ಮೂಡುಬಿದಿರೆ: ಕಡೂರಿನಲ್ಲಿ ಸ್ನೇಹಮಯಿ ಯೋಗ ಕೇಂದ್ರದ ಸಹಯೋಗದಲ್ಲಿ ಕರ್ನಾಟಕ ಯೋಗಾಸನ ಸ್ಪೋಟ್ರ್ಸ್ ಅಸೋಸಿಯೇಷನ್ ಆಗಸ್ಟ್ 16ರಿಂದ 18 ವರೆಗೆ ನಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು, 8 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರ ವಿಭಾಗ:
18 ರಿಂದ 28 ವಯೋಮಿತಿಯ ರಿದಮಿಕ್ ಪೇರ್‍ಯೋಗಾಸನ: ನಿರ್ಮಲ ಸುಭಾಷ್ ಕೊಡ್ಲಿಕರ್, ಅನನ್ಯ ಸಂಬಯ್ಯಾ ಹಿರೇಮಠ (ಪ್ರಥಮ), 18 ರಿಂದ 28 ವಯೋಮಿತಿಯ ಆರ್ಟಿಸ್ಟಿಕ್ ಪೇರ್ ಯೋಗಾಸನ: ನಿರ್ಮಲ ಸುಭಾಷ್ ಕೊಡ್ಲಿಕರ್, ಅನನ್ಯ ಸಂಬಯ್ಯಾ ಹಿರೇಮಠ (ದ್ವಿತೀಯ), 18 ರಿಂದ 28 ವಯೋಮಿತಿಯ ಆರ್ಟಿಸ್ಟಿಕ್ ಯೋಗಾಸನ: ನಿರ್ಮಲ ಸುಭಾಷ್ ಕೊಡ್ಲಿಕರ್ (ದ್ವಿತೀಯ), 18 ರಿಂದ 28 ವಯೋಮಿತಿಯ ಟ್ರಡಿಷನಲ್ ಯೋಗಸನ: ಅನನ್ಯ ಸಂಬಯ್ಯಾ ಹಿರೇಮಠ್ (ತೃತೀಯ).
ಬಾಲಕರ ವಿಭಾಗ:
14 ರಿಂದ 18 ವಯೋಮಿತಿಯ ರಿದಮಿಕ್ ಪೇರ್ ಯೋಗಾಸನ: ಸುಶೀಲ್‍ಕುಮಾರ್ ಚೌಹಾನ್(ಪ್ರಥಮ), 14 ರಿಂದ 18 ವಯೋಮಿತಿಯ ರಿದಮಿಕ್ ಪೇರ್ ಯೋಗಾಸನ: ಚಂದ್ರಶೇಖರ ಹಡಗಲಿ, ಪೃಥ್ವಿಚಾರ್. ಎನ್ (ತೃತೀಯ), 14 ರಿಂದ 18 ವಯೋಮಿತಿಯ ಆರ್ಟಿಸ್ಟಿಕ್ ಪೇರ್ ಯೋಗಾಸನ: ಚಂದ್ರಶೇಖರ ಹಡಗಲಿ,ಪೃಥ್ವಿಚಾರ್. ಎನ್ (ದ್ವಿತೀಯ), 10 ರಿಂದ 14 ವಯೋಮಿತಿಯ ರಿದಮಿಕ್ ಪೇರ್ ಯೋಗಾಸನ: ಆದರ್ಶ್ ಕಲ್ಲಪ್ಪ ಸಾವಳೆ,ಶಶಾಂಕ್.ಬಿ (ತೃತೀಯ) ಸ್ಥಾನ ಪಡೆದಿದ್ದಾರೆ.
ವಿಜೇತ ಯೋಗಪಟುಗಳನ್ನು ಅಭಿನಂದಿಸಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು, ರಾಷ್ಟ್ರಮಟ್ಟದಲ್ಲಿ ವಿಜೇತ ಯೋಗಪಟುಗಳಿಗೆ ಖೇಲೊ ಇಂಡಿಯಾದಲ್ಲಿ ಭಾಗವಹಿಸಲು ಅವಕಾಸ ಇದೆ ಎಂದು ತಿಳಿಸಿದ್ದಾರೆ.