ಲೊರೆಟ್ಟೊ:  ಜಾಗತಿಕ ಹಿರಿಯ ನಾಗರಿಕರ ದಿನದ ಪ್ರಯುಕ್ತ ಲೊರೆಟ್ಟೊ ಮತಾ ಚರ್ಚಿನಲ್ಲಿ ಈ ವಿಶೇಷ ದಿನದ ಆಚರಣೆಯನ್ನು ಸಂಭ್ರಮ ಸಡಗರ ಸಂತೋಷದಿಂದ ಆಚರಿಸಲಾಯಿತು . ಚರ್ಚ್ ವ್ಯಾಪ್ತಿಯ ದಿನಕ್ಕೆ ಒಳಪಟ್ಟಿರುವ ಎಲ್ಲಾ ಹಿರಿಯ ನಾಗರಿಕರನ್ನು ಒಂದೇ ವೇದಿಕೆಯಲ್ಲಿ ಜೊತೆಗೂಡಿಸುವ ಈ ಸಂಭ್ರಮವನ್ನು ಚರ್ಚ್ ಧರ್ಮ ಗುರುಗಳಾದ ವಂದನೀಯ ಫ್ರಾನ್ಸಿಸ್ ಕ್ರಾಸ್ತ ರವರ ಮಾರ್ಗದರ್ಶನದಲ್ಲಿ ನಡೆಯಿತು. ಬಲಿ ಪೂಜೆಯ ಬಳಿಕ ಲೊರೆಟ್ಟೊ ಮಾತಾ ಸಭಾಭವನ ಸನ್ಮಾನ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು ತನ್ನ ಕಷ್ಟಕರವಾದ ಜೀವನದ ಒಂದು ಚರಿತ್ರೆಯನ್ನು ತಮ್ಮ ಪೀಳಿಗೆಗೆ ಮಾರ್ಗದರ್ಶಕರಾಗಿ ಈ ಸೇವೆಯನ್ನು ಮಾಡುತ್ತಾ ಬಂದಿರುತ್ತಾರೆ ಧರ್ಮಗುರುಗಳು ತಮ್ಮ ಅರ್ಥಪೂರ್ಣ ಸಂದೇಶದಲ್ಲಿ ಹಿರಿಯ ನಾಗರಿಕರ ಕೆಲವು ವಿಶೇಷ ಸಾಧನೆಗಳನ್ನು ಗುಣಗಾನ ಮಾಡಿದರು ಆನಂತರ ಅವರಿಗೆ ನೆನಪಿನ ಕಾಣಿಕೆ ಕಾಣಿಕೆ ನೀಡಿ ಗೌರವಿಸಲಾಯಿತು . 

ವೇದಿಕೆಯಲ್ಲಿ  ಸಂತ ವಿನ್ಸೆಂಟ್ ಪೌಲ್ ಸಭೆಯ ಮಂಗಳೂರು ಧರ್ಮ ಪ್ರಾಂತ್ಯದ ಅಧ್ಯಕ್ಷರಾದ ಜ್ಯೋ ಕುವೆಲ್ಲೊ, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಸಿಪ್ರಿಯನ್ ಡಿಸೋಜ, ಕಾರ್ಯದರ್ಶಿಯವರಾದ ಶೈಲಾ ಬರ್ಬೋಜಾ, ಸಂಯೋಜಕರಾದ ಪ್ರಕಾಶ್ ವಾಸ್, ನಿರ್ಮಲ ಕಾನ್ವೆಂಟಿನ ಸುಪೀರಿಯರ್ ಭಗಿನಿ ಇಡೊಲಿನ್ ಉಪಸ್ಥಿತರಿದ್ದರು.

ವಿನ್ಸೆಂಟ್ ಪಾಲ್ ಸಭೆಯ ಲೊರೆಟ್ಟೋ ಘಟಕದ ಅಧ್ಯಕ್ಷರಾದ ಹಾಗೂ ಆಮ್ಟಾಡಿ ಪಂಚಾಯತ್ ಸದಸ್ಯರಾದ ಫೆಲಿಕ್ಸ್ ಡಿಸೋಜಾ ಸ್ವಾಗತಿಸಿದರು.

ಸಾಮಾಜಿಕ ಅಭಿವೃದ್ಧಿಯ ಸಂಯೋಜಕರಾದ ಪ್ರವೀಣ್ ಪಿಂಟೊ ವಂದಿಸಿದರು, ವಿಕ್ಟೊರಿಯಾ ಕಾರ್ಯಕ್ರಮ ನಿರೂಪಿಸಿದರು