ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಪರೀಕ್ಷಾಂಗ ಕುಲಸಚಿವರು ಹಾಗೂ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗಗಳ ಡೀನ್ ಹಾಗೂ ಮುಖ್ಯಸ್ಥರಾದ ವಿನಯಚಂದ್ರರವರಿಗೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿಯನ್ನು ನೀಡಿದೆ. ಈ ಮನ್ನಣೆಯು ಅವರ ಸಂಶೋಧನಾ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳು ಮತ್ತು ಶೈಕ್ಷಣಿಕ ಉತ್ಕೃಷ್ಟತೆಗೆ ಸಾಕ್ಷಿಯಾಗಿದೆ.

“ಪ್ರೊಗ್ರೆಶನ್ ಇನ್ ಇ-ವೋಟಿಂಗ್ ಸಿಸ್ಟಮ್: ಮಾಡಿಫೈಡ್ ಬ್ಲಾಕ್ಚೈನ್ ಬೇಸ್ಡ್ ಕಿಫ್ಟೋಗ್ರಾಫಿಕ್ ಅಲ್ಗಾರಿಥಮ್ಸ್ ಫಾರ್ ಸೆಕ್ಯೂರ್ಡ್ ಇ-ವೋಟಿಂಗ್” ಎಂಬ ಶೀರ್ಷಿಕೆಯ ಅವರ ಡಾಕ್ಟರೇಟ್ ಪ್ರಬಂಧವು ಬ್ಲಾಕ್‌ಚೈನ್ ಮತ್ತು ಕ್ರಿಪ್ಟೋಗ್ರಫಿ ತಂತ್ರಜ್ಞಾನವನ್ನು ಬಳಸಿಕೊಂಡು ಎಲೆಕ್ಟ್ರಾನಿಕ್ ಮತದಾನ ವ್ಯವಸ್ಥೆಗಳನ್ನು ಸುರಕ್ಷಿತಗೊಳಿಸುವಲ್ಲಿ ನವೀನ ಪ್ರಗತಿಯನ್ನು ಪರಿಶೋಧಿಸುತ್ತದೆ. ಶ್ರೀನಿವಾಸ ವಿಶ್ವವಿದ್ಯಾನಿಲಯದ ಡಾ| ಸುರೇಶ ಡಿ. ಹಾಗೂ ಮಂಗಳೂರಿನ ಎಜೆಇಐಟಿಯ ಪ್ರಾಧ್ಯಾಪಕರಾದ ಡಾ| ಕೃಷ್ಣ ಪ್ರಸಾದ್ ಕೆ ಇವರುಗಳು ಮಾರ್ಗದರ್ಶನ ನೀಡಿರುತ್ತಾರೆ.
ಡಾ| ವಿನಯಚಂದ್ರರವರು ತಮ್ಮ ಸಂಶೋಧನೆಯ ಸಂದರ್ಭದಲ್ಲಿ 22 ಸಂಶೋಧನಾ ಪ್ರಬಂಧಗಳನ್ನು ಪೀರ್-ರಿವ್ಯೂಡ್ ಅಂತರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸಿದ್ದಾರೆ, ಇದರಲ್ಲಿ 4 ಸ್ಕೋಪಸ್-ಇಂಡೆಕ್ಸ್ಡ್ ಪ್ರಕಟಣೆಗಳು ಸೇರಿವೆ. ಮಾತ್ರವಲ್ಲದೆ ಅವರು 4 ಕ್ಕೂ ಹೆಚ್ಚು ರಾಷ್ಟ್ರೀಯ ಮಟ್ಟದ ಸಮ್ಮೇಳನಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುತ್ತಾರೆ ಮತ್ತು ಸಂಪಾದಿಸಿದ ಪುಸ್ತಕಗಳಲ್ಲಿ 4 ಅಧ್ಯಾಯಗಳನ್ನು ಬರೆದಿದ್ದಾರೆ ಹಾಗೂ ಒಂದು ಪೇಟೆಂಟ್ ಗೆ ಅರ್ಜಿ ಸಲ್ಲಿಸಿರುತ್ತಾರೆ. ಇವರು ಬರೆದ ಒಂದು ಸಂಶೋಧನಾ ಲೇಖನಕ್ಕೆ ಭಾರತ ಸರಕಾರದಿಂದ ಕಾಪಿರೈಟ್ ಲಭಿಸಿರುತ್ತದೆ.
ಸಂಶೋಧನಾ ಕ್ಷೇತ್ರಕ್ಕೆ ಅವರು ನೀಡಿದ ಗುರುತಿಸಿ, ಅವರಿಗೆ ಶ್ರೀನಿವಾಸ್ ವಿಶ್ವವಿದ್ಯಾಲಯವು 2023 ರಲ್ಲಿ ‘ಅತ್ಯುತ್ತಮ ಸಂಶೋಧಕ ನೀಡಿ ಗೌರವಿಸಿದೆ. ಇದಲ್ಲದೆ, ಅವರು 2020 ರಲ್ಲಿ ಶ್ರೀನಿವಾಸ ವಿಶ್ವವಿದ್ಯಾನಿಲಯದ ಐಇಇಇ ವಿದ್ಯಾರ್ಥಿ ಶಾಖೆಯು ಪಿಎಚ್‌ಡಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಪೇಪರ್ ಪ್ರೆಸೆಂಟೇಶನ್ ಸ್ಪರ್ಧೆಯಲ್ಲಿ 'ಅತ್ಯುತ್ತಮ ಪೇಪರ್ ಪ್ರಶಸ್ತಿಯನ್ನು ಪಡೆದಿರುತ್ತಾರೆ. ತಮ್ಮ ಅಧ್ಯಯನದ ಸಂದರ್ಭದಲ್ಲಿ ಅವರು ಶ್ರೀನಿವಾಸ ವಿಶ್ವವಿದ್ಯಾನಿಲಯದ ಐಇಇಇ ವಿದ್ಯಾರ್ಥಿ ಶಾಖೆಯ ಅಧ್ಯಕ್ಷರಾಗಿ ಸಂಶೋಧನೆಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ. ಇವರು ಸಂತ ಫಿಲೋಮಿನಾ ಕಾಲೇಜಿನ ಕಂಪ್ಯೂಟರ್ ಅಪ್ಲಿಕೇಶನ್ವಿಭಾಗದಲ್ಲಿ ವಿವಿಧ ಹುದ್ದೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚಿನ ಸೇವಾನುಭವವನ್ನು ಹೊಂದಿರುತ್ತಾರೆ.