ಮೂಡುಬಿದಿರೆ: ಸ್ಥಳೀಯ ಯಕ್ಷಸಂಗಮ ದವರು ತಮ್ಮ 25ನೇ ವರ್ಷದ ರಜತ ಸಂಭ್ರಮ ದಲ್ಲಿ ಅಗಸ್ಟ್ ಹತ್ತರಂದು ಸಮಾಜ ಮಂದಿರದಲ್ಲಿ ತಾಳಮದ್ದಳೆ ಮತ್ತು ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ. ಇತರ ಸಂಸ್ಥೆಗಳವರು ಕಾಲಮಿತಿಗೆ ಬದಲಾಯಿಸಿಕೊಂಡಿದ್ದರೂ ಯಕ್ಷಸಂಗಮ ಇಡೀ ರಾತ್ರಿ ಯಕ್ಷಗಾನ ಕಾರ್ಯಕ್ರಮವನ್ನು ಸತತವಾಗಿ ನಡೆಸಿಕೊಂಡು ಬಂದಿದೆ ಎಂದು ಯಕ್ಷ ಸಂಗಮದ ಅಧ್ಯಕ್ಷ ಸುದರ್ಶನ್ ಎಂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ.
ಸಂಗಮದ ಸಂಚಾಲಕ ಶಾಂತರಾಮ ಕುಡ್ವ ಎಂ ಅವರು ಮಾತನಾಡಿ ತೆಂಕು ಬಡಗುತಿಟ್ಟಿನ ಸುಪ್ರಸಿದ್ಧ ಹಾಸ್ಯ ಕಲಾವಿದ ಚಾರ್ಲಿ ಚಾಪ್ಲಿನ್ ಖ್ಯಾತಿಯ ಸೀತಾರಾಮ್ ಕುಮಾರ್ ಕಟೀಲು ಇವರನ್ನು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟರ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಗುವುದೆಂದು ತಿಳಿಸಿದರು. ಅಗಸ್ಟ್ ಹತ್ತರಂದು ಸಂಜೆ ನಾಲ್ಕು ಗಂಟೆಗೆ ಪ್ರಾರಂಭವಾಗುವ ಯಕ್ಷ ನಿಧಿ ಸಂಸ್ಥೆಯ ಮಕ್ಕಳ ದಕ್ಷಾಧ್ವರ ಯಕ್ಷಗಾನ, ತರುವಾಯ ರಾತ್ರಿ ಗಂಟೆ ಎಂಟಕ್ಕೆ ಗಿರಿಜಾ ಕಲ್ಯಾಣ ಯಕ್ಷಗಾನ, ಗಂಟೆ 9:30ರಿಂದ ಸೀತಾಪಹಾರ-ಸುಭದ್ರ ಕಲ್ಯಾಣ ತಾಳಮದ್ದಲೆ ಪ್ರದರ್ಶನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಮರುದಿನ ಬೆಳಿಗ್ಗೆ 6:00 ತನಕ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಗಮದ ದಿವಾಕರ ಶೆಟ್ಟಿ, ರಾಘವೇಂದ್ರ ಬಂಡಾರ್ಕರ್ ಹಾಜರಿದ್ದರು.
ವರದಿ: ರಾಯಿ ರಾಜಕುಮಾರ್ ಮೂಡುಬಿದಿರೆ.