ವರದಿ ರಾಯಿ ರಾಜಕುಮಾರ

ಮೂಡುಬಿದಿರೆ: ಸಮಸ್ತದ ಶತಾಬ್ದಿ ಸಂದೇಶ ಯಾತ್ರೆಯ ಪ್ರಚಾರಾರ್ಥ ಮಹಾ ಸಮ್ಮೇಳನ ಡಿಸೆಂಬರ್ 7ರಂದು ಮೂಡುಬಿದಿರೆ ಲಾಡಿಯಲ್ಲಿ ನಡೆಯಲಿದೆ. ಬೆಳ್ತಂಗಡಿ ದಾರು ಸಲಾಂ ಶಿಕ್ಷಣ ಕೇಂದ್ರದ ಅಧ್ಯಕ್ಷ ಸೈಯದ್ ಜೈನಲ್ ಅಬ್ಬಿಧಿನ್ ಜಿಫ್ರಿ, ತಂಙಳ್ ರ ನೇತೃತ್ವದಲ್ಲಿ ಅನುಸ್ಮರಣೆ ನಡೆಯಲಿದೆ. ಅಧ್ಯಕ್ಷ ಮಹಾಸಮ್ಮೇಳನವನ್ನು ದ.ಕ. ಖಾಝಿ ಹಾಗೂ ಸಮಸ್ತ ಕೇಂದ್ರ ಮುಷಾವರ ಸದಸ್ಯರಾದ ಶೈಖುನಾ ತ್ವಾಖಾ ಅಹ್ಮದ್ ಅಲ್ ಉಸ್ತಾದ್  ಉದ್ಘಾಟಿಸಲ್ಲಿದ್ದಾರೆ. ಜಂಇಯ್ಯತುಲ್ ರೇಂಜ್ ಅಧ್ಯಕ್ಷ ಸಯ್ಯಿದ್ ಅಕ್ರಂ ಅಲಿ ರಹ್ಮಾನಿ ದುವಾ ನೆರವೇರಿಸಲಿದ್ದಾರೆ.

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಶೈಖುನಾ ಕುಮಾರ್ ಫೈಝಿ ಮುಕ್ಕೋಟಿ, ದಾರುರ್ರಹ್ಮಾನ್ ಎಸ್ ಎನ್ ಇ ಸಿ ಕಾಲೇಜಿನ ಪ್ರಾಂಶುಪಾಲ ಸಲಾಹುದ್ದೀನ್ ಫೈಝಿ ವಲ್ಲಪ್ಪುಝ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಇನ್ನೂ ಹಲವಾರು ಮಂದಿ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಡಿಎ ಉಸ್ಮಾನ್, ಎಸ್ಎನ್ ಇ  ಸಿ ರಾಜ್ಯಾಧ್ಯಕ್ಷ ಸಯ್ಯಿದ್ ಅಕ್ರಂ ಅಲಿ, ಗೌರವ ಸಲಹೆಗಾರ ಅಬ್ದುರ್ರಹ್ಮಾನ್, ಪ್ರಧಾನ ಕಾರ್ಯದರ್ಶಿ ಅಶ್ರಫ್ ಮರೋಡಿ, ಉಪಾಧ್ಯಕ್ಷ ಅಝೀಝ್ ಮಾಲಿಕ್, ಕಾರ್ಯದರ್ಶಿ ಅಬ್ದುಲ್ ಗಫೂರ್, ಸಂಘಟನಾ ಕಾರ್ಯದರ್ಶಿ ಮುಹಮ್ಮದ್ ಫಾಯಿಝ್  ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.