ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದರೆ:  ಜೈನ ಧರ್ಮ ಹಿತರಕ್ಷಣಾ ಸಮಿತಿಯ ವತಿಯಿಂದ ಅಗಸ್ಟ್ 19ರಂದು ಬೆಳಿಗ್ಗೆ ಮೂಡುಬಿದಿರೆ ತಹಸೀಲ್ದಾರರ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿಯನ್ನು ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ಸಂದೇಶ ಪಿ ಜಿ ಅವರು ಉಪಸ್ಥಿತರಿದ್ದರು. 

ಧರ್ಮ ರಕ್ಷಣಾ ಸಮಿತಿಯ ಶ್ರಾವಕ ಬಂಧುಗಳು ಮೂಡುಬಿದಿರೆ ಸಾವಿರ ಕಂಬದ ಬಸದಿಯಿಂದ ನೂರಾರು ಸಂಖ್ಯೆಯಲ್ಲಿ ಒಟ್ಟು ಸೇರಿ ಮೌನ ಮೆರವಣಿಗೆಯ ಮೂಲಕ ತಾಲೂಕು ಕಚೇರಿಗೆ ಆಗಮಿಸಿದರು. ತಾಲೂಕು ಕಚೇರಿಯ ಎದುರಿನ ಪ್ರದೇಶದಲ್ಲಿ ಒಟ್ಟು ಸೇರಿದ ಶ್ರಾವಕರನ್ನು ಕೃಷ್ಣರಾಜ ಹೆಗ್ಡೆ ಉದ್ದೇಶಿಸಿ ಮಾತನಾಡಿ ನಾವೆಲ್ಲ ಹಿಂದೂ ಧರ್ಮ ಪ್ರತಿಪಾದಕರಾಗಿದ್ದು. ಸರ್ವಧರ್ಮ ಸಹಿಷ್ಣುತೆ, ಸಹೋದರತ್ವ, ಸಮಾನತೆಗಳ ಪ್ರತಿಪಾದಕ ಪವಿತ್ರ ಜೈನ ಮುನಿ ಪರಂಪರೆ, ಧರ್ಮಿಯರ, ಧರ್ಮಾಧಿಕಾರಿ ಹೆಗ್ಗಡೆಯವರ, ವಿರುದ್ಧ ನಡೆಯುತ್ತಿರುವ ಅಶಾಂತ, , ವೇಷದ, ಸಮಾಜ ವಿರೋಧಿ ಭಾವನೆಯನ್ನು ವಿರೋಧಿಸಿ ನ್ಯಾಯಕ್ಕಾಗಿ ಶಾಂತಿಯುತ ಮೆರವಣಿಗೆಯಲ್ಲಿ ಬಂದಿರುತ್ತೇವೆ. ಅಧಿಕಾರಿ ವರ್ಗದಿಂದ ಶಾಂತಿಯುತವಾಗಿ ಅಲ್ಪಸಂಖ್ಯಾತರಾದ ನಾವು ನ್ಯಾಯವನ್ನು ಅಪೇಕ್ಷಿಸುತಿದ್ದೇವೆ. ಎಂದು ಮನವಿಯ ವಿಚಾರವನ್ನು ಓದಿ ಹೇಳಿದ ತರುವಾಯ ಚೌಟರ ಅರಮನೆಯ ಕುಲದೀಪ್ ಎಂ, ಮಾಜಿ ಸಚಿವ ಅಭಯ ಚಂದ್ರ ಜೈನ್, ನ್ಯಾಯವಾದಿ ಬಾಹುಬಲಿ ಪ್ರಸಾದ್, ಜಗದೀಶ್ ಅಧಿಕಾರಿ, ಶಿರ್ತಾಡಿ ಸಂಪತ್ ಸಾಮ್ರಾಜ್ಯ ಜೈ ಮಿಲನ್ ಅಧ್ಯಕ್ಷ ಮಹೇಂದ್ರವರ್ಮ, ದರೆಗುಡ್ಡೆ ಸುಭಾಷ್ ಚಂದ್ರ ಚೌಟ, ಉದ್ಯಮಿ ಶೈಲೇಂದ್ರ ಎ, ವಕೀಲ ಶಾಂತಿಪ್ರಸಾದ್ ಹೆಗ್ಡೆ ಇತ್ಯಾದಿ ಮುಖಂಡರುಗಳು, ಎಲ್ಲಾ ಶ್ರಾವಕ ಬಂಧುಗಳ ಸಹಿ ಇರುವ ಮನವಿಯನ್ನು ತಹಸೀಲ್ದಾರ್ ಶ್ರೀಧರ್ ಎಂ ಅವರಿಗೆ ಅರ್ಪಿಸಿ, ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಕಳುಹಿಸುವಂತೆ ವಿನಂತಿಸಿದರು.