ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ ಕಲ್ಲಬೆಟ್ಟು ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜೂನ್ 5 ರಂದು ಗಿಡ ನೆಟ್ಟು ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಸುಮಾರು 250 ಕ್ಕೂ ಹೆಚ್ಚು ಗಿಡಗಳನ್ನು ಶಾಲಾ ವಠಾರದಲ್ಲಿ ನೆಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲ ಸಂಗನಬಸಯ್ಯ ಹಿರೇಮಠ, ಶಿವಪ್ರಸಾದ್ ಹೆಗ್ಡೆ, ಬೋನವೆಂಚರ್, ಜೋಸ್ಸಿ ಮಿನೇಜಸ್, ಸುರೇಶ್ ಕೋಟ್ಯಾನ್, ಹಾಜರಿದ್ದು ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ 7 ನೇ ರ್ಯಾಂಕ್ ಪಡೆದ ಶಾಲೆಯ ಚೈತ್ರ ಪಾಟೀಲ್, ಲಕ್ಕವ್ವ ತುಕ್ಕನ್ನವರ್ ರನ್ನು ಪುರಸ್ಕರಿಸಲಾಯಿತು. ಕಸ್ತೂರಿ ಸ್ವಾಗತಿಸಿದರು. ಸುಜಯ ಕಾರ್ಯಕ್ರಮ ನಿರ್ವಹಿಸಿದರು. ಸವಿತಾ ವಂದಿಸಿದರು.