ಮೂಡುಬಿದಿರೆ: ದಿನವು ನೂರಾರು ವಾಹನಗಳು ಚಲಿಸುತ್ತಾ ಕಾರ್ಕಳ, ಮಂಗಳೂರು, ನಾರಾವಿ, ಬೆಳ್ತಂಗಡಿ, ಬೆಳ್ಮಣ್, ಉಡುಪಿ, ಬಂಟ್ವಾಳ ಇಂತಹ ಎಲ್ಲ ಪ್ರದೇಶಗಳಿಗೆ ಕೊಂಡಿಯಂತೆ ಕಾರ್ಯ ನಿರ್ವಹಿಸುವ ಬಸ್ಸು ನಿಲ್ದಾಣ ಎತ್ತರದಲ್ಲಿ ಸ್ಥಾಪಿಸಲ್ಪಟ್ಟಿದೆ.
ಬಸ್ಸು ನಿಲ್ದಾಣದ ಬಸ್ ನಿಲ್ಲುವ ಪ್ರದೇಶದ ಹೆಚ್ಚಿನ ಸ್ಥಳ ಖಾಸಗಿ ವಾಹನಗಳಿಂದಲೇ ಸದಾ ತುಂಬಿರುತ್ತದೆ. ಅಲ್ಲಲ್ಲಿ ಬಸ್ಸುಗಳಿಗೆ ಹೊರತಾಗಿ ವಾಹನಗಳನ್ನು ನಿಲ್ಲಿಸಬಾರದು ಎನ್ನುವ ಬೋರ್ಡು ತಗಲಿ ಹಾಕಿದ್ದರು ಕೂಡ ಉಪಯೋಗ ಇಲ್ಲದಂತಾಗಿದೆ. ಬಸ್ಸುಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲು ನಿಲ್ದಾಣವನ್ನು ಎಲ್ಲ ರೀತಿಯ ಖಾಸಗಿ ವಾಹನಗಳಿಂದ ಮುಕ್ತಗೊಳಿಸುವುದು ಉತ್ತಮ. ಒಂದು ವೇಳೆ ನಿಲ್ದಾಣದಲ್ಲಿರುವ ಅಂಗಡಿಗಳವರ ವಾಹನಗಳಿಗೆ ಮಾತ್ರ ಅವಕಾಶ ನೀಡುವುದಾದಲ್ಲಿ ಅವರಿಗೆ ಅವರ ವಾಹನಗಳ ಸಂಖ್ಯೆ ಇರುವ ಪಾಸ್ ನೀಡಿ ಸ್ಥಳವನ್ನೂ ನಿಗದಿ ಪಡಿಸಿ ನಿರ್ಬ ಂಧಿಸುವುದು ಶ್ರೇಯಸ್ಕರ. ಹೀಗಾದಲ್ಲಿ ಮಾತ್ರ ಬಸ್ಸು ನಿಲ್ದಾಣದ ಒಳಗೆ ಇತರ ಖಾಸಗಿ ವಾಹನಗಳನ್ನು ನಿಯಂತ್ರಿಸಬಹುದಾಗಿದೆ.
ಎದುರಿಗಿರುವ ಹಳೆಯ ಬಸ್ಸು ನಿಲ್ದಾಣದಿಂದ ಹೊಸ ಬಸ್ಸು ನಿಲ್ದಾಣಕ್ಕೆ ಬರಲು ದಕ್ಷಿಣ-ಉತ್ತರ ದಿಕ್ಕಿನಲ್ಲಿ ಮೆಟ್ಟಿಲುಗಳು ಇವೆ. ಈ ಮೆಟ್ಟಿಲುಗಳ ಪಶ್ಚಿಮ ಬದಿಯಲ್ಲಿ ಅಂಗಡಿಗಳಿದ್ದು ಪೂರ್ವ ದಿಕ್ಕಿನಲ್ಲಿ ರಿಕ್ಷಾ ಕಾರುಗಳು ನಿಲ್ಲುತ್ತಿವೆ. ಈ ಸಾರ್ವಜನಿಕ ರಿಕ್ಷಾ - ಕಾರುಗಳು ನಿಲ್ಲುವ ಪ್ರದೇ ಶದ ಹಿಂಬದಿಯ ಖಾಲಿ ಪ್ರದೇಶ ಸೊಳ್ಳೆ ಉತ್ಪಾದನಾ ಪ್ರದೇಶವಾಗಿ ಮಾರ್ಪಾಡಾಗಿದೆ. ಮೇಲ್ಗಡೆಯ ಹಾಗೂ ಸುತ್ತಲಿನ ತ್ಯಾಜ್ಯಗಳು ಈ ಪ್ರದೇಶದಲ್ಲಿ ಬಿದ್ದು ಶೇಖರಣೆಯಾಗಿರುವಂತೆ ಕಂಡುಬರುತ್ತದೆ. ಹೆಚ್ಚಾಗಿ ಎಲ್ಲಾ ಅಂಗಡಿಗಳಿಂದ ತ್ಯಾಜ್ಯವನ್ನು ಸಂಗ್ರಹಿಸುವ ಮೂಡುಬಿದಿರೆ ಪುರಸಭಾ ಸಿಬ್ಬಂದಿಗಳು ಈ ಪ್ರದೇ ಶವನ್ನು ಶುಚಿಗೊಳಿಸದೆ ಹಾಗೆ ಬಿಟ್ಟಿರುವುದಕ್ಕೆ ಕಾರಣ ತಿಳಿದು ಬರುತ್ತಿಲ್ಲ.
ಕಳೆದ ಸುಮಾರು ಒಂದೆರಡು ತಿಂಗಳುಗಳಿಂದ ಈ ಕಸ, ಕಶ್ಮಲ ರಾಶಿ ಹಾಗೆ ಉಳಿದಿದ್ದು ಇದೀಗ ಮಳೆ ಬರಲು ಪ್ರಾರಂಭವಾದ ಕಾರಣ ಈ ಕಸ ಕಡ್ಡಿಗಳು ಕೊಳೆತು ಮುಂದಿನ ದಿನಗಳಲ್ಲಿ ಮಲೇರಿಯಾ, ಕಾಲರಾ ಇತ್ಯಾ ದಿ ಖಾಯಿಲೆಗಳಿಗೆ ಉತ್ಪಾದನಾ ತಾಣವಾಗುವ ಸಂಭವನೀಯತೆಯು ಇದೆ. ಪುರಸಭಾ ಅಧಿಕಾರಿಗಳು ತಕ್ಷಣ ಈ ಪ್ರದೇಶಕ್ಕೆ ಭೇಟಿ ಕೊಟ್ಟು ಈ ಪ್ರದೇಶವನ್ನು ಯೋಗ್ಯ ರೀತಿಯಲ್ಲಿ ಪರಿವರ್ತಿಸಲು ಯೋಚಿಸುವುದು ಉತ್ತಮ.
ಹಿಂದೊಮ್ಮೆ ಈ ಸ್ಥಳದಲ್ಲಿ ಕಟ್ಟಡವನ್ನು ನಿರ್ಮಿಸಲು ಯೋಚಿಸಿದ್ದರು ಕೂಡ ಅದು ಕಾರ್ಯರೂಪಕ್ಕೆ ಬಂದಿರುವುದಿಲ್ಲ. ಹೀಗಾಗಿ ಈಗ ಇರುವ ಅಗಲ ಕಿರಿದಾದ ಮೆಟ್ಟಿಲುಗಳನ್ನು ಅಷ್ಟು ದೂರಕ್ಕೆ ವಿಸ್ತರಿಸಿ ಸುಂದರವಾಗಿ ವಿಶಾಲವಾದ ಮೆಟ್ಟಿಲುಗಳನ್ನು ನಿರ್ಮಿ ಸುವುದರಿಂದ ಪ್ರತಿದಿನವೂ ಸಾವಿರ ಗಂಟೆಯಲ್ಲಿ ಚಲಿಸುವ ಸಾರ್ವ ಜನಿಕರಿಗೆ ಸಾಕಷ್ಟು ಉಪಕಾರವಾಗಲು ಸಾಧ್ಯವಿದೆ.
ಅಥವಾ ಪುರಸಭೆ ಎರಡು ಅಂತಸ್ತಿನ ಸುಂದರವಾದ ಅಂಗಡಿಯನ್ನು ನಿರ್ಮಿಸಲು ಈ ಪ್ರದೇಶದಲ್ಲಿ ಯೋಚಿಸಬಹುದಾಗಿದೆ. ಈ ಬಗ್ಗೆ ಮೂಡುಬಿದಿರೆ ಪುರಸಭೆ, ಮೂಡುಬಿದರೆ ತಾಲೂಕು ಕಚೇರಿಯ ಅಧಿಕಾರಿಗಳು ಮತ್ತು ಮೂಡಾದ ಸಹಕಾರವನ್ನು ಪಡೆಯುವದು ಉತ್ತಮ ಎಂದು ಅಭಿಪ್ರಾಯ.
ಮೂಡಾದವರು ಯಾವುದೇ ಕಟ್ಟಡ ವಗೈರೆಗಳಿಗೆ ಮೂಡುಬಿದಿರೆ ಪ್ರದೇಶದಲ್ಲಿ ಒಪ್ಪಿಗೆಯ ಪರವಾನಿಗೆಯನ್ನು ನೀಡುವಾಗ ನಗರ ಸುಂದರಿಕರಣಕ್ಕಾಗಿ ಸಾವಿರಾರು ರೂಪಾಯಿ ಹಣವನ್ನು ಪ್ರತಿಯೊಂದು ಪರವಾನಿಗೆ ಸಂದರ್ಭದಲ್ಲಿ ಸಂಗ್ರಹಿಸುತ್ತಾರೆ. ಆದರೆ ಮೂಡುಬಿದಿರೆಯ ನಗರದ ಸೌಂದರ್ಯ ಕ್ಕಾಗಿಯೇ ಏಕೆ ಅದನ್ನು ಉಪಯೋ ಗಿಸಿ ಇಂತಹ ಸಾರ್ವ ಜನಿಕ ದುರವಸ್ಥೆಯ ಪ್ರದೇ ಶಗಳನ್ನು ಅಭಿವೃದ್ಧಿ ಪಡಿಸಬಾರದು?? ಪುರಸಭಾ ಅಧ್ಯಕ್ಷರು, ತಹಸೀ ಲ್ದಾರ್, ಮೂಡಾದ ಅಧ್ಯಕ್ಷರು ಯೋ ಚಿಸಿಯಾರೇ ???
ಸಚಿತ್ರ ವರದಿ: ರಾಯಿ ರಾಜ ಕುಮಾರ್ ಮೂಡುಬಿದಿರೆ.