ಕಿನ್ನಿಗೋಳಿ: ಕಿನ್ನಿಗೋಳಿಯಂತಹ ಪ್ರದೇಶದಲ್ಲಿ ಯುಗಪುರುಷ ಮಾಸಪತ್ರಿಕೆಯನ್ನು ಪ್ರಾರಂಭಿಸಿ 77 ವರ್ಷಗಳನ್ನು ಕಳೆದ ಯುಗಪುರುಷ ಪತ್ರಿಕೆ ಪ್ರತಿ ವರ್ಷವೂ ಸಂಸ್ಥಾಪಕ ದಿ.ಕೊ .ಅ. ಉಡುಪ ಸಂಸ್ಕರಣೆಯನ್ನು ನಡೆಸುತ್ತಿದೆ. ಜುಲೈ 24ರಂದು ಯುಗಪುರುಷ ಸಭಾಭವನದ ಶ್ರೀ ರಾಘವೇಂದ್ರ  ಸ್ವಾಮಿ ಸನ್ನಿಧಿಯಲ್ಲಿ ಖ್ಯಾತ ವಿದ್ವಾಂಸ, ಪತ್ರಕರ್ತ , ಲೇಖಕ, ಧರ್ಮದರ್ಶಿ ಮೋಹನ್ ದಾಸ್ ಸುರತ್ಕಲ್ ಇವರಿಗೆ ಕೊ . ಅ. ಉಡುಪ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಎಡಪದವಿನ ರಾಧಾಕೃಷ್ಣತಂತ್ರಿ ಇವರಿಗೆ ಅರ್ಚಕ ಸಂಮಾನವನ್ನು ಮಾಡಲಾಯಿತು.

ಯುಗಪುರುಷ ಪ್ರಕಟನಾಲಯದಿಂದ ಪ್ರಕಟಿತ 540ನೇ ಕೃತಿ ಎಂ ವಿ ಭಟ್ ರಚಿತ ಆಧುನಿಕ ಭಾರತ ಕೃತಿಯನ್ನು ಶ್ರೀನಾಥ್  ಎಂ ಪಿ ಉಜಿರೆ ಬಿಡುಗಡೆಗೊಳಿಸಿದರು. ಮಂಗಳೂರು ವಲಯದ ವರಿಷ್ಠ ಅಂಚೆಪಾಲಕ ಶ್ರೀನಾಥ್  ಬಸರೂರು ರನ್ನು ಅಭಿನಂದಿಸಲಾಯಿತು.

ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ಗಯ್ದ ಕಟೀಲು ಧರ್ಮದರ್ಶಿ ಲಕ್ಷ್ಮೀ ನಾರಾಯಣ ಅಸ್ರಣ್ಣರು ಯುಗಪುರುಷ ನಡೆಸುತ್ತಿರುವ ಪತ್ರಿಕೆ, ಪುಸ್ತಕ ಪ್ರಕಟಣೆ, ಉತ್ತಮ ಕಲಾವಿದರ ಸನ್ಮಾನ, ಸಾಮಾಜಿಕ ಕಾರ್ಯಗಳು ಇತ್ಯಾದಿಗಳನ್ನು ತುಂಬು ಮನಸ್ಸಿನಿಂದ ಹೊಗಳಿದರು. ಧರ್ಮದರ್ಶಿ ಹರಿಕೃಷ್ಣಪುನರೂರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮುಲ್ಕಿ ಸೀಮೆಯ ಅರಸರು ದುಗ್ಗಣ್ಣಸಾವಂತರು, ಮೂಡುಬಿದಿರೆ ಉದ್ಯಮಿ ಕೆ ಶ್ರೀಪತಿ  ಭಟ್, ಡಾ. ನಯನಾಭಿರಾಮ ಉಡುಪ, ವಿರಾರ್ ಶಂಕರ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಪೃಥ್ವಿರಾಜ ಆಚಾರ್ಯ , ರಾಜಗೋಪಾಲ ಆಚಾರ್ಯ , ಸುಧಾಕರ ಆಳ್ವ ಉಪಸ್ಥಿತರಿದ್ದರು.

ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ ಪ್ರಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ತಾಳಿಪಾಡಿ ರಾಮಚಂದ್ರ ಶೆಟ್ಟಿ, ಆರೂರು ಲಕ್ಷ್ಮಿ ರಾವ್, ವಾಣಿ ಬಾಲಕೃಷ್ಣ ಆಚಾರ್ಯ ಹಾಗೂ ಡಿ ಕೆ ಜಿ ಮಲ್ಯರ ವಿದ್ಯಾರ್ಥಿ ವೇತನವನ್ನು ಲಿಟ್ಲ್ ಫ್ಲವರ್ ನ ನೆವಿಲ್ ಲಸ್ರಾದೋ , ಶಿಮಂತೂರು ಶಾರದಾದ ಅಮಿತ್ ಕೆ ಕೋಟ್ಯಾನ್, ಚಿಂತನ್, ಕಟೀಲು ಕಾಲೇಜಿನ ನಾಗೇಶ್, ನಡುಗೂಡು ಸರಕಾರಿ ಶಾಲೆಯ ಯಕ್ಷ, ಕಟೀಲಿನ ಶ್ರೇಯಾ ಕೆ, ಐಕಳದ ಪೊಂಪೈ ಯ ವರ್ಷಿತಾ ಆಚಾರ್ಯ , ರಿತೇಶ್ ಕೆ ಜಿ-ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಕೆರೆಕಾಡು ವಿನಾಯಕ ಯಕ್ಷಕಲ ತಂಡದವರಿಂದ ಅಭಿಮನ್ಯು ಕಾಳಗ-ರಕ್ತರಾತ್ರಿ ಯಕ್ಷಗಾನ ಬಯಲಾಟ ನಡೆಯಿತು.

ವರದಿ ರಾಯಿ ರಾಜಕುಮಾರ್ ಮೂಡುಬಿದಿರೆ.