ಮೂಡುಬಿದಿರೆ: ಬಡಗಣ ಬಸದಿ ರಥೋತ್ಸವ ಧಾರ್ಮಿಕ ಸಭೆ ಫೆ.10 ರಂದು ಸೋಮವಾರ ರಾತ್ರಿ 7.30ಕ್ಕೆ ಬಡಗ ಬಸದಿ ಹೊರಾoಗಣದ ವೇದಿಕೆಯಲ್ಲಿ 20ನೇ ಶತಮಾನದ ಪ್ರಥಮಾಚಾರ್ಯ 108 ಚಾರಿತ್ರ ಚಕ್ರವರ್ತಿ ಶಾಂತಿಸಾಗರ ಆಚಾರ್ಯಪದ ರೋಹಣ ಶತಾಬ್ದಿ ವರ್ಷ ಹಾಗೂ ಆಚಾರ್ಯ ವಿದ್ಯಾನಂದ ಮುನಿ ಮಹಾರಾಜ್ ಜನ್ಮ ಶತಾಬ್ದಿ ವರ್ಷ ದೀಪ ಬೆಳಗಿಸಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಉದ್ಘಾಟನೆ ಮಾಡಿ ಅಧ್ಯಕ್ಷ ತೆ, ವಹಿಸಿ ಆಶೀರ್ವಚನ ನೀಡಿ ಶ್ರೀ ದಿಗಂಬರ ಜೈನ ಮಠ ಗೆ 1928 ರ ಸುಮಾರಿಗೆ ಭೇಟಿ ನೀಡಿ ಜೈನ ಕಾಶಿಯಲ್ಲಿ ಸುಮಾರು ಎರಡು ತಿಂಗಳು ತಪ ಆಚರಿಸಿ ಧವಲಗ್ರಂಥ ಮೂಲ ಕನ್ನಡದಿಂದ ದೇವನಾಗರಿ ಲಿಪಿಗೆ ಭಾಷಾoತರ ಆಗುವಲ್ಲಿ ಆಚಾರ್ ರ ಪ್ರೇರಣೆ ಸ್ಮರಣಿಯ ಎಂದು ಸ್ವಾಮೀಜಿ ತಿಳಿಸಿ ದಕ್ಷಿಣ ಉತ್ತರ ಭಾರತ ವಿಹಾರ ಮಾಡಿ ಧರ್ಮ ಪ್ರಭಾವ ಮಾಡಿದವರು. ಶಾಂತಿಸಾಗರ ಮುನಿಮಹಾರಾಜ್ ಎಂದು ಭಕ್ತಿಯಿಂದ ಸ್ಮರಿಸಿದರು. 108 ಆಚಾರ್ಯ ವಿದ್ಯಾನಂದರು ವಿಶ್ವ ಸಂತ ಅವರ ಕಾಲದಲ್ಲಿ ಮೂರ್ತಿ ಪ್ರತಿಷ್ಠಾಪನೆ ಸಂಶೋಧನಾ ಕೇಂದ್ರ ಸ್ಥಾಪನೆ ದೇಶದ ವಿವಿಧ ಕ್ಷೇತ್ರಗಳಲ್ಲಿ ನಡೆಯಿತು. ಮೂಡುಬಿದಿರೆ ಮಹಾವೀರ ಭವನ ರಮಾರಾಣಿ ಶೋಧ ಸಂಸ್ಥಾನ ನಿರ್ಮಾಣಗೊಳ್ಳುವಲ್ಲಿ ಪ್ರೇರಣೆ ನೀಡಿದವರು. ಭಾರತ ದದ್ಯಾoತ ಧಾರ್ಮಿಕ ಉಪದೇಶ ನೀಡಿ ಸಮಾಜದಲ್ಲಿ ಧರ್ಮ ಜಾಗೃತಿ ಉಂಟು ಮಾಡಿದರು ಎಂದು ತಿಳಿಸಿದರು. ರಥಸಮ ವಸರಣ ಪ್ರತೀಕ ಧರ್ಮೋಪದೇಶ ಮಂಟಪ ರಥೋತ್ಸವ ಅಂದರೆ ಭಗವಂತರ ವಿಹಾರ ಭಗವಂತ ಹೋದಡೆ ಅಜ್ಞಾನ ದೂರವಾಗುದು ಲೋಕ ಕಲ್ಯಾಣ ವಾಗುದು ಎಂದರು. ಈ ಸಂಧರ್ಭ ಸ್ವಾಮೀಜಿ ರಥೋತ್ಸವಕ್ಕೆ ಸಹಕರಿಸಿದ ಸೇವಾ ದಾತಾರರಿಗೆ ಹರಸಿದರು.
ವಿಜೇತ್ ಯು ಎಸ್,ಎ, ಡಾ ಎಸ್ ಪಿ ವಿದ್ಯಾಕುಮಾರ್, ಪುರೋಹಿತ ಕಿಶೋರ್ ಇಂದ್ರ, ವೀರೇಂದ್ರ ಕಾಂಬ್ಳಿ, ದಿವ್ಯಾ ವೀರೇಂದ್ರ, ರಶ್ಮಿ,ಇವರನ್ನು ಶಾಲು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಧವಲತ್ರಯ ಜೈನ ಕಾಶಿ ಟ್ರಸ್ಟ್ (ರಿ) ಆಶ್ರಯದಲ್ಲಿ ಶ್ರೀ ದೇವಿ ನೃತ್ಯ ತಂಡ ಹಾಗೂ ಮಕ್ಕಿ ಮನೆ ಕಲಾವಿದರು ವತಿಯಿಂದ ವೈವಿಧ್ಯೆಮಯ ಭಾರತೀಯ ನೃತ್ಯ ಕಾರ್ಯಕ್ರಮ ನೆರವೇರಿತು. ಅತಿಥಿಗಳಾಗಿ ಕೆ ಪಿ ಜಗದೀಶ್ ಅಧಿಕಾರಿ, ಅಮೇರಿಕಾ ಕ್ಯಾಲಿಫೋರ್ನಿಯದ ವಿಜೇತ್ ಮೇರಾಠ ನ ನೀರಜ್ ಜೈನ್ -ಶ್ವೇತಾ ಜೈನ್, ವಕೀಲರು ,ಮೂಡುಬಿದಿರೆ, ಮುಕ್ತೇಸರರಾದ ಪಟ್ಣ ಶೆಟ್ಟಿ ಸುದೇಶ್ ಕುಮಾರ್ ಆದರ್ಶ್ ಮೂಡುಬಿದಿರೆ, ಭರತ್ ಇಂದ್ರ, ವೀರೇಂದ್ರ ಇಂದ್ರ, ಬಾಹುಬಲಿ ಪ್ರಸಾದ್ ಶ್ರೀ ಮಠದ ವ್ಯವಸ್ಥಾಪಕ ಸಂಜಯಂತ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ನೃತ್ಯ ಕಲಾವಿದರಿಗೆ ನೃತ್ಯ ಸಂಯೋಜನೆ ಮಾಡಿದ ನಯನಾರಿಗೆ ಸುದೇಶ್ ಮಕ್ಕಿ ಮನೆ ಇವರಿಗೆ ಶೈಲೇoದ್ರ ಆರೋಹ ನೀಡಿದ ನಗದು ಪುರಸ್ಕಾರ ನೀಡಿ ಧವಳತ್ರಯ ಜೈನ ಕಾಶಿ ಟ್ರಸ್ಟ್ ರಿ ವತಿಯಿಂದ ಸ್ವಾಮೀಜಿ ನೃತ್ಯ ಸೇವೆ ಮಾಡಿದ ಎಲ್ಲಾ ಹಿರಿಕಿರಿಯ ಕಲಾವಿದರನ್ನು ಸ್ಮರಣಿಕೆ ಮಂತ್ರಾಕ್ಷತೆ ನೀಡಿ ಹರಸಿ ಆಶೀರ್ವಾದ ಮಾಡಿದರು.
ಕಾರ್ಯಕ್ರಮ ನಿರ್ವಹಣೆ ಡಾ. ಪ್ರಭಾತ್ ಬಲ್ನಾಡ್ ನಿರ್ವಹಿಸಿದರು. ಪ್ರಾಂಶುಪಾಲರು ಡಾ ಎಸ್ ಪಿ ವಿದ್ಯಾಕುಮಾರ್ ವಂದನಾರ್ಪಣೆ ಮಾಡಿದರು.