ವರದಿ ರಾಯಿ ರಾಜಕುಮಾರ ಮೂಡುಬಿದಿರೆ 


ನೆತ್ತೋಡಿ: ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಮೋ ಫ್ರೆಂಡ್ಸ್ ಕ್ಲಬ್ (ರಿ) ನೆತ್ತೋಡಿ ಇದರ ವತಿಯಿಂದ ಗೋಳಿಕಟ್ಟೆಯಲ್ಲಿ 17ನೇ ವರುಷದ ಸಾವ೯ಜನಿಕ ಮೊಸರು ಕುಡಿಕೆ ಉತ್ಸವದಂಗವಾಗಿ ಮುದ್ದುಕೃಷ್ಣ ಹಾಗೂ ವಿವಿಧ ಆಟೋಟ ಸ್ಪಧೆ೯ಗಳು ನಡೆಯಿತು.

 ಹನ್ನೆರಡುಕವಲು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ  ಪ್ರಧಾನ ಅಚ೯ಕ ಸದಾಶಿವ ಭಟ್ ಕಾಯ೯ಕ್ರಮವನ್ನು ಉದ್ಘಾಟಿಸಿದರು. ನಮೋ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ಕಿರಣ್ ಸುವಣ೯ ಅಧ್ಯಕ್ಷತೆ ವಹಿಸಿದ್ದರು.

 ಬಿಜೆಪಿ ಮಂಡಲದ ಅಧ್ಯಕ್ಷ ದಿನೇಶ್ ಪುತ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.

ಪುರಸಭಾ ಸದಸ್ಯೆ ಧನಲಕ್ಷ್ಮೀ, ಹಿಂದುಳಿದ ವಗ೯ಗಳ ಮೋಚಾ೯ ಅಧ್ಯಕ್ಷ ಪ್ರದೀಪ್ ಕುಮಾರ್ ವಾಲ್ಪಾಡಿ, ಬಿಜೆಪಿ ಯುವ ಮೋಚಾ೯ದ ಅಧ್ಯಕ್ಷ ಕುಮಾರ್ ಪ್ರಸಾದ್ ಕೊಟ್ಟಾರಿ,  ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಉದ್ಯಮಿಗಳಾದ ಸಂತೋಷ್ ಪೂಜಾರಿ ಕಾಂಜರಡ್ಡ, ಗಣೇಶ್ ಸುವಣ೯, ಮೋಹನ್ ಸುವಣ೯ ಕೆಳಗಿನ ಕೊಡಂಗೆ ಭಾಗವಹಿಸಿ ವಿವಿಧ ಸ್ಪಧೆ೯ಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿದರು.

ಫಲಿತಾಂಶ : ಹಗ್ಗಜಗ್ಗಾಟದಲ್ಲಿ ಎನ್.ಎಫ್.ಸಿ ನೆತ್ತೋಡಿ ಪ್ರಥಮ, ಸೂಪರ್ ಬಾಯ್ಸ್ ಮಾರೂರು ದ್ವಿತೀಯ ಬಹುಮಾನ. ವಾಲಿಬಾಲ್ ಪಂದ್ಯಾಟದಲ್ಲಿ ಸೂಪರ್ ಬಾಯ್ಸ್ ಬಿ. ಪ್ರಥಮ ಹಾಗೂ ಸೂಪರ್ ಬಾಯ್ಸ್ ಎ. ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ.