶೆಟ್ಟಿ, ರತ್ನ ಕ್ಲಿನಿಕ್ ನ ಡಾ. ರಮೇಶ್, ಪವರ್ ಪಾಯಿಂಟ್ ನ

ಮಾಲಕ ಮಹೇಂದ್ರ  ಕುಮಾರ್ ಜೈನ್, ಜವನೆರ್ ಬೆದ್ರದ ಸ್ಥಾಪಕಾಧ್ಯಕ್ಷ ಅಮರ್ ಕೋಟೆ, ಹಾಗೂ ಯಕ್ಷಕಲಾ ಪೊಳಲಿಯ ಸ್ಥಾಪಕಾಧ್ಯಕ್ಷ ವೆಂಕಟೇಶ್ ನಾವುಡ ಉಪಸ್ಥಿತರಿರುವರು- ಎಂದು ಮಂಡಳಿಯ ಸ್ಥಾಪಕ ಅಧ್ಯಕ್ಷ ಎಂ ದೇವಾನಂದ ಭಟ್ ಪತ್ರಿಕಾಗೋ ಷ್ಠಿಯಲ್ಲಿ ತಿಳಿಸಿರುತ್ತಾರೆ.

ತರುವಾಯ ತೆಂಕು ಬಡಗು ಕಲಾವಿದರಿಂದ ವೀರ ವೈಷ್ಣವ ಯಕ್ಷಗಾನ ನಡೆಯಲಿದೆ. ಸಂಜೆ ಗಂ.4.30ಕ್ಕೆ ಸಮಾರೋಪ ಸಮಾರಂಭದಲ್ಲಿ ಮೂಡುಬಿದ್ರೆ ಜೈನ ಮಠದ ಸ್ವಾಮೀಜಿ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯರು ಆಶೀರ್ವಚನ ನೀಡಲಿದ್ದು, ಅಧ್ಯಕ್ಷತೆಯನ್ನು ಆಳ್ವಾಸ್ ಪ್ರತಿಷ್ಠಾನದ ಡಾ. ಎಂ ಮೋಹನ್ ಆಳ್ವ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಎಸ್ ಕೆ ಎಫ್ ನ ಡಾ.ರಾಮಕೃಷ್ಣ  ಆಚಾರ್, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಹಾಗೂ ಇತರರು ಉಪಸ್ಥಿತರಿರುತ್ತಾರೆ.

ಇದೇ ಸಂದರ್ಭದಲ್ಲಿ ಯಕ್ಷದೇವ ಪ್ರಶಸ್ತಿ  2024ನ್ನು ಹಿರಿಯ ಹಿಮ್ಮೇಳ ವಾದಕ ನಾರಾಯಣ ಭಟ್ ಪೆರುವಾಯಿ, ಹಿರಿಯ ವೇಷಧಾರಿ ರಾಮ ಕುಲಾಲ್ ದಾಸನಡ್ಕರಿಗೆ ನೀಡಿ ಗೌರವಿಸಲಾಗುವುದು. ಅದೇ ರೀತಿ ದಿ. ವನಜಾಕ್ಷಿ ಅಮ್ಮ ಸಂಸ್ಮರಣ ಪ್ರಶಸ್ತಿಯನ್ನು  ನಿವೃತ್ತ  ಶಿಕ್ಷಕಿ ಹಾಗೂ ಕಲಾವಿದೆ  ಕೆ ಕಲಾವತಿ ಸುರತ್ಕಲ್ ರಿಗೆ ನೀಡಿ ಗೌರವಿಸಲಾಗುವುದು. ತದನಂತರ ತೆಂಕುತಿಟ್ಟಿನ ಕಲಾವಿದರಿಂದ ನವರಸ ರಾಮಾಯಣ ಯಕ್ಷಗಾನ ಜರುಗಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸಮಿತಿಯ ಗೌರವಾಧ್ಯಕ್ಷ ಕೆ

ಶ್ರೀಪತಿ ಭಟ್ ,ಗೌರವ ಸಲಹೆಗಾರ ಚಂದ್ರಶೇಖರ್ ರಾವ್ ಬೊಕ್ಕಸ, ಕಾರ್ಯದರ್ಶಿ ರವಿಪ್ರಸಾದ್ ಕೆ ಶೆಟ್ಟಿ ತಿಳಿಸಿದರು.