ವರದಿ ರಾಯಿ ರಾಜಕುಮಾರ ಮೂಡುಬಿದಿರೆ 


ಮೂಡುಬಿದಿರೆ: ಭಾರತೀಯ ಜೈನ್ ಮಿಲನ್ ಮೂಡುಬಿದರೆ ವಲಯದ 25-27ನೇ ಸಾಲಿನ ಪದ ಸ್ವೀಕಾರ ಸಮಾರಂಭ ಜುಲೈ 27ರಂದು ಮಹಾವೀರಭಾನದಲ್ಲಿ ಜರಗಿತು. ನೂತನ ಅಧ್ಯಕ್ಷರಾಗಿ ಮಹೇಂದ್ರ ಕುಮಾರ್ ಜೈನ್, ಕಾರ್ಯದರ್ಶಿಯಾಗಿ ಶಶಿಕಾಂತ್ ಎ, ಕೋಶಾಧಿಕಾರಿಯಾಗಿ ಶ್ರೇಯಾಂಸ ಹೆಗ್ಡೆ, ಅಧಿಕಾರವನ್ನು ವಹಿಸಿಕೊಂಡರು.

ಕಾರ್ಯಕ್ರಮದಲ್ಲಿ ದಿವ್ಯ ಉಪಸ್ಥಿತ ಪರಮಪೂಜ್ಯ ಆಚಾರ್ಯ ಗುಲಾಬ್ ಭೂಷಣ್ ಜಿ ಮಹಾರಾಜ್ ಅವರು  ಜೈನರು, ಬದುಕು ಬದುಕಲು ಬಿಡು ಎನ್ನುವ ಧ್ಯೇಯವನ್ನು ಪಾಲಿಸಬೇಕು. ಶಾಂತಿ ಸುಖವನ್ನು ನೀಡುವ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಂಡು ಆಚಾರ್ಯರುಗಳ, ಗುರುಗಳ ಆಶೀರ್ವಾದವನ್ನು ಸದಾ ಪಡೆದುಕೊಳ್ಳಬೇಕು ಎಂದು ಕರೆ ಕೊಟ್ಟರು. ಮೂಡುಬಿದಿರೆ  ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ಧರ್ಮವಾರ್ತೆಯನ್ನು ಕೇಳಿ ಜೈನ ಬಂಧುಗಳು ಸದುಪಯೋಗದ ಉತ್ತಮ ಕೆಲಸಗಳನ್ನು ಮಾಡಿ ಸಂಘಟನೆಯನ್ನು ಬಲಪಡಿಸಬೇಕು. ಅಸಹನೆಗೆ ಅವಕಾಶವನ್ನು ನೀಡದೆ ಆಚಾರ್ಯರಿಗೆ ಪೂಜ್ಯತೆಯಿಂದ ಒಗ್ಗಟ್ಟನ್ನು ತೋರಿಸಿಕೊಡಬೇಕಾಗಿದೆ ಎಂದು ಕೇಳಿಕೊಂಡರು. 

ವಲಯ ಉಪಾಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ ಜೈನ ಪರಂಪರೆಯನ್ನು ಯುವಕರಿಗೆ ತಿಳಿಸಿ ಕೊಡುವುದರೊಂದಿಗೆ ಮಕ್ಕಳನ್ನು, ಯುವಕರನ್ನು ಒಟ್ಟುಗೂಡಿಸಿ ಯುವ ಜೈನ್ ಸಂಘಟನೆ ರಚಿಸಬೇಕಾದ ಅಗತ್ಯವಿದೆ ಎಂದರು. 

ಸನ್ಮಾನಕ್ಕೆ ಉತ್ತರಿಸಿದ ಉಜಿರೆಯ ಸೋನಿಯಾ ವರ್ಮ ಅವರು , ಒಳ್ಳೆಯ ಸಮಯವನ್ನು ಹಾಳು ಮಾಡದೆ ಉತ್ತಮ ಕೆಲಸಗಳಿಗೆ ತೊಡಗಿಸಬೇಕೆಂದು ಕೇಳಿಕೊಂಡರು. 17 ಮಂದಿ ನೂತನ ಸದಸ್ಯರನ್ನು ಸಭೆಗೆ ಪರಿಚಯಿಸಲಾಯಿತು. ಅಭಯ ಚಂದ್ರ ಮಂಜುಳಾ ಜೈನ್ ದಂಪತಿಗಳನ್ನು ಸನ್ಮಾನಿಸಲಾಯಿತು. 

ವಲಯ ನಿರ್ದೇಶಕ ಜಯರಾಜ ಕಂಬಳಿ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಆಸ್ಪತ್ರೆಯಲ್ಲಿರುವ ಜೈನ್ ಮಿಲನ್ ನ ಅಧ್ಯಕ್ಷ ಅನಡ್ಕ ದಿನೇಶ್ ಕುಮಾರ್ ಅವರ ಆರೋಗ್ಯ ಸುಧಾರಿಸಲು ಎಲ್ಲರೂ ಭಗವಂತನಲ್ಲಿ ಪ್ರಾರ್ಥಿಸಿದರು. ಅವರ ಅನುಪಸ್ಥಿತಿಯಲ್ಲಿ ಪ್ರಭಾತ್ ಕುಮಾರ್ ಬಲ್ನಾಡ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶ್ವೇತಾ ಜೈನ್ ಉಪಸ್ಥಿತರಿದ್ದರು. ಅನಂತವೀರ ಜೈನ್ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಕುಮಾರ್ ವರದಿ ವಾಚಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಜೈನ್ ಲೆಕ್ಕಪತ್ರ ಮಂಡಿಸಿದರು. ನೂತನ ಅಧ್ಯಕ್ಷ ಮಹೇಂದ್ರ ಕುಮಾರ್ ಜೈನ್ ತಮ್ಮ ಎರಡು ವರ್ಷದ ಕಾಲಾವಧಿಯ ಕಾರ್ಯಸೂಚಿಯನ್ನು ಪ್ರಸ್ತುತಪಡಿಸಿದ್ದರು. ನಿತೀಶ್ ಕುಮಾರ್ ಬಲ್ಲಾಳ್ ಕಾರ್ಯಕ್ರಮ ನಿರ್ವಹಿಸಿದರು. ನೂತನ ಕಾರ್ಯದರ್ಶಿ ಶಶಿಕಾಂತ್ ಜೈನ್ ವಂದಿಸಿದರು.