ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ರಾಷ್ಟ್ರೀಯ ಹೆದ್ದಾರಿ 169 ರ ಮಾರ್ಪಾಡಿ ಗ್ರಾಮದಲ್ಲಿ ವಿಶೇಷ ಭೂ ಸ್ವಾಧೀನ ಅಧಿಕಾರಿ ಮತ್ತು ಸಿಬ್ಬಂದಿ ಬಳಗದಿಂದ ಸರಕಾರಿ ಭೂಮಿ ಇದ್ದರೂ ಅದನ್ನು ಬಿಟ್ಟು ಕಾನೂನುಬಾಹಿರವಾಗಿ ಅನಗತ್ಯ ತಿರುವುಗಳನ್ನು ಸೃಷ್ಟಿಸಿ ಬಡವರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದು ಭದ್ರ ಸಾ ಮಿಲ್ ಕಾರ್ಮಿಕರು, ಆಡಳಿತ ವರ್ಗ ದೂರಿದ್ದಾರೆ.
ಫೆಬ್ರವರಿ 14 ರಂದು ಪತ್ರಿಕಾಗೋಷ್ಠಿಯಲ್ಲಿ ಸಂಪೂರ್ಣ ದಾಖಲೆಗಳನ್ನು ಪ್ರಸ್ತುತಪಡಿಸಿದ ಅಬ್ದುಲ್ ಖಾದರ್, ಮಹಮ್ಮದ್ ಹನೀಫ್, ವಿಶ್ವ ಮೂರ್ತಿ ಆಚಾರ್ಯರು ಅವರ ಸ್ಥಳದ ಎದುರಿಗೆ ಸುಮಾರು 45 ಮೀಟರ್ ಗಳಷ್ಟು ಸರಕಾರಿ ಭೂಮಿ ಇದ್ದರೂ ಅದನ್ನು ಹೊರತುಪಡಿಸಿ ರಾತ್ರೋ ರಾತ್ರಿ ಡ್ರೋನ್ ಇತ್ಯಾದಿಗಳಿಂದ ಸ್ಥಳ ಗುರುತು ಮಾಡಿ ಮೇಲ್ಕಂಡವರು ಇಲ್ಲದ ಸಂದರ್ಭದಲ್ಲಿ ಭದ್ರಾ ಸ್ವಾಮೀಲ್ ಒಳಗೆ ಅಕ್ರಮ ಪ್ರವೇಶಿಸಿ ಕಾರ್ಮಿಕರಿಗೆ ಹೆದರಿಸುವ, ಗದರಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. 2013-14 ರಲ್ಲಿ 3 ಎ ನಕ್ಷೆ ಪ್ರಕಾರ ಸರಕಾರಿ ಭೂಮಿಯಲ್ಲಿಯೇ ಹೋಗುವುದಕ್ಕೆ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲು ಸರ್ವೇ ನಂಬರ್ 204, 206,207,240/2ಎ ಗಳನ್ನು ಗುರುತಿಸಿರುವುದನ್ನು ಬಳಸದೆ ಮೊನ್ನೆ ಫೆಬ್ರವರಿ 7ರಂದು ಅನಧಿಕೃತವಾಗಿ ಭದ್ರಾ ಸಾ ಮಿಲ್ ಹಾಗೂ ವಿಶ್ವ ಮೂರ್ತಿ ಆಚಾರ್ಯರ ಮನೆಗೆ ಗುರುತು ಮಾಡಿ ಹೋಗಿರುತ್ತಾರೆ ಎಂದು ಆಪಾದಿಸಿರುತ್ತಾರೆ.
ಈಗಾಗಲೇ ಸಂಬಂಧಪಟ್ಟವರ ಸ್ಥಳ ಅತಿಕ್ರಮಣದ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರೂ ಕೂಡ ಅನಧಿಕೃತವಾಗಿ ಪ್ರವೇಶಿಸಿ ತೊಂದರೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿರುತ್ತಾರೆ. ಮೇಲ್ಕಂಡ ಸಾ ಮಿಲ್ ನ ಎದುರಿಗೆ 47 ಮೀಟರ್ ಗಳಷ್ಟು ಸರಕಾರಿ ಪ್ರದೇಶವೇ ಇದ್ದು ಅದನ್ನು ಅಕ್ರಮವಾಗಿ ಒಳಗೆ ಹಾಕಿಕೊಂಡಿರುವದನ್ನು ಬಿಡಿಸಿ ಸರಕಾರ ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ಹೆಚ್ಚು ಖರ್ಚಿಲ್ಲದೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಾಧ್ಯ ಇದೆ. ಅದನ್ನು ಬಿಟ್ಟು ಕಾನೂನುಬಾಹಿರವಾಗಿ ರಾತ್ರೊ ರಾತ್ರಿ ಬಂದು ಹೆದರಿಸುವ, ಗದರಿಸುವ ಕೆಲಸಮಾಡುತ್ತಿದ್ದಾರೆ. ಈ ವಿಚಾರದಲ್ಲಿ 2013-14 ರ ನಕ್ಷೆಯನ್ನು ಬೇಕಾದಂತೆ ತಿರುಚಿ ಹಣ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆಪಾದಿಸಿದ್ದಾರೆ.
ಈಗಾಗಲೇ ಕೆಲವು ಸ್ಥಾಪಿತ ಹಿತಾಸಕ್ತಿಗಳು ಕಳೆದುಕೊಂಡ 5-10 ಸೆಂಟ್ಸ್ ಜಾಗಕ್ಕೆ ಲಕ್ಷ-ಕೋಟಿಯನ್ನು ಎಣಿಸಿದ್ದಾರೆ.
ಸ್ವತಃ ಜಿಲ್ಲಾಧಿಕಾರಿಗಳು 2024 ಅಕ್ಟೋಬರ್ 18 ರಂದು ಸರಕಾರಿ ಜಮೀನಿನಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಮುಂದುವರಿಸಲು ಸೂಚಿಸಿದ್ದರೂ, ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಪಾಲಿಸದ ಭೂಸ್ವಾಧೀನ ಅಧಿಕಾರಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನಗತ್ಯ ತಿರುವು ನಿರ್ಮಿಸಿ ಖಾಸಗಿ ಸ್ಥಳ ಹೊಡೆಯಲು ನಡೆಸಿದ ಹುನ್ನಾರಕ್ಕೆ ದಾಖಲೆ.