ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಪೊನ್ನೆಚಾರಿ ವೆಂಕಟ್ರಮಣ ದೇವಾಲಯದ ಬಳಿಯ ಸೇತುವೆ ಪ್ರದೇಶ ಪರಿಸರದ ಮೂರು ಬಹು ಮಹಡಿ ಕಟ್ಟಡದ ಜನರಿಗೆ ಕೊಳಚೆ ನೀರು ಬಿಡುವ ತಾಣವಾಗಿದೆ. ಈ ಬಗ್ಗೆ ಸ್ಥಳೀಯರು ಸಾಕಷ್ಟು ಬಾರಿ ಪುರಸಭೆ, ತಹಸಿಲ್ದಾರ್, ಜಿಲ್ಲಾಡಳಿತ, ಶಾಸಕರ ಗಮನಕ್ಕೆ ತಂದಿದ್ದರೂ ಈ ತನಕ ಯಾವುದೇ ಪರಿಹಾರ ಮಾಡಿರುವುದಿಲ್ಲ ಎಂದು ಹತ್ತಿರದ ಎಲ್ಲ ನಿವಾಸಿಗಳು ದೂರಿದ್ದಾರೆ. ಅಲ್ಲದೆ ಈ ತನಕದ ದಾಖಲೆಗಳನ್ನು ಒದಗಿಸಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಈ ಕೊಳಚೆ ನೀರು ಶೇಖರವಾಗಿರುವ ಪ್ರದೇಶದಲ್ಲಿರುವ ಕೊಳವೆ ಬಾವಿಗಳಿಂದ ನೀರನ್ನು ನಾಗರಿಕರಿಗೆ ಪುರಸಭೆ ಒದಗಿಸುತ್ತದೆ. ಈ ಪರಿಸರದಲ್ಲಿ ವಾಹನದಲ್ಲಿ ಹೋಗುವವರು ಎಸೆಯುವ ಕಸ, ಕಶ್ಮಲ, ಗಳಿಂದ ಇಡೀ ಪರಿಸರದಲ್ಲಿ ದುರ್ನಾತ ಬೀರುತ್ತಿದೆ. ನಡೆದಾಡಲು ಅಸಾಧ್ಯದ ಪರಿಸ್ಥಿತಿ. ಕಲಿತ ವ್ಯಕ್ತಿಗಳೇ , ನಾಗರಿಕರು ಎಂದು ಕರೆಸಿಕೊಳ್ಳುವವರೇ ಈ ರೀತಿ ವರ್ತಿಸುತ್ತಿರುವ ಬಗ್ಗೆ ಅನಕ್ಷರಸ್ಥರೇ ಆಡಿಕೊಳ್ಳುತ್ತಿದ್ದಾರೆ, ಎಂತಹಾ ವಿಪರ್ಯಾಸ.
ಪರಿಸರದ ಮಂದಿಯ ದೂರು, ದಾಖಲೆ
ಪೊನ್ನೆಚ್ಚಾರಿ ಸೇತುವೆಗೆ ಹಾದು ಹೋಗುವ ಕಾಲುವೆಗೆ ಹತ್ತಿರ ಇರುವ ವಸತಿ ಸಂಕೀರ್ಣದ (ವಿಶ್ವಾಸ್ ತ್ರಿಭುವನ್) ಶೌಚಾಲಯದ ಕೊಳಚೆ ನೀರು ಬಿಡುತ್ತಿರವ ಬಗ್ಗೆ ಕಳೆದ 2019 ರಿಂದ ಸ್ಥಳೀಯ ತಹಶೀಲ್ದಾರರು ಶಾಸಕರಿಗೆ, ಪುರಸಭೆ ಅಧಿಕಾರಿಗಳಿಗೆ, ಹಾಗು ಆರೋಗ್ಯ ಇಲಾಖೆ ಗೆ ದೂರು ಕೊಟ್ಟರು ಯಾವುದೇ ಕ್ರಮ ಕೈಗೊಂಡಿಲ್ಲ ಈಗ ಹೊಸದಾಗಿ 4 ಸಂಕೀರ್ಣದ (ವಿಶ್ವಾಸ್ ಪ್ಯಾರಡೈಸ್ ಹಾಗು ನಿಸರ್ಗ ಪ್ಯಾಲೇಸ್). ನೀರನ್ನು ಅದೇ ಕಾಲುವೆಗೆ ಬಿಡುತ್ತಿದ್ದಾರೆ. ಇದೇ ಕಾಲುವೆಗೆ ತಾಗಿಕೊಂಡು ಪುರಸಭೆ 3 ಕೊಳವೆ ಬಾವಿ ಇದೆ ಇದರಿಂದಲೇ ಮೂಡಬಿದಿರೆ ಪೇಟೆ ಮಾಸ್ತಿಕಟ್ಟೆ ಗೆ ನೀರು ಸರಬರಾಜು ಮಾಡುತ್ತಿದ್ದಾರೆ. ಸ್ಥಳೀಯ ಮನೆಗಳ ಬಾವಿ ನೀರು ಕುಡಿಯಲು ಯೋಗ್ಯವಿಲ್ಲ ಜೊತೆಗೆ ಸೊಳ್ಳೆ ಕಾಟ, ಉಸಿರಾಡಲು ಯೋಗ್ಯ ಇಲ್ಲದ ಪರಿಸರ ಆಗಿದೆ.