ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಸ್ಥಳೀಯ ಕಾಂಗ್ರೆಸ್ ಕ್ಷೇತ್ರ ಸಮಿತಿಯ ವತಿಯಿಂದ ಮೂಡುಬಿದಿರೆ ಸ್ವರಾಜ್ಯ ಮೈದಾನದಿಂದ ಸಮಾಜ ಮಂದಿರ ಕಡೆಗೆ ಗಾಂಧಿ ನಡಿಗೆ ಸ್ವಚ್ಛತೆ ಕಡೆಗೆ ಕಾರ್ಯಕ್ರಮ ನಡೆಯಿತು.
ಸಂಬಂಧಿತ ಜಾಥಾ ಕಾರ್ಯಕ್ರಮಕ್ಕೆ ಮಾಜಿ ಸಚಿವ ಅಭಯ ಚಂದ್ರ ಜೈನ್, ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಚಾಲನೆಯನ್ನು ನೀಡಿ ನೇತೃತ್ವ ವಹಿಸಿದ್ದರು. ಕಾರ್ಯಕ್ರಮ ಉದ್ಘಾಟನೆ ಮಾಡಿ ಮಹಾತ್ಮಾ ಗಾಂಧಿ ಬಗ್ಗೆ ಮಾತಾಡಿದರು, ಅಭಯಚಂದ್ರ ಮಾಜಿ ಸಚಿವರು ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಕೆಪಿಸಿಸಿ ಸದಸ್ಯರು ವಸಂತ್ ಬೆರ್ನಾಡ್, ಚಂದ್ರಹಾಸ ಸನಿಲ್, ಪದ್ಮಪ್ರಸಾದ್, ಹರ್ಷವರ್ಧನ್ ಪಡಿವಾಲ್, ಪುರಂದರ ದೇವಾಡಿಗ, ಜಯಕುಮಾರ್ ಶೆಟ್ಟಿ, ಕಾಂಗ್ರೆಸ್ ಮುಖಂಡರು, ಸಮಿತಿ ಅಧ್ಯಕ್ಷರು ಸದಸ್ಯರು, ಭಾಗವಹಿಸಿದ್ದರು.
ವಲೇರಿಯನ್ ಸ್ವಾಗತ ಮಾಡಿ, ಮೋಹನ್ ಕೋಟ್ಯಾನ್ ಧನ್ಯವಾದಗಳನ್ನು ನೀಡಿದರು,