ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: 73 ವರ್ಷ ವಯಸ್ಸಿನ ಶೋಭಾ ಪಿ ಮರಾಠೆ ಇವರು ತಮ್ಮ  ಮನೆಯಲ್ಲಿ ಇರುವ ಹಾಗೂ ತಮ್ಮ ಪರಿಚಯದವರ ಬಳಿಯಿಂದ ಅವರ ಮನೆಯಲ್ಲಿ ಉಪಯೋಗಿಸದೆ ಇರುವ ಬ್ಲೌಸ್ ಪೀಸ್ ಹಾಗೂ ಬಿಳಿ ಬಟ್ಟೆಗಳನ್ನು ಉಪಯೋಗಿಸಿ  ಸುಮಾರು 200 ಚೀಲಗಳನ್ನು ತಾವೇ ಹೊಲಿದರು ಹಾಗೂ ಇವರಿಗೆ  ಮಾಧುರಿ ದಾಮ್ಲೆ ಅವರು ಸಹಕರಿಸಿದರು.

ಕಾರ್ತಿಕ ದೀಪೋತ್ಸವ ಸಂದರ್ಭದಲ್ಲಿ ಮೂಡುಬಿದಿರೆ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಈ ಬಟ್ಟೆಯ ಚೀಲಗಳನ್ನು ದೇವಸ್ಥಾನದ ಆಡಳಿತ ಮೊಕ್ತೇಸರರ ಧರ್ಮಪತ್ನಿ ಸ್ಮಿತಾ ಹೊಳ್ಳ ಇವರಿಗೆ  ಸೇವೆಯ ರೂಪದಲ್ಲಿ ಕೊಟ್ಟು ಎಲ್ಲರಿಗೆ ಮಾದರಿಯಾಗಿರುತ್ತಾರೆ . ಏಕ ಬಳಕೆಯ ಪ್ಲಾಸ್ಟಿಕ್ ಚೀಲ ಹಾಗೂ ಹೊಸ ಬಟ್ಟೆ ಖರೀದಿಸಿ ಚೀಲ ಹೊಲಿಯುವ ಬದಲು ಇರುವಂತಹ ಬಟ್ಟೆಗಳನ್ನು ಉಪಯೋಗಿಸಿ ಚೀಲ ತಯಾರಿಸಿದರೆ ವೆಚ್ಚವು ಕಡಿಮೆ ಇರುವ  ಬಟ್ಟೆಯನ್ನು ಮರುಬಳಕೆ ಮಾಡಿದ ಹಾಗೆ ಕೂಡ ಆಗುತ್ತದೆ ಅದೇ ರೀತಿಯಲ್ಲಿ ಪರಿಸರ ಸ್ನೇಹಿ ಕೂಡ ಒಟ್ಟಿನಲ್ಲಿ ಬಟ್ಟೆಯ ಚೀಲ ತಯಾರಿಸಿ ಉಪಯೋಗಿಸುವುದು ಏಕ ಬಳಕೆಯ ಪ್ಲಾಸ್ಟಿಕ್ ಚೀಲದ ನಿರ್ಮೂಲನೆಗೆ ಅತ್ಯುತ್ತಮ ಮಾರ್ಗ.