04.01.2025 ರಂದು ಸತ್ಯ ಧರ್ಮಕ್ಕೆ ಜ್ಞಾನದ ನಡೆ ಎಂಬ ವಿನೂತನ ಧರ್ಮ ಜಾಗೃತಿ ಕಾರ್ಯಕ್ರಮ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜೀ ಸತ್ಯ ಸಾಯಿ ಆಶ್ರಮ ಕಟಪಾಡಿ ಉಡುಪಿ ಇವರು ಜೈನ ಕಾಶಿ ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆಗೆ ಭೇಟಿ ನೀಡಿ 108 ಕ್ಷೇತ್ರ ಗಳಿಗೆ ಜೂನ್ 4 ರಿಂದ ಸೆಪ್ಟೆಂಬರ್ 19ರ ವರೆಗೆ ಧರ್ಮದರ್ಶನ ಕೈಗೊಳ್ಳುವ ಶುಭ ಸಂಕಲ್ಪ ಮೂಡುಬಿದಿರೆ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ಪಟ್ಟಾಚಾರ್ಯವರ್ಯ ಸಾನ್ನಿಧ್ಯದಲ್ಲಿ ಕೈಗೊಂಡರು ಮೂಡುಬಿದಿರೆ ಸ್ವಾಮೀಜಿ. 

ಈ ಸಂಧರ್ಭ 108 ಶ್ರೀ ಮಠ ಮಂದಿರ ಭೇಟಿ ನೀಡಲಿರುವ ಸ್ವಾಮೀಜಿ ಯನ್ನು ಬರಮಾಡಿಕೊಂಡು ಭಗವಾನ್ ಪಾರ್ಶ್ಶ್ವನಾಥ ಸ್ವಾಮಿಗೆ ವಿಶೇಷ ಅಭಿಷೇಕ ಪಟ್ಟದ ಮಹಾ ಮಾತೆ ಕುಷ್ಮಾ oಡಿನೀ ದೇವಿಗೆ ಪೂಜೆ ಸಲ್ಲಿಸಿ ಶುಭ ಕೋರಿದರು.  ಜೂನ್ 4, ಬೆಳಿಗ್ಗೆ 7.15 ಕ್ಕೆ ಆಶೀರ್ವಾದ ನೀಡಿದ ಶ್ರೀ ಭಟ್ಟಾರಕ ಸ್ವಾಮೀಜಿ  ಈ ಶುಭ ಸಂಕಲ್ಪ ಯಾತ್ರೆ ಮಥುರಾ ಕ್ಷೇತ್ರ ಮುಕ್ತಿ ಸನಾತನ ಧರ್ಮ ಸಂಘಟನೆ ಹಾಗೂ ಧರ್ಮ ಜಾಗೃತಿ ಸೈನಿಕರ ದೇಶ ಕಾಯುವ ಪುಣ್ಯ ಕಾರ್ಯಕ್ಕೆ  ಗೌರವ ಸಲ್ಲಿಸುವ ಉತ್ತಮ ಕಾರ್ಯ ಸರ್ವ ಧರ್ಮ ಭಾಂದವರ ಬಗ್ಗೆ ಕಾಳಜಿ ಇರುವ ಸಾಯಿ ಆಶ್ರಮದ  ಶ್ರೀಗಳ ಶುಭ ಸಂಕಲ್ಪ ಕ್ಕೆ ಎಲ್ಲರೂ ಕೈ ಜೋಡಿಸಿ ಲೋಕ ದಲ್ಲಿ ಶಾಂತಿ ಸೌಹಾರ್ದ ನೆಲೆಯಾಗಲಿ ಎಂದು ಪ್ರಾರ್ಥಿಸಿದರು.  

ಯಂ ಬಾಹುಬಲಿ ಪ್ರಸಾದ್, ವಿಜಯ ಕುಮಾರ್, ಮಹಾರಾಷ್ಟ್ರ ಭಕ್ತವ್ರoದ ಉಪಸ್ಥಿತರಿದ್ದರು.