ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ:  ರಾಜ್ಯ ಸರ್ಕಾರದ ಕಾರ್ಯಕ್ರಮವಾದ 94 ಸಿ ಅಡಿಯಲ್ಲಿ ಬಡವರಿಗೆ ಸುಮಾರು 300ಕ್ಕೂ ಹೆಚ್ಚು ಹಕ್ಕುಪತ್ರವನ್ನು ಜನವರಿ 17ರಂದು ಮೂಡುಬಿದಿರೆಯಲ್ಲಿ ವಿತರಿಸಲಾಗುವುದು. 

2012ರ ಸಿದ್ದರಾಮಯ್ಯ ಸರಕಾರದ ಜಾರಿಗೆ ತಂದ ನಗರದ ಬಡವರಿಗೆ 600 ಚದರ ಅಡಿ ಮನೆ, ಗ್ರಾಮೀಣ ಬಡವರಿಗೆ ಸಾವಿರದ ಇನ್ನೂರು ಚದರ ಅಡಿ ಮನೆಯ ಅತ್ಯಂತ ಕಡಿಮೆ ಶುಲ್ಕದಲ್ಲಿ ಹಕ್ಕು ಪತ್ರ ಒದಗಿಸಲಾಗುತ್ತಿದೆ. 2018ರ ತನಕ 15,000 ಹಕ್ಕುಪತ್ರವನ್ನು ವಿತರಿಸಲಾಗಿರುತ್ತದೆ. ಆದರೆ ಅನಂತರ ಅಧಿಕಾರಕ್ಕೆ ಬಂದ ಬಿಜೆಪಿಯವರು ಹಕ್ಕುಪತ್ರ ವಿತರಿಸುವಲ್ಲಿ ತಾರತಮ್ಯವನ್ನು ನಡೆಸಿರುತ್ತಾರೆ. ವಾಲ್ಪಾಡಿ ಒಂದೇ ಗ್ರಾಮದಲ್ಲಿ ಸರ್ವೆ ನಂಬರ್ 132 ರಲ್ಲಿ ಸುಮಾರು 50 ಮನೆ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಅಲ್ಪಸಂಖ್ಯಾತರಿಗೆ ಹಕ್ಕುಪತ್ರವನ್ನು ತಿರಸ್ಕರಿಸಲಾಗಿರುತ್ತದೆ. ಇಂತಹ ಹಲವಾರು ಉದಾಹರಣೆಗಳು ಹಲವಾರು ಪ್ರದೇಶಗಳಲ್ಲಿ ನಡೆದಿರುತ್ತದೆ. 2023ರಲ್ಲಿ ಪ್ರಾರಂಭವಾದ ಡಿ ಫಾರೆಸ್ಟ್, ಭಾಗಶಃ ಡಿ ಫಾರೆಸ್ಟ್ ಪ್ರದೇಶಗಳಲ್ಲದರ ಹಕ್ಕುಪತ್ರವನ್ನು ಒದಗಿಸಲು ರಾಜ್ಯ ಸರ್ಕಾರ ಮತ್ತೊಮ್ಮೆ ನಿರ್ಧರಿಸುತ್ತದೆ. ಆ ಪ್ರಕಾರದಲ್ಲಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿಯೇ ಈ ಕಾರ್ಯಕ್ರಮ ಜನವರಿ 17ರಂದು ನಡೆಯಲಿದೆ. 

ಹಕ್ಕುಪತ್ರ ವಿತರಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರ ಎಲ್ಲಿಯೂ ರಾಜಕೀಯವನ್ನು ಮಾಡಿರುವುದಿಲ್ಲ. ಆದರೆ ಸಾಮಾನ್ಯರಿಗೆ ವಿರೋಧ ರೀತಿಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಗಳಿಗೆ ಮಾತ್ರ ನಾವು ತಡೆ ಒಡ್ಡಿರುತ್ತೇವೆ, ಹೊರತು ಎಲ್ಲಿಯೂ ದೀನದಲಿತರಿಗೆ ಅನ್ಯಾಯವಾಗಲು ನಾವು ಬಿಡಲಿಲ್ಲ. ಹಕ್ಕುಪತ್ರ ವಿತರಣೆ ಸರಕಾರದ ಕಾರ್ಯಕ್ರಮ ಆದಕಾರಣ ಸ್ವತಹ ಶಾಸಕರು ಭಾಗವಹಿಸಬೇಕು. ಅನ್ನಭಾಗ್ಯ, ಕ್ಷೀರಭಾಗ್ಯ, ಯುವ ನಿಧಿ, ಶಕ್ತಿ, ಗೃಹಲಕ್ಷ್ಮಿ ಇತ್ಯಾದಿ ಎಲ್ಲ ಯೋಜನೆಗಳಲ್ಲಿ ಅರ್ಹ ಎಲ್ಲರಿಗೂ ಫಲ ದೊರಕುವಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದಕ್ಕೋಸ್ಕರವಾಗಿ ಸಮಿತಿಯನ್ನು ಮಾಡಿಕೊಂಡು ಎಲ್ಲ ರೀತಿಯ ತೊಂದರೆಗಳನ್ನು ನಿವಾರಿಸುತಿದ್ದೇವೆ. ನಾವು ಎಂದೆಂದೂ ದೀನದಲಿತರ, ಅಲ್ಪಸಂಖ್ಯಾತರ ಪರವಾಗಿ ಇದ್ದೇವೆ ಎಂದು ಯುವ ಕಾಂಗ್ರೆಸ್ ನೇತಾರ ,ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಮಿಥುನರೈ ಸಮಾಜ ಮಂದಿರದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದರು. 

ಶಾಸಕರು ಅಸಹಾಯಕರಾದದು ಬಹಳ ಬೇಸರದ ಸಂಗತಿ: ಮುಲ್ಕಿ ಮೂಡುಬಿದಿರೆ ಶಾಸಕರು ಕಾಂಗ್ರೆಸ್ ನಾಯಕರುಗಳ ನಡುವೆ ಅನಗತ್ಯ ಹುಳಿ ಹಿಂಡುವ ಕೆಲಸ ಮಾಡುವ ಚಾಳಿ ಬಿಡುವುದು ಉತ್ತಮ. ನಾನು ಮತ್ತು ಮಿಥುನ್ ರೈ ಯವರ ನಡುವೆ ಯಾವುದೇ ಮನಸ್ತಾಪವಿಲ್ಲ. ನಾವಿಬ್ಬರೂ ಒಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುತ್ತಿದ್ದೇವೆ. ಶಾಸಕರು ಉದ್ಯೋಗ ಸೃಷ್ಟಿ, ಫಲಾನುಭವಿಗಳಿಗೆ ಸಹಕರಿಸುವಂತಹ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಳ್ಳಲಿ. ನಾನು ಶಾಸಕನಾಗಿದ್ದಾಗ ಸ್ವತಹ ಸಿ.ಟಿ. ರವಿ ಯವರನ್ನು ಕರೆಸಿ ಹಕ್ಕುಪತ್ರವನ್ನು ವಿತರಿಸಿರುವ ದಾಖಲೆ ಇದೆ. ಪ್ರತಿ ಎರಡು ಮೂರು ದಿನಕ್ಕೊಮ್ಮೆ ಈಗಲೂ ತಾಲೂಕು ಕಚೇರಿ, ಪಡಸಾಲೆ, ಇತ್ಯಾದಿಗಳಿಗೆ ತೆರಳಿ ಸಾಮಾನ್ಯ ಜನರ ಕೆಲಸಗಳನ್ನು ಮಾಡಿಸಿಕೊಡುತ್ತಿದ್ದೇನೆ. ಏಕೆಂದರೆ ಹಿಂದೆ ಸಾಮಾನ್ಯ ಜನರು ನನ್ನನ್ನು ಶಾಸಕನಾಗಿ ಗೆಲ್ಲಿಸಿದ ಕಾರಣ ಸಹಾಯ ಮಾಡುತ್ತಿದ್ದೇನೆ. ಕಾಂಗ್ರೆಸ್ ಅನ್ನು ಯಾವತ್ತೂ ಬಿಡುವುದಿಲ್ಲ. ರಾಜಕೀಯ ಮಾಡದೆ ಸಾಮಾನ್ಯರಿಗೆ ಸಹಾಯ ಮಾಡುವುದು ನನ್ನ ಧರ್ಮ ಎಂದು ನಂಬಿದ್ದೇನೆ ಎಂದು ಮಾಜಿ ಸಚಿವ, ಕೆ ಅಭಯಚಂದ್ರ ಜೈನ್ ಸ್ಪಷ್ಟಪಡಿಸಿದರು. 

ರಾಜ್ಯ ಸರ್ಕಾರದಿಂದ ಕೋಟಿ ಕೋಟಿ ಹಣ ಅನುದಾನವಾಗಿ ಬರುತ್ತಿದೆ:- ವಿದ್ಯಾ ಗಿರಿ ಜಂಕ್ಷನ್ ನಿಂದ ಸಂಪಿಗೆ ತನಕದ ರಸ್ತೆಯ ಅಗಲೀಕರಣಕ್ಕೆ ಈಗಾಗಲೇ ರಾಜ್ಯ ಸರ್ಕಾರ 10 ಕೋಟಿ ಹಣವನ್ನು ಅನುದಾನವಾಗಿ ನೀಡಿರುತ್ತದೆ. ಪುತ್ತಿಗೆ ದೇವಾಲಯದ ಎದುರಿನ ಅಗಲ ಕಿರಿದಾದ ಸೇತುವೆಯನ್ನು ಅಗಲಗೊಳಿಸಲು ಕೂಡ ಅನುದಾನವನ್ನು ರಾಜ್ಯ ಸರ್ಕಾರ ಒದಗಿಸುತ್ತಿದೆ. ಸೂರಿಂಜೆಯ ರಸ್ತೆಯ ಅಗಲೀಕರಣಕ್ಕೂ ಸರಕಾರ ಅನುದಾನ ನೀಡಿದೆ. ಪ್ರತಿ ಶಾಸಕರಿಗೂ ಹತ್ತು ಕೋಟಿ ಅನುದಾನವನ್ನು ನೀಡುವ ವಾಗ್ದಾನವನ್ನು ಸರಕಾರ ಮಾಡಿರುತ್ತದೆ. ಹೀಗಾಗಿ ರಾಜ್ಯ ಸರ್ಕಾರದಿಂದ ಸಾಕಷ್ಟು ಅನುದಾನ ಎಲ್ಲ ಕ್ಷೇತ್ರದ ಶಾಸಕರಿಗೂ ದೊರಕುತ್ತಿದೆ ಎಂದು ಮಾಜಿ ಸಚಿವ ಕೆ ಅಭಯ ಚಂದ್ರ ಜೈನ್ ಸ್ಪಷ್ಟ ಮಾಹಿತಿಯನ್ನು ನೀಡಿದರು.

ಸಾಮಾನ್ಯ ವರ್ತಕರ ಮೇಲೆ ದೌರ್ಜನ್ಯ, ಗೂಂಡಾ ಗಿರಿ:- ಕ್ರೀಡಾ ಯೋಜನೆಗಳಿಗೆ ಮೀಸಲಿರಿಸಬೇಕಾಗಿದ್ದ 48 ಎಕರೆ ಸ್ವರಾಜ್ಯ ಮೈದಾನದ ಪ್ರದೇಶ ಇಂದು ಮಾರುಕಟ್ಟೆ ಇತ್ಯಾದಿ ಯಲ್ಲಿ ಹಂಚಿಹೋಗಿದೆ. ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವ ಸಾಮಾನ್ಯರ ಕಿಸೆಯಿಂದಲೇ ಇತ್ತೀಚೆಗೆ ಹಣವನ್ನು ಗೂಂಡಾಗಳು ಎಗರಿಸಿಕೊಂಡು ಹೋಗಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ನೇರ ಆಪಾದನೆಯನ್ನು ಮಾಡಲಾಯಿತು. ಬೊಂಡ ಇತ್ಯಾದಿ ಮಾರಾಟಗಾರರಿಂದ ರೂಪಾಯಿ 130ಕ್ಕೆ ಬದಲು ರೂಪಾಯಿ 600, 800 ಗಳನ್ನು ವ್ಯಾಪಾರಿಗಳ ಕೆಸೆಯಿಂದ ಗೂಂಡಾ ವರ್ತನೆಯಲ್ಲಿ ಎಗರಿಸಿಕೊಂಡು  ಹೋಗಿದ್ದಾರೆ. ಶಾಸಕರ ಒತ್ತಡದಿಂದ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ವ್ಯಾಪಾರಿಗಳು ದೂರಿದ್ದಾರೆ ಎಂದು ತಿಳಿಸಿದರು. ವ್ಯಾಪಾರಿಗಳಿಗೆ ನಾವು ಗೂಂಡಾ ಸಂಸ್ಕೃತಿಯನ್ನು ವಿರೋಧಿಸುವಂತೆ ಈಗಾಗಲೇ ನೈತಿಕ ಬಲವನ್ನು ನೀಡಿರುತ್ತೇವೆ ಇದು ಇನ್ನೂ ಮುಂದುವರಿದಲ್ಲಿ ಇತರ ಕ್ರಮ ಕೈಗೊಳ್ಳಬೇಕಾಗುವುದೆಂದು ತಿಳಿಸಿದರು. 

ಪತ್ರಿಕಾ ಗೋಷ್ಠಿಯಲ್ಲಿ ಮೂಡಾ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಪ್ರವೀಣ್ ಜೈನ್, ಪುರಸಭಾ ಸದಸ್ಯರುಗಳಾದ ಪುರಂದರ ದೇವಾಡಿಗ, ಜೋಸ್ಸಿ ಮಿನೇಜಸ್, ಸುರೇಶ್ ಪ್ರಭು, ಇಕ್ಬಾಲ್ ಕರೀಂ ಹಾಜರಿದ್ದರು.