ಮುಂಬಯಿ, ಮಾ.12: ಗಾಯತ್ರಿ ಶಕ್ತಿಪೀಠ ಬರೋಡ ಇದರ ಅನುಯಾಯಿ, ತುಳು ಸಂಘ ಬರೋಡಾ, ಗುಜರಾತ್ ಬಿಲ್ಲವ ಸಂಘದ ಮಾತೆ ಎಣಿಸಿ ಪ್ರಸಿದ್ಧ ಸಮಾಜ ಸೇವಕಿ, ಧಾರ್ಮಿಕ ಧುರೀಣೆ ಆಗಿದ್ದು ಕಳೆದ ಆಗಸ್ಟ್‍ನಲ್ಲಿ ಸ್ವರ್ಗಿಯರಾದ ಶೋಭಾ ದಯಾನಂದ ಬೋಂಟ್ರಾ ಅವರ ಆತ್ಮಕ್ಕೆ ಸದ್ಗತಿ ಕೋರುತ್ತಾ ಗಾಯತ್ರಿ ಪರಿವಾರದ ಆದರಣೀಯ ಪ್ರಜ್ಞಾಪುತ್ರೀ ಉಮಾಬೆನ್ ಪಂಡ್ಯ ಅವರು ಗಾಯತ್ರಿ ಯಜ್ಞ, ಶಾಂತಿ ಹೋಮವನ್ನು ಕಳೆದ ಭಾನುವಾರ ಗುಜರಾತ್ ಬಿಲ್ಲವರ ಸಂಘದ ಶ್ರೀ ಬ್ರಹ್ಮಬೈದರ್ಕಳ ಸಭಾಗೃಹದಲ್ಲಿ ಅಯೋಜಿಸಿದರು.
ಇದೇ ಸಂದರ್ಭದಲ್ಲಿ ದಿವಂಗತ ಶೋಭ ದಯಾನಂದ ಬೋಂಟ್ರರವರ ಇಚ್ಛೆಯಂತೆ ಕೊಡುಗೆಯಾಗಿಸಿದ ತಮ್ಮ ಒಂದೂವರೆ ಕೋಟಿ ಬೆಲೆಬಾಳುವ ಕೊಠಡಿಗಳನ್ನು ಲಕ್ಷ್ಮೀ ಅಮ್ಮ ಕುಟೀರ ಎಂದು ಅವರ ದೊಡ್ಡಮ್ಮನ ಹೆಸರಿನಲ್ಲಿ ಗುಜರಾತ್ ಬಿಲ್ಲವರ ಸಂಘದ ಗೌರವಾಧ್ಯಕ್ಷ ದಯಾನಂದ ಬೋಂಟ್ರ ಅವರು ಗುಜರಾತ್ ಬಿಲ್ಲವ ಸಂಘಕ್ಕೆ ಕೊಡುಗೆ ನೀಡಿದರು.
ಈ ಸಂದರ್ಭದಲ್ಲಿ ಚಿರಾಗ್ ದಯಾನಂದ್ ಬೋಂಟ್ರಾ, ಸೊಸೆ ಮಾಯಾ ಚಿರಾಗ್ ಬೋಂಟ್ರಾ, ಗುಜರಾತ್ ಬಿಲ್ಲವ ಸಂಘ ಇದರ ಅಧ್ಯಕ್ಷ ವಿಶ್ವನಾಥ್ ಜಿ.ಪೂಜಾರಿ, ಪ್ರಧಾನ ಕಾರ್ಯದರ್ಶಿ ವಾಸು ವಿ.ಸುವರ್ಣ, ಖಜಾಂಚಿ ಸುದೇಶ್ ವೈ. ಕೋಟಿಯಾನ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.