ಮೂಡುಬಿದಿರೆ: ಅಲಂಗಾರು ಕಾರ್ಕಳ ಮುಖ್ಯರಸ್ತೆಯ ಬದಿಯಲ್ಲಿ ಕಾರ್ಯಾಚರಿಸುತ್ತಿದ್ದ ಪಂಡಿತ್ ರೆಸಾರ್ಟ್ ಅನ್ನು ಸಾಲವನ್ನು ಹಿಂತಿರುಗಿಸದ ನೆಲೆಯಲ್ಲಿ ಕೋರ್ಟ್ ಆದೇಶದ ಪ್ರಕಾರ ಮೂಡುಬಿದಿರೆ ಪೊಲೀಸು ಸಹಕಾರದೊಂದಿಗೆ  ಮಂಗಳೂರಿನ ಎಂಸಿಸಿ  ಬ್ಯಾಂಕ್ ಜುಲೈ 24ರಂದು ವಶಪಡಿಸಿಕೊಂಡಿದೆ. 

ಕಳೆದ ಎರಡು ಮೂರು ದಿನಗಳಿಂದ ಪೊಲೀಸ್ ಠಾಣೆಯಲ್ಲಿ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡು ಕೋರ್ಟ್ ಆದೇಶದ ಪ್ರಕಾರ ಎಂ ಸಿ ಸಿ ಬ್ಯಾಂಕ್  ಕಾರ್ಯಾಚರಣೆಗೆ ಇಳಿದು ಸ್ವತಹ  ಬ್ಯಾಂಕಿನ ಅಧ್ಯಕ್ಷರು ಹಾಗೂ ಸಿಬ್ಬಂದಿಗಳೊಂದಿಗೆ  ಪಂಡಿತ್ ಹೆಲ್ತ್ ರೆಸಾರ್ಟ್ಗೆ ಬೀಗ ಜಡಿದರು. ಸುಮಾರು 24 ಹೆಚ್ಚು ಕೋಟೇಜ್ ಗಳನ್ನು ಹಾಗೂ ಇತರ ಹಲವಾರು ಕಟ್ಟಡಗಳೊಂದಿಗೆ  ಸುಮಾರು ಎಂಟು ಎಕರೆಯಲ್ಲಿ ವ್ಯಾಪಿಸಿರುವ ಈ ರೆಸಾರ್ಟ್ ನಲ್ಲಿ ಸಾಕಷ್ಟು ವೈವಿಧ್ಯಮಯ ಕಾರ್ಯ ಕ್ರಮಗಳು ನಡೆಯುತ್ತಿದ್ದವು. 

ಕೊರೋನಾದ ತರುವಾಯ ಹೆಚ್ಚು ಕಾರ್ಯಕ್ರಮಗಳು ನಡೆಯದ ಕಾರಣದಿಂದ ಆದಾಯವನ್ನು ಕಳೆದುಕೊಂಡು ನಷ್ಟದ ಹಾದಿಯಲ್ಲಿತ್ತು. ಬ್ಯಾಂಕಿನ  ಕೋಟಿಗಟ್ಟಲೆ ಸಾಲವನ್ನು ಹಿಂತಿರುಗಿಸಲು ಸಾಧ್ಯವಾಗದೆ ರೆಸಾರ್ಟ್ ನ ವ್ಯವಸ್ಥಾಪಕರು ಒದ್ದಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇದೀಗ ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸ್ಥಳೀಯ ನಾಲ್ಕೈದು  ಮಂದಿ ಕೆಲಸಗಾರರು ಅಲ್ಲಿಂದ ತೆರಳಿರುತ್ತಾರೆ. ಒಟ್ಟಾರೆ ಇಡೀ ರೆಸಾರ್ಟ್ ಅನ್ನು ಎಂಸಿಸಿ ಬ್ಯಾಂಕ್  ತನ್ನ ಸುಪರ್ದಿಗೆ ಪಡೆದು ನೋಡಿಕೊಳ್ಳುವುದಕ್ಕೆ ಸೆಕ್ಯೂರಿಟಿಗಳನ್ನು ಇಟ್ಟಿರುತ್ತಾರೆ. ಮಾತ್ರವಲ್ಲ ಇಡೀ ಪ್ರದೇಶದ ಎಲ್ಲಾ ವಸ್ತುಗಳ ಮಹಜರನ್ನು ಮೂಡುಬಿದರೆ ಸರ್ಕಲ್ ಇನ್ಸ್ಪೆಕ್ಟರ್ ಅವರ ಮಾರ್ಗದರ್ಶನದಂತೆ ಮಾಡಿರುತ್ತಾರೆ. 

ಸಚಿತ್ರ ವರದಿ: ರಾಯಿ ರಾಜಕುಮಾರ್ ಮೂಡುಬಿದಿರೆ.