ವರದಿ ರಾಯಿ ರಾಜಕುಮಾರ

ಮೂಡಬಿದಿರೆ: ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94ಎ ನಾಲ್ಕರ ಅಡಿಯಲ್ಲಿ ನಮೂನೆ 57ರ ಅರ್ಜಿ ಒಟ್ಟು 7,338 ಸ್ವೀಕರಿಸಿದ್ 4,337 ಅರ್ಜುಗಳನ್ನು ತಿರಸ್ಕರಿಸಲಾಗಿದೆ. ಇದರಲ್ಲಿ ಕೇವಲ 12 ಸಕ್ರಮ ಪ್ರಕರಣಗಳನ್ನು ಮಾತ್ರ ವಿಲೇವಾರಿ ಮಾಡಲಾಗಿದೆ ಉಳಿದಂತೆ 2,989 ಅರ್ಜಿಗಳು ವಿಲೇವಾರಿಗೆ ಬಾಕಿ ಇರುತ್ತವೆ. ತಿರಸ್ಕೃತಗೊಂಡ ಅರ್ಜಿಯ ಬಗ್ಗೆ ಸಂಬಂಧಪಟ್ಟ ಅರ್ಜಿದಾರರಿಗೆ ಯಾವುದೇ ರೀತಿಯ ಮಾಹಿತಿಯನ್ನು ಕೂಡ ಈತನಕ ನೀಡಿಲ್ಲ ಎಂದು ಬಗರ್ ಹುಕುಂ, ಅಕ್ರಮ ಸಕ್ರಮ ಸಮಿತಿಯ ಸದಸ್ಯರುಗಳಾದ ಮಿತ್ತಬೈಲು ವಾಸುದೇವ ನಾಯಕ್, ಕರುಣಾಕರ ಹಾಗೂ ಮರಿನಾ ಮಿನೇಜಸ್ ಅವರುಗಳು ಆಪಾದಿಸಿದ್ದಾರೆ. 

ಕಿಸಾನ್ ಸಮಿತಿಯ ಹೆಸರಿನಲ್ಲಿ ಕೆಲವರ ಮಂದಿ ಜನರನ್ನು ದಾರಿ ತಪ್ಪಿಸುತ್ತಿರುವ ಬಗ್ಗೆಯೂ ಅವರು ಕಿಡಿ ಕಾರಿದ್ದಾರೆ.

ನಮೂನೆ 50ರ ಅಡಿಯಲ್ಲಿ ಒಟ್ಟು 6306 ಅರ್ಜಿಗಳು ಸ್ವೀಕೃತಿಯಾಗಿ ನಾಲ್ಕು ಸಾವಿರದ 4,156 ಅರ್ಜಿಗಳು ತಿರಸ್ಕೃತ ಗೊಂಡಿರುತ್ತವೆ. ಕೇವಲ 2,150 ಪ್ರಕರಣಗಳಲ್ಲಿ ಮಾತ್ರ ಹಕ್ಕುಪತ್ರ ನೀಡಲಾಗಿದೆ.

ನಮೂನೆ 53ರ ಪ್ರಕಾರ 4925 ಅರ್ಜಿಗಳು ಸ್ವೀಕೃತಿಯಾಗಿದ್ದು 3332 ಅರ್ಜಿಗಳು ತಿರಸ್ಕೃತಗೊಂಡಿರುತ್ತವೆ. ಕಳೆದ ಏಳು ವರ್ಷಗಳಲ್ಲಿ ಕೇವಲ ಮೂರು ಬಾರಿ ಮಾತ್ರ ಸಮಿತಿಯ ಸಭೆ ನಡೆಸಲಾಗಿದೆ ಎನ್ನುವುದು ಖೇದಕರ ಸಂಗತಿ. ಶಾಸಕರು ಇನ್ನಾದರೂ ತಾಲೂಕು ಮಟ್ಟದ ಸಮಿತಿಯನ್ನು ಶೀಘ್ರವಾಗಿ ಕರೆದು ಈಗಾಗಲೇ ತಹಸೀಲ್ದಾರರು ಸಮರ್ಪಕಗೊಳಿಸಿದ ದಾಖಲೆಗಳನ್ನು ವಿಲೇವಾರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.