ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ:  ಅಲಂಗಾರು ಹೋಲಿ ರೋಸರಿ ಕನ್ನಡ ಮಾಧ್ಯಮ ಶಾಲೆ ಸುಮಾರು 106 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟಿತು. ತರುವಾಯ 1929 ರಲ್ಲಿ ಚರ್ಚ್ ಪ್ರಾರಂಭವಾಯಿತು. ಈ ಶತಮಾನ ಸಮೀಪಿಸಿರುವ ಈ ಚರ್ಚ್ ಗೆ ಮೂಡುಬಿದಿರೆ, ಬೆಳುವಾಯಿ, ಸಂಪಿಗೆ ಪರಿಸರದವರಿಗೆ ಪವಿತ್ರವಾಯಿತು. ಸುಮಾರು 15 ಗುರುಗಳು ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ.

ಶಾಲೆಯಲ್ಲಿ ಕಲಿತ ಹಲವರು ದೇಶ ವಿದೇಶದಲ್ಲಿ ಕೀರ್ತಿ ಗಳಿಸಿದ್ದಾರೆ. ಅಂತಹವರಲ್ಲಿ ಒಬ್ಬರು ಆಂಧ್ರದ ರಾಜ್ಯಪಾಲ, ಮಾಜಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್ ರವರು. ಆಂಗ್ಲ ಮಾಧ್ಯಮ ಕೂಡ 26 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟಿತು.

ವಂ.ಗು.ವಿನ್ಸೆಂಟ್ ಡಿಸೋಜ 2009 ರಲ್ಲಿ ಬಾಲಯೇಸುವಿನ ಭಕ್ತಿ ಆರಂಭಿಸಿದರು. ಸುಮಾರು 16 ವರ್ಷಗಳಿಂದ ಈ ಪುಣ್ಯಕ್ಷೇತ್ರ ಪವಾಡಗಳ ಆಗರವಾಯಿತು. ಅನೇಕ ಭಕ್ತರು ಅನೇಕ ಸ್ಥಳಗಳಿಂದ ಆಗಮಿಸಿ ಇಡೀ ವರ್ಷದ ಪ್ರತಿ ಶುಕ್ರವಾರ ದಿವ್ಯ ಬಲಿ ಪೂಜೆ, ನವೀನ ಪ್ರಾರ್ಥನೆ, ಪರಮ ಪ್ರಸಾದ ಆರಾಧನೆ, ಅನ್ನ ಸಂತರ್ಪಣೆ ಇತ್ಯಾದಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಅನೇಕ ಮಂದಿ ರೋಗಿಗಳು ಪರಿಹಾರ ಪಡೆದು ಕೃತಾರ್ಥರಾಗಿದ್ದಾರೆ. ಇಲ್ಲಿಗೆ ಬರುವ ಎಲ್ಲರಿಗೂ ಸಮಾಲೋಚನೆಯ ಮೂಲಕ ಪರಿಹಾರವನ್ನು, ಪ್ರಾರ್ಥನೆಗೆ ಅವಕಾಶವನ್ನು ನೀಡಲಾಗುತ್ತಿದೆ. 

ಪ್ರತೀ ವರ್ಷದಂತೆ ಈ ವರ್ಷವೂ ಜನವರಿ 12ರಂದು ವಾರ್ಷಿಕ ಹಬ್ಬ ನಡೆಯಲಿದೆ. ಜನವರಿ ಮೂರರಿಂದ ಆರಂಭವಾದ 9 ದಿನಗಳ ನವೀನ ಪ್ರಾರ್ಥನೆ ಜನವರಿ 11 ರಂದು ಸಂಜೆ 4:00ಗೆ ಹೊರೆ ಕಾಣಿಕೆಯ ಮೂಲಕ ಮರುದಿನದ ಮಹೋತ್ಸವಕ್ಕೆ ಪ್ರಾರಂಭವಾಗಲಿದೆ. ಸಂಜೆ 5:00ಗೆ ದಿವ್ಯ ಬಲಿ ಪೂಜೆ, ನವೀನ ಪ್ರಾರ್ಥನೆ, ಬೃಹತ್ ಮೆರವಣಿಗೆ ನಡೆದು ಬಾಲ ಯೇಸುವಿನ ಸಂದೇಶ ಸಾರಲಾಗುತ್ತದೆ . ದಿನಾಂಕ 12 ರಂದು ಬೆಳಗ್ಗೆ 10 ಗಂಟೆಗೆ ಮೂಡುಬಿದಿರೆ ಆಸುಪಾಸಿನ ಎಲ್ಲಾ ಶಿಕ್ಷಣ ಸಂಸ್ಥೆಯ ಕಥೋಲಿಕ್ ಬಂಧುಗಳ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಭಾಷೆಯಲ್ಲಿ ದಿವ್ಯ ಬಲಿ ಪೂಜೆ ನಡೆಯಲಿದೆ. ಸಂಜೆ 5:00ಗೆ ಹಬ್ಬದ ಸಂಭ್ರಮದ ಬಲಿ ಪೂಜೆ, ಬಳ್ಳಾರಿ ಧರ್ಮ ಪ್ರಾಂತ್ಯ ದ ಪೂಜ್ಯ ಅತಿ ವಂದನೀಯ ಹೆನ್ರಿ ಡಿಸೋಜ ರವರು ನಡೆಸಿಕೊಡಲಿದ್ದಾರೆ. ಸುಮಾರು ನಾಲ್ಕು ಸಾವಿರದಷ್ಟು ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ಅಂದು ಹಮ್ಮಿಕೊಳ್ಳಲಾಗಿದೆ ಎಂದು ವಂದನೀಯ ಧರ್ಮ ಗುರು ಮೆಲ್ವಿನ್ ನೊರೊನ್ಹ ಇಂದು ಚರ್ಚ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ವರ್ಷ ಇಡೀ ಪೋಪ್ ರವರ ಆದೇಶ ದಂತೆ ಅತಿ 25 ವರ್ಷಗಳಿಗೊಮ್ಮೆ ನಡೆಸುವ ಜುಬಿಲಿ ಆಚರಣೆಯನ್ನು ಸಂಭ್ರಮಾಚರಣೆಯಿಂದ ನಡೆಸಲಾಗುತ್ತಿದೆ. ಭರವಸೆಯ ಪ್ರಯಾಣದ ಈ ಹಾದಿಯಲ್ಲಿ ಇಡಿ ವರ್ಷ ವಿವಿಧ ಕಾರ್ಯಕ್ರಮಗಳು ಚರ್ಚ್ ನಲ್ಲಿ ನಡೆಯಲಿದೆ. ಈಗಾಗಲೇ ಜನವರಿ 5 ರಂದು ಮಂಗಳೂರು ಏನಪೋಯ ಆಸ್ಪತ್ರೆಯ ವತಿಯಿಂದ ಜನವರಿ 5ರಂದು 280 ಮಹಿಳೆಯರಿಗೆ ವಿವಿಧ ರೀತಿಯ ಆರೋಗ್ಯದ ಚಿಕಿತ್ಸೆಯನ್ನು ನೀಡಲಾಗಿರುತ್ತದೆ.

ಪತ್ರಿಕಾಗೋಷ್ಠಿಯಲ್ಲಿ ಚರ್ಚ್ ಪಾಲನಾ ಸಮಿತಿಯ ರಾಜೇಶ್ ಕಡಲಗೆರೆ, ಎಡ್ವರ್ಡ್ ಸೆರಾವೋ, ಲಾರೆನ್ಸ್ ಡಿಕುನ್ಹ ಹಾಜರಿದ್ದರು.