ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಯ ಪರಾಸ್ ಅಜ್ರಿ ಅವರಿಗೆ ರಾಷ್ಟ್ರ ಮಟ್ಟದ 124 ನೇ ಸ್ಥಾನ ಪ್ರಾಪ್ತ ವಾಗಿದೆ. ರಾಷ್ಟ್ರೀಯ ಮೆರಿಟೈಮ್ ವಿಶ್ವ ವಿದ್ಯಾಲಯದ ಮುಕ್ತ ಸ್ಪರ್ಧೆಯಲ್ಲಿ ಭಾಗವಹಿಸಿ ಈ ಸ್ಥಾನವನ್ನು ಪಡೆದಿದ್ದಾರೆ. ಭಾರತೀಯ ಕೇಂದ್ರೀಯ ವಿಶ್ವವಿದ್ಯಾಲಯವು ಮೆರಿಟೈಮ್ ಎಂಜಿನಿಯರಿಂಗ್ ನಲ್ಲಿ ತಾಂತ್ರಿಕ ಪದವಿಗಾಗಿ ಈ ಪರೀಕ್ಷೆ ನಡೆಸಿತ್ತು ಎಂದು ತಿಳಿದು ಬಂದಿದೆ.