ಮೂಡುಬಿದಿರೆ: ಬೆಳುವಾಯಿ ಖಂಡಿಗ ಗ್ರೀನ್ಸ್, ಹಾಲ್ ನಲ್ಲಿ ರೋಟರಿ ಅಂತರಾಷ್ಟ್ರೀಯ ಸೇವಾ ಸಂಸ್ಥೆಯ ವಿಸ್ತಾರ ಸೆಮಿನಾರ್ ಆಗಸ್ಟ್ 10 ರಂದು ನಡೆಯಲಿದೆ. ರೋಟರಿ ವಲಯ ಒಂದರಿಂದ ಐದರ ತನಕದ 44 ಕ್ಲಬ್ ಗಳು ಭಾಗವಹಿಸುತ್ತಿರುವ ಈ ಸೆಮಿನಾರ್ ರನ್ನು ಮುಂಬೈಯ ಖ್ಯಾತ ಎಲುಬು ತಜ್ಞ 2018 ಪೋಲಿಯೋ ಪೀಡಿತರಿಗೆ ಸರ್ಜರಿ ಮಾಡಿದ ಡಾಕ್ಟರ್ ದೀಪಕ್ ಪುರೋಹಿತ್ ನಿರ್ವಹಿಸಲಿದ್ದಾರೆ.
ಪ್ರಸ್ತುತ ಜಿಲ್ಲೆಯ ಹಲವಾರು ಆಸ್ಪತ್ರೆಗಳನ್ನು ಮೂರುವರೆ ಕೋಟಿಗೂ ಅಧಿಕ ಸಹಾಯಧನದಲ್ಲಿ ಬ್ಲಡ್ ಬ್ಯಾಂಕ್, ಡಯಾಲಿಸಿಸ್ ಇತ್ಯಾದಿ ಉಪಕರಣದ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಜಿಲ್ಲೆಯ ಕ್ಲಬ್ ಗಳ ಸಂಖ್ಯೆಯನ್ನು ಹೆಚ್ಚಿಸಿ ಸುಮಾರು ನಾಲ್ಕು ಸಾವಿರಕ್ಕೆ ಸದಸ್ಯರನ್ನು ಮುಟ್ಟಿಸುವ ಗುರಿ ಹೊಂದಲಾಗಿದೆ ಎಂದು ರೋಟರಿ ಜಿಲ್ಲೆ 31 81ರ ಡಿಸ್ಟ್ರಿಕ್ಸ್ ಗವರ್ನರ್ ವಿಕ್ರಮ ದತ್ತ ಅಗಸ್ಟ್ ಏಳರಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸುಮಾರು ನೂರಕ್ಕೂ ಹೆಚ್ಚು ಗೌರವಾನ್ವಿತ ಹಿರಿಯ ಸದಸ್ಯರನ್ನು ಹೊಂದಿರುವ ಮೂಡುಬಿದಿರೆ ರೋಟರಿ ಕ್ಲಬ್ ಸಾಮಾನ್ಯ ಜನರಿಗೆ ಉಪಯುಕ್ತವಾಗುವಂತಹ ಹಲವಾರು ಸೆಮಿನಾರ್ ಕಾರ್ಯಕ್ರಮಗಳನ್ನು ಸದಾ ಹಮ್ಮಿಕೊಳ್ಳುತ್ತಾ ಬಂದಿದೆ. ಈ ಬಾರಿಯೂ ಅದೇ ರೀತಿ ಸುಮಾರು 500 ಸದಸ್ಯರನ್ನು ಒಟ್ಟು ಸೇರಿಸುವ ಅಂದಾಜು ಹೊಂದಿದೆ ಎಂದು ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ರವಿಪ್ರಸಾದ್ ಉಪಾಧ್ಯಾಯ ತಿಳಿಸಿದರು.
ಕಾರ್ಯಕ್ರಮ ಸಮಿತಿಯ ಅಧ್ಯಕ್ಷರಾದ ಡಾ. ಹರೀಶ್ ನಾಯಕ್ ಮಾತನಾಡಿ ಸಮಾಜಮುಖಿ ಕಾರ್ಯಗಳಿಗೆ ಸದಾ ಬೆಂಬಲವನ್ನು ರೋಟರಿ ನೀಡುತ್ತಿದೆ. ಸದಸ್ಯತನ ಅಭಿವೃದ್ಧಿಯೊಂದಿಗೆ ಶಿಕ್ಷಣ, ಆರೋಗ್ಯಕ್ಕೂ ಪ್ರಾಧಾನ್ಯತೆ ನೀಡುತ್ತಿದೆ. ಪ್ರಕೃತಿ ಹಾಗೂ ಪರಿಸರವನ್ನು ಉಳಿಸುವಂತಹ ಪ್ರಯತ್ನವನ್ನು ಮಾಡುತ್ತಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಬಾಹುಬಲಿ ಪ್ರಸಾದ್, ಕಾರ್ಯದರ್ಶಿ ಶ್ರೀಕಾಂತ್ ಕಾಮತ್, ಅಸಿಸ್ಟೆಂಟ್ ಗವರ್ನರ್ ಡಾ. ಮುರಳಿ ಕೃಷ್ಣ, ಹಾಜರಿದ್ದರು. ಸಲಹಾ ಸಮಿತಿಯ ಸದಸ್ಯರಾದ ಡಾಕ್ಟರ್ ರತ್ನಾಕರ್ ಶೆಟ್ಟಿ, ಡಾಕ್ಟರ್ ವಿನಯ್ ಕುಮಾರ್ ಹೆಗಡೆ, ಜಯರಾಮ ಕೋಟ್ಯಾನ್, ಪಿ ಕೆ ಥಾಮಸ್, ನಾರಾಯಣ ಪಿ ಎಂ, ನಾಗರಾಜ ಹೆಗಡೆ, ಹಾಗೂ ಇತರರು ಹಾಜರಿದ್ದರು. ಕಾರ್ಯದರ್ಶಿ ರತ್ನಾಕರ ವಂದನಾರ್ಪಣೆ ಸಲ್ಲಿಸಿದರು.
ವರದಿ: ರಾಯಿ ರಾಜಕುಮಾರ್ ಮೂಡುಬಿದಿರೆ.