ಮೂಡುಬಿದರೆ: ಬಸ್ ನಿಲ್ದಾಣದ ವ್ಯವಸ್ಥೆ ಅಯ್ಯಯ್ಯೋ, ಅಯ್ಯೋಮಯ ಎನ್ನುವ ಮಟ್ಟಕ್ಕೆ ಮುಟ್ಟಿರುವುದಕ್ಕೆ ಪುರಸಭೆ ಹಾಗೂ ಸಾರ್ವಜನಿಕರು ಎಲ್ಲರೂ ಕಾರಣ. ಬಸ್ಸು ನಿಲ್ದಾಣಕ್ಕೆ ಆಗಮಿಸುವ ಪ್ರತಿ ಬಸ್ಸುಗಳಿಂದ ರೂ. 500 ರಂತೆ ಸಂಗ್ರಹಿಸುವ ಪುರಸಭೆ ಬಸ್ ನಿಲ್ದಾಣ ದೊಳಗೆ ಖಾಸಗೀ ವಾಹನಗಳು ಬಂದು ನಿಲ್ಲಲು ವ್ಯವಸ್ಥೆ ಮಾಡಿಕೊಟ್ಟಿದೆ. ಪ್ರತಿ ದಿನ 250 ರಿಂದ 300 ಬಸ್ಸುಗಳು ಬರುವ ಮೂಡುಬಿದಿರೆ ಬಸ್ಸು ನಿಲ್ದಾಣದೊಳಗೆ ಚಿತ್ರದಲ್ಲಿ ಕಾಣುವಂತೆ ಶಿರ್ತಾಡಿ, ನಾರಾವಿ, ಇರುವೈಲು ಪ್ರದೇಶಕ್ಕೆ ತೆರಳುವ ಮಾರ್ಗದ ಬಸ್ಸುಗಳಿಗಾಗಿ ನಿಗದಿ ಪಡಿಸಿದ ಪ್ರದೇಶದಲ್ಲೆಲ್ಲ ಖಾಸಗಿ ವಾಹನಗಳು ಬಂದು ನಿಲ್ಲಲು ಅವಕಾಶ ಮಾಡಿಕೊಟ್ಟಿದೆ.
ಕೆಲವಾರು ಬಾರಿ ಅಲಂಗಾರು, ಬೆಳವಾಯಿ, ಕಾರ್ಕಳ ಪ್ರದೇಶದ ಬಸ್ಸುಗಳ ಸ್ಥಳವು ಕೂಡಾ ಖಾಸಗಿ ವಾಹನಗಳಿಂದ ತುಂಬಿರುತ್ತದೆ. ಹಿಂದೊಮ್ಮೆ ಬಸ್ಸುಗಳವರೇ ಹಣ ಸಂಗ್ರಹಿಸಿ ಖಾಸಗಿ ವಾಹನ ನಿಲ್ಲದಂತೆ ಮಾಡಲು ಒಬ್ಬರನ್ನ ನಿಯೋಜಿಸಿದ್ದನ್ನು ಆಕ್ಷೇಪಿಸಿದ ಪುರಸಭಾ ಮಂದಿ ಇದೀಗ ಅದೂ ಇಲ್ಲಇದು ಇಲ್ಲ "ತಾನು ಮಾಡ ಇತರರಿಗೂ ಬಿಡ" ಎನ್ನುವಂತೆ ಕ್ರಮಕೈಗೊಳ್ಳದೆ ಮೂಕ ಪ್ರೇಕ್ಷಕನಂತೆ ತೆಪ್ಪಗೆ ಇದೆ. ಇನ್ನಾದರೂ ಬಸ್ಸು ನಿಲ್ದಾಣದೊಳಗೆ ನಿಲ್ಲಿಸುವ ಖಾಸಗಿ ವಾಹನಗಳಿಂದ ಬಸ್ಸು ನಿಲ್ದಾಣಕ್ಕೆ ಮುಕ್ತಿ ನೀಡಬೇಕಾಗಿದೆ.