ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಸಮರ್ಥ ನಾಯಕತ್ವ, ಸಮರ್ಥ ಸೇನಾ ಬಲ, ಸಂವಿಧಾನಕ್ಕೆ ಗೌರವಗಳೊಂದಿಗೆ ದೇಶ ಮುಂಚೂಣಿಯಲ್ಲಿ ಸಾಗುತ್ತಿದೆ. ಮುಂದುವರಿದ ದೇಶಗಳಿಗಿಂತ ಸಮರ್ಥವಾಗಿ ಬೆಳೆಯುತ್ತಿದೆ ಎಂದು ದೇಶದ ಬಗ್ಗೆ ಅಭಿಮಾನ ಪೂರ್ವಕವಾಗಿ ಮುಲ್ಕಿ ಮೂಡುಬಿದರೆ ಶಾಸಕ ಉಮಾನಾಥ ಕೋಟ್ಯಾನ್ ತಾಲೂಕು ಕಚೇರಿಯ ಎದುರು ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮೂಡುಬಿದಿರೆಯಲ್ಲಿ ಕುಡಿಯುವ ನೀರು, ಪ್ರವಾಸಿ ಬಂಗಲೆ ಅಭಿವೃದ್ಧಿ, ಹಕ್ಕು ಪತ್ರ ವಿತರಣೆ ಇತ್ಯಾದಿ ಸೌಲಭ್ಯಗಳು ಸಾರ್ವಜನಿಕರಿಗೆ ಲಭ್ಯ ವಾಗುತ್ತಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ವಿಕಲಚೇತನನಾಗಿದ್ದರೂ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದೂ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ ಕಡಂದಲೆ ಶಾಲಾ ಚಿನ್ಮಯ ಭಟ್ ರನ್ನು ಸಂಮಾನಿಸಲಾಯಿತು.
ಮೂಡುಬಿದಿರೆ ತಹಸೀಲ್ದಾರ್ ಅರವಿಂದ್ ಅವರು ಧ್ವಜಾರೋಹಣ ನೆರವೇರಿಸಿದರು. ವೇದಿಕೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಕುಸುಮಾಧರ್, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಪುರಸಭಾ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಮುಖ್ಯಾಧಿಕಾರಿ ಇಂದು, ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್, ವೈದ್ಯಾಧಿಕಾರಿ ಅಕ್ಷತಾ ಹಾಗೂ ಇತರರು ಹಾಜರಿದ್ದರು.
ಆರೋಗ್ಯ ಇಲಾಖೆ, ತಾಲೂಕು ಪಂಚಾಯತ್, ಇತ್ಯಾದಿಯರ ಸ್ತಬ್ಧ ಚಿತ್ರ ಸುಂದರವಾಗಿತ್ತು. ಪೊಲೀಸ್, ಗೃಹರಕ್ಷಕ ದಳ, ಶಾಲಾ ವಿದ್ಯಾರ್ಥಿಗಳು ಗೌರವ ರಕ್ಷೆ ನೀಡಿದರು. ಅಲಂಗಾರು ಸಂತ ಥೋಮಸ್ ಶಾಲಾ ಬ್ಯಾಂಡ್ ತಂಡ ಎಲ್ಲವನ್ನು ನಿರ್ವಹಿಸಿತು. ಉಪತಹಸೀಲ್ದಾರ್ ರಾಮ ಕಾರ್ಯಕ್ರಮ ನಿರ್ವಹಿಸಿದರು.