ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಗಾಂಧೀ ವಿಚಾರ ವೇದಿಕೆ, ತಾಲೂಕು ಪಿಂಚಣಿ ದಾರದ ಸಂಘ, ನವ ಜೀವನ ಸಮಿತಿ ಗಳ ಸಂಯುಕ್ತ ಆಶ್ರಯದಲ್ಲಿ ಹೆಗಡೆಯವರ ಕುಟುಂಬದ ಮಾರ್ಗದರ್ಶನದಲ್ಲಿ ಗಾಂಧೀ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಷ್ಟ ಮುಕ್ತ ಸಮಾಜ, ಗಾಂಧೀ ಸ್ಮೃತಿ, ಪಾನಮುಕ್ತರ ಸಮಾವೇಶ ಅಕ್ಟೋಬರ್ 2ರಂದು ಮೂಡುಬಿಗೆರೆ ಸಮಾಜ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅಭಯ ಚಂದ್ರ ಜೈನ್ ಗಾಂಧೀಜಿಯವರ ಪಾನಮುಕ್ತ, ದುಶ್ಚಟ ಮುಕ್ತ, ಕುಟುಂಬ, ಸಮಾಜ ದ ಕನಸು ನನಸಾಗುತ್ತಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಕಥೆಯಲ್ಲ ಜೀವನ ಪ್ರಸ್ತುತಪಡಿಸಿದ ಪಾನಮುಕ್ತರ ಮಕ್ಕಳಾದ ಸಂಧ್ಯ, ಪ್ರತಿಮಾ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ನವ ಜೀವನ ಸಮಿತಿಯ ಸದಸ್ಯರನ್ನು ಅಭಿನಂದಿಸಲಾಯಿತು. ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷ ಪ್ರಭಾತ್ ಬಲ್ನಾಡ್ ಆಶಯ ಭಾಷಣ ಗೈದರು. ವೇದಿಕೆಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ವಿಠಲ ಬೇಲಾಡಿ, ಜನಜಾಗ್ರತಿ ವೇದಿಕೆಯ ಬಾಹುಬಲಿ ಪ್ರಸಾದ್, ಗ್ರಾಮ ಅಭಿವೃದ್ಧಿ ಟ್ರಸ್ಟ್ ನ ಸಂಪತ್ ಸಾಮ್ರಾಜ್ಯ, ಟಿಎನ್ ಕೆಂಬಾರೆ, ಯೋಜನಾಧಿಕಾರಿ ಸುನೀತ ವೇದಿಕೆಯಲ್ಲಿ ಹಾಜರಿದ್ದರು.
ಮೂಡುಬಿದಿರೆ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸುಭಾಷ್ ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ವಿದ್ಯಾ ಸ್ವಾಗತಿಸಿದರು. ಮೇಲ್ವಿಚಾರಕಿ ಮಮತಾ ಕಾರ್ಯಕ್ರಮ ನಿರ್ವಹಿಸಿದರು. ವಿಠಲ ಧನ್ಯವಾದ ಸಲ್ಲಿಸಿದರು.